ಬಾಲಿವುಡ್ನ ಮೋಹಕ ತಾರೆ ಐಶ್ವರ್ಯಾ ರೈ ಬಚ್ಚನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 49ನೇ ವರ್ಷಕ್ಕೆ ಕಾಲಿಟ್ಟರೂ ಇನ್ನೂ ಚಿರಯವ್ವನೆಯಂತೆ ಸಿನಿಕ್ಷೇತ್ರದಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿರುವ ನಟಿ ಈಕೆ. ಮಂಗಳೂರಿನ ಚೆಲುವೆಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
![aishwarya rai bachchan celebrating 49th birthday](https://etvbharatimages.akamaized.net/etvbharat/prod-images/16799495_aish-1.jpg)
ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಐಶ್ವರ್ಯಾ ರೈ ಅವರಿಗೆ ವಿಶ್ವಸುಂದರಿ ಕಿರೀಟ ದೊರೆತ ಕ್ಷಣದಿಂದ ಅವರ ಅದೃಷ್ಠದ ಬಾಗಿಲು ತೆರೆದುಕೊಂಡಿತ್ತು. ಸಾಲು ಸಾಲು ಸಿನಿಮಾಗಳ ಆಫರ್ಗಳು ಬರಲಾರಂಭಿಸಿದ್ದವು. ಜಾಗತಿಕ ತಾರೆ 1994ರಲ್ಲಿ ವಿಶ್ವಸುಂದರಿ ಕಿರೀಟ ತೊಟ್ಟ ಭಾರತದ ಎರಡನೇ ಮಹಿಳೆ. ಇದಕ್ಕಿಂತ ಮೊದಲು 1966 ರಲ್ಲಿ ರೀಟಾ ಫರಿಯಾ ಅವರಿಗೆ ಈ ಕಿರೀಟ ದೊರೆತಿದ್ದು, ವಿಶ್ವಸುಂದರಿ ಪಟ್ಟ ತೊಟ್ಟ ಭಾರತದ ಮೊದಲ ಮಹಿಳೆಯಾಗಿದ್ದರು.
![aishwarya rai bachchan celebrating 49th birthday](https://etvbharatimages.akamaized.net/etvbharat/prod-images/16799495_aish-3.jpg)
ಆರಂಭದಲ್ಲಿ ತಮಗೆ ಬರುತ್ತಿದ್ದ ಸಿನಿಮಾ ಆಫರ್ಗಳಿಗೆಲ್ಲ ಒಕೆ ಎಂದು ಹೇಳದೇ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಇರುವರ್' ತಮಿಳು ಸಿನಿಮಾದ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟರು. ನಂತರ 'ಔರ್ ಪ್ಯಾರ್ ಹೋ ಗಯಾ' ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಖಾತೆ ತೆರೆದರು. ನಂತರದಲ್ಲಿ ತಮಿಳು, ಹಿಂದಿ, ಬೆಂಗಾಲಿ, ಇಂಗ್ಲಿಷ್ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 2002 ರಲ್ಲಿ, ಸಂಜಯ್ ಲೀಲಾ ಬನ್ಸಾಲಿಯವರ 'ದೇವದಾಸ್' ಚಿತ್ರದ ವಿಶ್ವ ಪ್ರಥಮ ಪ್ರದರ್ಶನಕ್ಕಾಗಿ ಐಶ್ವರ್ಯಾ ರೈ ಕ್ಯಾನೆಸ್ ಪ್ರವೇಶಿಸಿದರು.
ಐಶ್ವರ್ಯಾ ರೈ ಅಭಿನಯದ 'ಪೊನ್ನಿಯಿನ್ ಸೆಲ್ವನ್ 1' ತೆರೆಕಂಡು ಜಾಗತಿಕವಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಸದ್ಯ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ಮಾತ್ರ ಒಪ್ಪಿಕೊಂಡಿರುವ ಅವರ ಮನಮೋಹಕ ನೃತ್ಯಕ್ಕೆ ಮನಸೋಲದ ಅಭಿಮಾನಿಗಳಿಲ್ಲ.
![aishwarya rai bachchan celebrating 49th birthday](https://etvbharatimages.akamaized.net/etvbharat/prod-images/16799495_aish.jpg)
ಅಭಿಷೇಕ್ ಬಚ್ಚನ್ ಅವರನ್ನು 2007ರಲ್ಲಿ ಪ್ರೀತಿಸಿ ಮದುವೆಯಾಗಿರುವ ಐಶ್ವರ್ಯಾ ಅವರಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ಮಗಳೆಂದರೆ ಐಶ್ವರ್ಯಾಗೆ ತುಂಬಾ ಪ್ರೀತಿ. ಯಾವತ್ತೂ ಫಿಟ್ ಆ್ಯಂಡ್ ಸ್ಲಿಮ್ ಆಗಿ ಆಕರ್ಷಕ ಸೌಂದರ್ಯದಿಂದಿರುವ ಐಶ್ವರ್ಯಾ ಪ್ರೆಗ್ನೆನ್ಸಿ ಸಮಯದಲ್ಲಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಕ್ಕಾಗಿ ಎಲ್ಲಾ ಕಡೆಯಿಂದಲೂ ನೆಗೆಟಿವ್ ಕಮೆಂಟ್ಗಳನ್ನು ಎದುರಿಸುವಂತಾಗಿತ್ತು. ವಿಭಿನ್ನವಾದ ಪಾತ್ರಗಳಿಗೆ ಜೀವ ತುಂಬುವ ಮೂಲಕ ಸಿನಿರಂಗದಲ್ಲಿ ಸಾಕಷ್ಟು ಎತ್ತರಕ್ಕೆ ಏರಿರುವ ಐಶ್ವರ್ಯಾ ಬಾಲಿವುಡ್ನಲ್ಲಿ ಮಾತ್ರವಲ್ಲದೆ 'ಪಿಂಕ್ ಪ್ಯಾಂಥರ್ 2' ಮತ್ತು 'ದಿ ಲಾಸ್ಟ್ ಲೀಜನ್' ನಂತಹ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬಣ್ಣ ಹಚ್ಚುವ ಮೂಲಕ ಹಾಲಿವುಡ್ನಲ್ಲೂ ತಮ್ಮ ಪ್ರತಿಭೆಯ ಅಚ್ಚೊತ್ತಿದ್ದಾರೆ.
ಇದನ್ನೂ ಓದಿ: ನಟಿ ಕೃತಿ ಕರಬಂದ ಬರ್ತಡೇ ಪಾರ್ಟಿಗೆ ಪ್ರಿಯಕರ ಪುಲ್ಕಿತ್ ಸಾಮ್ರಾಟ್.. ಜೋಡಿಹಕ್ಕಿ ಫೋಟೋ ವೈರಲ್