ETV Bharat / entertainment

Adipurush: 'ಆದಿಪುರುಷ್​​' ಸಿನಿಮಾ ಬ್ಯಾನ್​ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ: ನೇಪಾಳದ ಕ್ಷಮೆಯಾಚಿಸಿದ ಚಿತ್ರತಂಡ - nepala on Adipurush

ಆದಿಪುರುಷ್ ಸಿನಿಮಾ ಮೇಲಿನ ಅಸಮಾಧಾನ ಹೆಚ್ಚಾಗುತ್ತಲೇ ಇದೆ. ಸಿನಿಮಾ ಬ್ಯಾನ್​​ ಮಾಡುವಂತೆ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ​​ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.

Letter to Prime Minister to ban Adipurush
ಆದಿಪುರುಷ್​​ ಬ್ಯಾನ್​ ಮಾಡುವಂತೆ ಪ್ರಧಾನಿಗೆ ಪತ್ರ
author img

By

Published : Jun 20, 2023, 4:43 PM IST

'ಆದಿಪುರುಷ್​​' ಸಿನಿಮಾಗೆ ದೇಶ- ವಿದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶವಾಸಿಗಳು ಮಾತ್ರವಲ್ಲದೇ ನೆರೆ ದೇಶ ನೇಪಾಳದಲ್ಲೂ ಚಿತ್ರದ ವಿಚಾರವಾಗಿ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಾರಣ ಚಿತ್ರದ ಒಂದು ಡೈಲಾಗ್​. ಸೀತೆಯನ್ನು ಭಾರತದ ಮಗಳು ಎಂದು ಕರೆದಿದ್ದು ನೇಪಾಳಿಗರನ್ನು ಕೆರಳಿಸಿದೆ.

ಡೈಲಾಗ್​ ಸರಿಪಡಿಸುವವರೆಗೂ ಸಿನಿಮಾ ಪ್ರದರ್ಶನಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸೀತೆಯನ್ನು ಭಾರತದ ಮಗಳು ಎಂದು ಕರೆದಿರುವುದು ನಮಗೆ ಹೆಚ್ಚು ನೋವುಂಟು ಮಾಡಿದೆ ಎಂದು ನೇಪಾಳ ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಆದಿಪುರುಷ್​​ ನಿರ್ಮಾಪಕರು ನೇಪಾಳ ಸರ್ಕಾರಕ್ಕೆ ಲಿಖಿತ ಕ್ಷಮೆ ಯಾಚಿಸಿದ್ದಾರೆ. ಕ್ಷಮಾಪಣೆ ಪತ್ರವನ್ನು ಕಳುಹಿಸಿದ್ದಾರೆ.

Adipurush
ನೇಪಾಳಕ್ಕೆ ಕ್ಷಮೆಯಾಚಿಸಿದ ಚಿತ್ರತಂಡ

ಆದಿಪುರುಷ್ ಕ್ಷಮಾಪಣಾ ಪತ್ರ: 'ನಮ್ಮಿಂದ ನೇಪಾಳ ಜನರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ. ನಾವು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ನಾವು ಭಾರತೀಯರಾಗಿ ನಮಗೆ, ಪ್ರತಿ ದೇಶದ ಮಹಿಳೆಯರ ಗೌರವ ವಿಷಯ ಮೊದಲನೆಯದು. ನೀವು ಚಿತ್ರವನ್ನು ಕಾಲ್ಪನಿಕವಾಗಿ ವೀಕ್ಷಿಸಬೇಕೆಂದು ನಾವು ಬಯಸುತ್ತೇವೆ. ಜೊತೆಗೆ, ನಮ್ಮ ಇತಿಹಾಸದಲ್ಲಿ ಆಸಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಸಿನಿಮಾ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಹಕರಿಸುವಂತೆ ವಿನಂತಿಸುತ್ತೇವೆ' ಎಂದು ಬರೆಯಲಾಗಿದೆ.

ಬಿಹಾರದ ಸೀತಾಮರ್ಹಿ ಜಿಲ್ಲೆಯನ್ನು ಸೀತೆಯ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ನೇಪಾಳ ಸರ್ಕಾರವು ಸೀತಾಮಾತೆ ನೇಪಾಳದ ಜನಕ್‌ಪುರದಲ್ಲಿ ಜನಿಸಿದ ದೇವಿ ಎಂದು ಹೇಳಿಕೊಂಡಿದೆ. ಆದಿಪುರುಷ್​​ ಚಿತ್ರದ ಸಂಭಾಷಣೆಯಲ್ಲಿ ಸೀತಾ ಭಾರತದ ಮಗಳು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನೇಪಾಳ, ಆದಿಪುರುಷ್​ ಸೇರಿ ಬಾಲಿವುಡ್​ ಸಿನಿಮಾ ಪ್ರದರ್ಶನಗಳನ್ನು ಸದ್ಯ ನಿಷೇಧಿಸಿದೆ.

  • All India Cine Workers Association write to Prime Minister Narendra Modi, requesting him to "stop screening the movie and immediately order a ban of #Adipurush screening in the theatres and OTT platforms in the future.

    "We need FIR against Director Om Raut, dialogue writer… pic.twitter.com/jYq3yfv05c

    — ANI (@ANI) June 20, 2023 " class="align-text-top noRightClick twitterSection" data=" ">

ಸಿನಿಮಾ ನಿಷೇಧಿಸುವಂತೆ ಮೋದಿಗೆ ಪತ್ರ: ಚಿತ್ರವನ್ನು ಭಾರತದಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ​​ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸಿನಿಮಾ ನಿಷೇಧಿಸುವಂತೆ ಒತ್ತಾಯಿಸಿದೆ. ಅಲ್ಲದೇ ಚಿತ್ರದ ನಿರ್ದೇಶಕ ಓಂ ರಾವುತ್ ಮತ್ತು ಸಂಭಾಷಣೆ ಬರೆದ ಮನೋಜ್ ಮುಂತಶಿರ್ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸುವ ಕುರಿತು ಸಂಘ ಮಾತನಾಡಿದೆ.

ಇದನ್ನೂ ಓದಿ: ಆದಿಪುರುಷ್​​ ಗಳಿಕೆ ಇಳಿಕೆ: ಮೂರು ದಿನದಲ್ಲಿ 300 ಕೋಟಿ ಗಳಿಸಿದ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್​ 20 ಕೋಟಿ!

ಮುಂದಿನ ದಿನಗಳಲ್ಲಿ ಈ ಚಲನಚಿತ್ರವನ್ನು ಟಿವಿ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಬಾರದು ಎಂದು ಪ್ರಧಾನಿಗೆ ಮನವಿ ಮಾಡಲಾಗಿದೆ. ಇದು ಮಕ್ಕಳಲ್ಲಿ ರಾಮಾಯಣದ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ ಎಂದು ಸಹ ತಿಳಿಸಿದೆ.

ಮನವಿ ಪತ್ರ: 'ಈ ಚಿತ್ರವು ಭಗವಾನ್ ರಾಮ ಮತ್ತು ಹನುಮಂತನ ಚಿತ್ರಣವನ್ನು ಹಾಳು ಮಾಡಿದೆ. ಹಿಂದೂ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿದೆ. ರಾಮ ಭಾರತದ ಪ್ರತಿಯೊಬ್ಬ ವ್ಯಕ್ತಿಯ ದೇವರು. ಆದ್ರೆ ಚಿತ್ರವು ರಾಮನ ಮತ್ತು ರಾವಣನ ಪಾತ್ರವನ್ನು ವಿಡಿಯೋ ಗೇಮ್ ಪಾತ್ರದಂತೆ ತೋರಿಸಿದೆ. ಇದು ದೇಶ- ವಿದೇಶಗಳಲ್ಲಿನ ಹಿಂದೂಗಳಿಗೆ ನೋವುಂಟು ಮಾಡಿದೆ. ಆದಿಪುರುಷ್​ ಸಿನಿಮಾ ನಮ್ಮ ರಾಮಾಯಣ ಮತ್ತು ರಾಮನ ಚಿತ್ರಣವನ್ನು ನಾಶಪಡಿಸಿದೆ. ಚಿತ್ರದಲ್ಲಿ ಅಗೌರವ ತೋರಲಾಗಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Adipurush controversy: ಸೀತೆ ಭಾರತವಲ್ಲ, ನೇಪಾಳದ ಮಗಳು: ಹಿಮ ರಾಷ್ಟ್ರದಲ್ಲಿ ಆದಿಪುರುಷ್​ ಸಿನಿಮಾ ಪ್ರದರ್ಶನ ಬಂದ್​

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆದಿಪುರುಷ್​ ಸಿನಿಮಾ ಬಗೆಗಿನ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಜನರು ಚಿತ್ರದ ವಿರುದ್ಧ ಕಿಡಿಕಾರಿದ್ದಾರೆ. ಹಿಂದೂ ಮಹಾಸಭಾವು ಲಖಲೌ ಪೊಲೀಸ್ ಠಾಣೆಯಲ್ಲಿ ಆದಿಪುರುಷ್​ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.