ETV Bharat / entertainment

ತಿರುಪತಿಯಲ್ಲಿ ಕೃತಿ ಸನೋನ್ ಕೆನ್ನೆಗೆ ಮುತ್ತಿಟ್ಟ ನಿರ್ದೇಶಕ: ಟ್ರೋಲ್ ಬಗ್ಗೆ ನಟಿ ಹೇಳಿದ್ದಿಷ್ಟು

ತಿರುಪತಿ ದೇವಸ್ಥಾನದ ಬಳಿ ನಟಿ ಕೃತಿ ಸನೋನ್ ಕೆನ್ನೆಗೆ ಮುಟ್ಟಿಟ್ಟ ನಿರ್ದೇಶಕ ಓಂ ರಾವುತ್ ಟ್ರೋಲ್ ಆಗಿದ್ದಾರೆ.

Om Raut kisses Kriti Sanon
ಕೃತಿ ಸನೋನ್ ಕೆನ್ನೆಗೆ ಮುತ್ತಿಟ್ಟ ಓಂ ರಾವುತ್
author img

By

Published : Jun 8, 2023, 4:05 PM IST

ತಿರುಪತಿ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಬಾಲಿವುಡ್ ಬಹುಬೇಡಿಕೆಯ ನಟಿ ಕೃತಿ ಸನೋನ್ ಅವರ ಕೆನ್ನೆಗೆ ಮುತ್ತಿಟ್ಟ ಆದಿಪುರುಷ್​ ಚಿತ್ರದ ನಿರ್ದೇಶಕ ಓಂ ರಾವುತ್ ಟ್ರೋಲ್​ಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ನಿರ್ದೇಶಕರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಬಳಿಯ ದೃಶ್ಯ ಅದಾಗಿದೆ. ನಿರ್ದೇಶಕರು ತಮ್ಮ ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿರುವ ಕೃತಿ ಸನೋನ್​​​ ಅವರನ್ನು ಬೀಳ್ಕೊಡುವ ವೇಳೆ ನಟಿಗೆ ಚುಂಬಿಸಿದ್ದಾರೆ. ಈ ವಿಡಿಯೋ ಹಲವರಿಂದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ದೇವಸ್ಥಾನದ ಪ್ರಧಾನ ಅರ್ಚಕರು ಇದೊಂದು 'ಖಂಡನೀಯ ಕೃತ್ಯ' ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಗಂಡ ಮತ್ತು ಹೆಂಡತಿ ಸಹ ಒಟ್ಟಿಗೆ ದೇವಸ್ಥಾನಕ್ಕೆ ಹೋಗುವುದಿಲ್ಲ. ನಿರ್ದೇಶಕ ಮತ್ತು ನಟಿ "ಹೋಟೆಲ್ ಕೋಣೆಗೆ ಹೋಗಿ ಅದನ್ನು ಮಾಡಬಹುದು" ಎಂದು ಅರ್ಚಕರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ನಗೋತು (Ramesh Naidu Nagothu) ಕೂಡ ಟ್ವೀಟ್‌ (ಡಿಲೀಟ್​ ಮಾಡಿದ್ದಾರೆ) ಮೂಲಕ ಟೀಕಿಸಿದ್ದರು. "ನಿಮ್ಮ ನಿಮ್ಮ ಚೇಷ್ಟೆಗಳನ್ನು ಪವಿತ್ರ ಸ್ಥಳಕ್ಕೆ ತರುವುದು ನಿಜವಾಗಿಯೂ ಅಗತ್ಯವಿದೆಯೇ?. ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಚುಂಬನ ಮತ್ತು ಅಪ್ಪುಗೆಯಂತಹ ಪ್ರೀತಿಯ ಸಾರ್ವಜನಿಕ ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದು ಅಗೌರವ ಮತ್ತು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸಲಾಗುತ್ತದೆ" ಎಂದು ಅವರು ಟ್ವೀಟ್ ಮಾಡಿ ತಮ್ಮ ಅಸಮಧಾನ ಹೊರ ಹಾಕಿದ್ದರು.

ಸಕಾರಾತ್ಮಕವಾಗಿದ್ದೇನೆಂದ ನಟಿ.. ಟೀಕೆ, ಟ್ರೋಲ್ ನಡುವೆಯೇ ನಟಿ ಕೃತಿ ಸನೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದಿಪುರುಷ್​ ಪ್ರೀ ರಿಲೀಸ್​ ಈವೆಂಟ್​ನಿಂದ ತಮ್ಮ ಫೋಟೋ ಹಂಚಿಕೊಳ್ಳುತ್ತ, "ನನ್ನ ಹೃದಯವು ಸಕಾರಾತ್ಮಕತೆಯಿಂದ ತುಂಬಿದೆ, ತಿರುಪತಿಯ ಶುದ್ಧತೆ ಮತ್ತು ಶಕ್ತಿ ಹಾಗೂ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನೀವು ಆದಿಪುರುಷ್ ಮತ್ತು ಜಾನಕಿಯ ಮೇಲೆ ತೋರಿದ ಅಗಾಧ ಪ್ರೀತಿಗೆ ಧನ್ಯವಾದ. ಸಿನಿಮಾದ ಶ್ರಮ ಮತ್ತು ಕೆಲ ತಪ್ಪು ಕಾರಣಗಳಿಗಾಗಿ ಗಮನ ಸೆಳೆದಿರುವ ಆದಿಪುರುಷ್ ಜೂನ್ 16 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ'' ಎಂದು ಬರೆದಿದ್ದಾರೆ.

ಇದನ್ನೂ ಓದಿ: 10,000 ಜನರಿಗೆ 'ಆದಿಪುರುಷ್'​​ ಉಚಿತ ಟಿಕೆಟ್​: ಯಾರಿಗೆಲ್ಲ ಲಭ್ಯ?!

ಆದಿಪುರುಷ್ ರಾಮಾಯಣ ಆಧಾರಿತ ಸಿನಿಮಾ. ಓಂ ರಾವುತ್ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾಗೆ ಆಧುನಿಕ ಸ್ಪರ್ಶನ ನೀಡಲಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಾಮಾಯಣ ಆಧಾರಿತ 3ಡಿ ಸಿನಿಮಾ ಜೂನ್ 16 ರಂದು ಬಿಡುಗಡೆ ಆಗಲಿದೆ. ಶ್ರೀರಾಮನ ಪಾತ್ರದಲ್ಲಿ ನಟ ಪ್ರಭಾಸ್ ಮತ್ತು ಸೀತೆ ಪಾತ್ರದಲ್ಲಿ ಕೃತಿ ಸನೋನ್, ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಅದ್ಧೂರಿಯಾಗಿ ನಡೆಯಿತು ಆದಿಪುರುಷ್ ಪ್ರೀ ರಿಲೀಸ್​ ಈವೆಂಟ್.. ಫೋಟೋಗಳಲ್ಲಿ​​ ನೋಡಿ

ತೆಲಂಗಾಣದ ಸರ್ಕಾರಿ ಶಾಲೆಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳಿಗೆ ಸೇರಿದ ಸುಮಾರು 10,000 ಮಂದಿಗೆ ಆದಿಪುರುಷ್​ ಉಚಿತ ಟಿಕೆಟ್​ ನೀಡಲು ಚಿತ್ರತಂಡ ನಿರ್ಧರಿಸಿದೆ. https://bit.ly/CelebratingAdipurush ಗೂಗಲ್​ ಫಾರ್ಮ್ ಫಿಲ್​ ಮಾಡುವ ಮೂಲಕ ಈ ಉಚಿತ ಟಿಕೆಟ್​ ಸೌಲಭ್ಯ ಪಡೆಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.