ನವದೆಹಲಿ: ಬಾಹುಬಲಿ ನಟ ಪ್ರಭಾಸ್ ಮತ್ತು ನಟಿ ಕೃತಿ ಸನೋನ್ ಅಭಿಯನದ 'ಆದಿಪುರುಷ್' ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಇದೀಗ ಮೊದಲ ಬಾರಿಗೆ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನವಾಗಲು ಸಜ್ಜಾಗಿದೆ. ನ್ಯೂಯಾರ್ಕ್ನಲ್ಲಿ ಜೂನ್ 7ರಿಂದ ಜೂನ್ 18ರವರೆಗೆ ನಡೆಯಲಿರುವ 2023ರ ಆವೃತ್ತಿಯ ಎಸ್ಕೇಪ್ ಫ್ರಾಂ ಟ್ರೆಬೆಕಾ ಸೆಕ್ಷನ್ ಅಡಿ ಈ ಚಿತ್ರ ವರ್ಲ್ಡ್ ಪ್ರಿಮೀಯರ್ ಕಾಣಲಿದೆ.
ಈ ಸಂಬಂಧ ನಟ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜೂನ್ 13ರಂದ ಚಿತ್ರ ಪ್ರಸಾರವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಕುರಿತು ತಿಳಿಸಿರುವ ಚಿತ್ರದ ನಿರ್ದೇಶಕ ಓಂ ರಾವತ್, ಟ್ರಿಬೆಕಾದಲ್ಲಿ ಚಿತ್ರ ವರ್ಲ್ಡ್ ಪ್ರಿಮಿಯರ್ ಶೋ ಕಾಣುತ್ತಿರುವುದು ಹೆಮ್ಮೆ ಜೊತೆಗೆ ಸಂತೋಷ ಮೂಡಿಸಿದೆ ಎಂದಿದ್ದಾರೆ.
- " class="align-text-top noRightClick twitterSection" data="
">
ರಾಮಾಯಣದ ಕಥೆಯ ಈ ಚಿತ್ರ ದೈವಿಕ ಜೊತೆಗೆ ಧೈರ್ಯದ ಕಥಾನಕ ಹೊಂದಿದ್ದು, ನ್ಯೂಯಾರ್ಕ್ನಲ್ಲಿ ಪ್ರತಿಷ್ಠಿತ ಟ್ರಿಬೆಕಾ ಫೆಸ್ಟಿವಲ್ನಲ್ಲಿ ಜೂನ್ 13ರಂದು ಪ್ರದರ್ಶನ ಕಾಣಲಿದೆ. 'ಆದಿ ಪುರುಷ್' ತಂಡದ ಅದ್ಭುತ ಪ್ರಯತ್ನಕ್ಕೆ ನಾನು ಅಬಾರಿಯಾಗಿದ್ದೇನೆ. ಅಲ್ಲದೇ ಟ್ರಿಬೆಕಾ ತೀರ್ಪುಗಾರರ ತಂಡಕ್ಕೂ ಋಣಿಯಾಗಿದ್ದೇವೆ. ಆದಿಪುರುಷ್ ಚಿತ್ರ ಟ್ರೆಬೆಕಾದಲ್ಲಿ ಮೊದಲ ಬಾರಿ ಪ್ರದರ್ಶನವಾಗುವುದಕ್ಕೆ ಕಾತುರರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಗಾಲಾ ಅಧಿಕೃತ ವೆಬ್ಸೈಟ್ ಪ್ರಕಾರ, ಭಾರತೀಯ ಮಹಾಕಾವ್ಯ ರಾಮಯಣದ ರಿಇಮೇಜಿಂಗ್ (ಮರುಕಲ್ಪನೆ) ಆದಿಪುರುಷ್ ಸಿನಿಮಾ ಇದಾಗಿದೆ ಎಂದು ವ್ಯಾಖ್ಯಾನಿಸಿದೆ. ಹತ್ತು ತಲೆಯ ರಾವಣನಿಂದ ತನ್ನ ಹೆಂಡತಿ ಸೀತೆಯನ್ನು ರಾಮ ಕಾಪಾಡುವ ಕಥೆಯನ್ನು ಬಿಗ್ ಬಜೆಟ್ ವೆಚ್ಚದಲ್ಲಿ ಆದಿಪುರುಷ್ ಸಿನಿಮಾ ನಿರ್ಮಾಣ ಮಾಡಲಾಗಿದೆ.
ಎಸ್ಕೇಪ್ ಫ್ರಂ ಟ್ರಿಬೆಕಾದಲ್ಲಿ ಆದಿಪುರುಷ್ ಸಿನಿಮಾ ಜೊತೆಗೆ ಕ್ಲೊನೆಸ್ ಆಫ್ ಬ್ರುಸ್, ಫೈನಲ್ ಕಟ್ ಮತ್ತು ಸಬ್ಟೈಟಲ್ ಪ್ಲೆಶ್ ಕೂಡ ಪ್ರಸಾರವಾಗುತ್ತಿದೆ. 50ನೇ ವರ್ಷಾಚರಣೆ ಅಂಗವಾಗಿ ಬ್ರೂಸ್ಲೀ ಅವರ ಎಂಟರ್ ದಿ ಡ್ರಾಗನ್ ಚಿತ್ರ ಕೂಡ ಪ್ರದರ್ಶನವಾಗುತ್ತಿದೆ.
- " class="align-text-top noRightClick twitterSection" data="
">
'ಆದಿಪುರುಷ್' ಚಿತ್ರವನ್ನು ಟಿ ಸೀರಿಸ್ನ ಭೂಷಣ್ ಕುಮಾರ್, ಕೃಷ್ಣ ಕುಮಾರ್, ರಾವತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ನಿರ್ಮಿಸುತ್ತಿದ್ದಾರೆ. ಇನ್ನು ಬಿಡುಗಡೆಗೆ ಮುನ್ನವೇ ಈಗಾಗಲೇ ಈ ಚಿತ್ರ ಬಾಯ್ಕಾಟ್ ಬಿಸಿಯನ್ನು ಕೂಡ ಅನುಭವಿಸಿದೆ. ಚಿತ್ರದ ವಿಶುಯಲ್ ಎಫೆಕ್ಟ್ ಮೂಲಕ ಹಿಂದೂ ದೇವತೆಗಳನ್ನು ವಿರೂಪಗೊಳಿಸಲಾಗಿದೆ ಎಂದು ಚಿತ್ರದ ಟೀಸರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಅಷ್ಟೇ ಅಲ್ಲದೇ, ರಾವಣನ ಪಾತ್ರವನ್ನು ಇಸ್ಲಾಮೀಕರಣ ಮಾಡಲಾಗಿದೆ ಎಂಬ ವಾದವೂ ಕೇಳಿ ಬಂದಿತು. ರಾವಣ ಪಾತ್ರದಲ್ಲಿ ನಟ ಸೈಫ್ ಆಲಿ ಖಾನ್ ನಟಿಸುತ್ತಿದ್ದು, ಚಿತ್ರದಲ್ಲಿ ಗಡ್ಡ ಮತ್ತು ಕಣ್ಣುಕಪ್ಪಿನ ಮೂಲಕ ರಾವಣನ ಪಾತ್ರವನ್ನು ವಿರೂಪಗೊಳಿಸಲಾಗಿದೆ ಎಂದು ಟೀಕೆಗಳು ವ್ಯಕ್ತಗೊಂಡಿದ್ದವು. ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಕಳೆದ ಆಗಸ್ಟ್ 11ರ 2022ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದ್ದು, ಸಿನಿಮಾ 3ಡಿ ಎಫೆಕ್ಟ್ನೊಂದಿಗೆ ಇದೇ ಜೂನ್ 16ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಶಾಕುಂತಲೆ ಸಮಂತಾ ಭಗವದ್ಗೀತೆ ಶ್ಲೋಕ ಹೇಳಿದ್ದೇಕೆ?