ಹೈದರಾಬಾದ್‌ನಲ್ಲಿ ನಡೆದ ಸನ್‌ಬರ್ನ್ ಉತ್ಸವದಲ್ಲಿ (Sunburn fest ival) ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಧೂಳೆಬ್ಬಿಸಿದ್ದಾರೆ. ಉತ್ಸವದಲ್ಲಿ ಈ ಬಹುಬೇಡಿಕೆ ತಾರೆ ಭಾಗಿಯಾಗಿದ್ದು, ಜನರು ಆಶ್ಚರ್ಯಚಕಿತರಾದರು.
ಉತ್ಸವದ ವೇದಿಕೆಯಲ್ಲಿ ಅಲ್ಲು ಅರ್ಜುನ್ ಅವರು ಡಿಜೆ ಮಾರ್ಟಿನ್ ಗ್ಯಾರಿಕ್ಸ್ (DJ Martin Garrix) ಜೊತೆ ಸೇರಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ನಟ ಅಲ್ಲು ಅರ್ಜುನ್ ತಮ್ಮ ಪುಷ್ಪ ಚಿತ್ರದ ಊ ಅಂಟಾವಾ ಸೂಪರ್ ಹಿಟ್ ಹಾಡಿಗೆ ಸಖತ್ ಸ್ಟೆಪ್ ಹಾಕಿದರು. ಮಾರ್ಟಿನ್ ಗ್ಯಾರಿಕ್ಸ್ ಮತ್ತು ಅಲ್ಲು ಅರ್ಜುನ್ ಡ್ಯಾನ್ಸ್ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಅಲ್ಲು ಅರ್ಜುನ್ ಕಪ್ಪು ಟೀ ಶರ್ಟ್, ಕಪ್ಪು ಕಾರ್ಗೋ ಪ್ಯಾಂಟ್, ಕ್ಯಾಪ್ ಧರಿಸಿ ಸಿಂಪಲ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಇವರ ಎಂಟ್ರಿಗೆ ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ ಸ್ವಾಗತ ಕೋರಿತು. ಬಳಿಕ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜೊತೆ ಸೇರಿ ವೇದಿಕೆ ಮೇಲೆ ಧೂಳೆಬ್ಬಿಸಿದರು. ಊ ಅಂಟಾವಾ ಮಾಮ.. ಊ ಊ ಅಂಟಾವಾ ಹಾಡಿಗೆ ಮತ್ತಷ್ಟು ಮೆರುಗು ತಂದರು. ಅಲ್ಲು ಅರ್ಜುನ್ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜೊತೆ ಸೇರಿ ಭರ್ಜರಿ ಸ್ಟೆಪ್ಸ್ ಹಾಕಿದರು.
-
Response 🥵🔥 @alluarjun
— TotallyAlluArjun (@TeamTAFC) March 5, 2023 " class="align-text-top noRightClick twitterSection" data="
Hyderabad Thaggedhele - #AlluArjun pic.twitter.com/rWDvSWh7AT
">Response 🥵🔥 @alluarjun
— TotallyAlluArjun (@TeamTAFC) March 5, 2023
Hyderabad Thaggedhele - #AlluArjun pic.twitter.com/rWDvSWh7ATResponse 🥵🔥 @alluarjun
— TotallyAlluArjun (@TeamTAFC) March 5, 2023
Hyderabad Thaggedhele - #AlluArjun pic.twitter.com/rWDvSWh7AT
ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜೊತೆಗಿನ ಎರಡು ಫೋಟೋಗಳನ್ನು ನಟ ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫನ್ ನೈಟ್, ಊ ಅಂಟಾವಾ ವಿಥ್ ಡಿಜೆ ಮಾರ್ಟಿನ್ ಗ್ಯಾರಿಕ್ಸ್, ಹೈದರಾಬಾದ್ ತಗ್ಗೆದೆಲೆ ಎಮದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಸನ್‌ಬರ್ನ್ ಉತ್ಸವದ ಮೂರು ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ಗಳು ಸಖತ್ ಪಾರ್ಟಿ ಮೂಡ್ನಿಂದ ಕೂಡಿದೆ.
ಇದನ್ನೂ ಓದಿ: 'ವಿರುಷ್ಕಾ ಪವರ್ಫುಲ್ ಕಪಲ್': ಕಂಗನಾ ರಣಾವತ್ ಗುಣಗಾನ
ಅಲ್ಲು ಅರ್ಜುನ್, ಈ ಫೋಟೋ ಶೇರ್ ಮಾಡುತ್ತಿದ್ದಂತೆ, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಅದ್ಭುತ ನೋಟ, ದಕ್ಷಿಣ ಭಾರತದ ನಂ 1 ಹೀರೋ ಎಂದೆಲ್ಲಾ ಹಲವರು ಕಾಮೆಂಟ್ ಮಾಡಿದ್ದರೆ, ಹೆಚ್ಚಿನವರು ಪುಷ್ಪ 2 ಅಪ್ಡೇಟ್ ಕೊಡುವಂತೆ ಕೇಳಿದ್ದಾರೆ. ನಿಮ್ಮ ಮುಂಬರುವ ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಉಳಿದಂತೆ ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಮತ್ತು ಫೈಯರ್ ಎಮೋಜಿಗಳು ತುಂಬಿವೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">
ಇದನ್ನೂ ಓದಿ: ದೀಪಿಕಾ ಪಡುಕೋಣೆ ಹೊಗಳಿದ ವಿವೇಕ್ ಅಗ್ನಿಹೋತ್ರಿ: ಶುರುವಾಯ್ತು 'ಡಬಲ್ ಸ್ಟ್ಯಾಂಡರ್ಡ್' ಚರ್ಚೆ!
2021ರ ಡಿಸೆಂಬರ್ 17ರಂದು ತೆರೆ ಕಂಡಿದ್ದ ಪುಷ್ಪ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಮತ್ತು ನಟ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತು. ಅದರ ಅದರ ಮುಂದುವರಿದ ಭಾಗ ನಿರ್ಮಾಣ ಹಂತದಲ್ಲಿದೆ. ನಟಿ ಸಮಂತಾ ರುತ್ ಪ್ರಭು ಊ ಅಂಟಾವಾ ಐಟಂ ಸಾಂಗ್ನಲ್ಲಿ ಸಖತ್ ಸ್ಟೆಪ್ ಹಾಕಿ ಜನಪ್ರಿಯತೆ ಹೆಚ್ಚಿಸಿಕೊಂಡರು.