ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಬಹುಬೇಡಿಕೆಯ ನಟಿ ಕೃತಿ ಸನೋನ್ ಅಭಿನಯದ ಪೌರಾಣಿಕ ಚಿತ್ರ 'ಆದಿಪುರುಷ್' ಜೂನ್ 16 ರಂದು (ನಿನ್ನೆ) ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಅದರ ಜೊತೆಗೆ ಸಿನಿಮಾವು ಗ್ರಾಫಿಕ್ಸ್ ಮತ್ತು ಪಾತ್ರಗಳ ಸಂಭಾಷಣೆಯ ವಿಚಾರವಾಗಿ ಟ್ರೋಲ್ ಆಗುತ್ತಿದೆ.
'ಆದಿಪುರುಷ್' ಚಿತ್ರದಲ್ಲಿ ಹನುಮಂತ ಪಾತ್ರದ ಡೈಲಾಗ್‌ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೊಳಗಾಗಿವೆ. ಈ ಬಗ್ಗೆ ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. ಹನುಮಂತನ ಸಂಭಾಷಣೆಯನ್ನು ಬಹಳ ಕಾಳಜಿಯಿಂದ ಬರೆದಿದ್ದೇನೆ ಎಂದು ಹೇಳಿದ್ದಾರೆ.
"ಹನುಮಂತನ ಸಂಭಾಷಣೆಗಳನ್ನು ನಾನು ತಪ್ಪಾಗಿ ಬರೆದಿಲ್ಲ. ತುಂಬಾ ಯೋಚಿಸಿ ಡೈಲಾಗ್ ಬರೆದೆ. ಚಿತ್ರದಲ್ಲಿ ಅನೇಕ ಪಾತ್ರಗಳಿವೆ, ಎಲ್ಲರೂ ಒಂದೇ ರೀತಿ ಮಾತನಾಡುವುದಿಲ್ಲ. ಹಾಗಾಗಿಯೇ ಪಾತ್ರಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ಈ ರೀತಿ ಸಂಭಾಷಣೆಗಳನ್ನು ಸರಳೀಕರಿಸಿದ್ದೇನೆ. ಆದರೆ, ಇಂತಹ ಸಂಭಾಷಣೆ ಬರೆದ ಮೊದಲ ವ್ಯಕ್ತಿ ನಾನಲ್ಲ. ಜಾನಪದ ಕಲಾವಿದರು ರಾಮಾಯಣವನ್ನು ಹೇಳುವಾಗ ಭಗವಾನ್ ಹನುಮಂತನ ಸಂಭಾಷಣೆಗಳನ್ನು ಹೇಳಿದ್ದು ಹೀಗೆ. ಅವುಗಳನ್ನು ಪರಿಗಣಿಸಿ ಸಂಭಾಷಣೆಗಳನ್ನು ಬರೆದಿದ್ದೇನೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
Adipurush ಮೊದಲ ದಿನದ ಕಲೆಕ್ಷನ್: ಆದಿಪುರುಷ್ 2023ರ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಬಿಡುಗಡೆಯಾದ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದೆ. ಒಂದೇ ದಿನದಲ್ಲಿ ಸುಮಾರು 140 ಕೋಟಿ ರೂಪಾಯಿ ಗಳಿಸಿದೆ. ಆದಿಪುರುಷ್ ಮೊದಲ ದಿನ ಕೇವಲ ಹಿಂದಿ ಆವೃತ್ತಿಯೊಂದರಲ್ಲೇ ಸಂಗ್ರಹಿಸಿದ ಹಣ ಸುಮಾರು 36-38 ಕೋಟಿ ರೂ.ಗಳು. ಇತರ ಭಾಷೆಗಳು ಸೇರಿದಂತೆ ಭಾರತದಲ್ಲಿ ಸುಮಾರು 90 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ರಾಮ್ಚರಣ್ ದಂಪತಿ: ತೊಟ್ಟಿಲು ಉಡುಗೊರೆ ನೀಡಿದ ಪ್ರಜ್ವಲ ಫೌಂಡೇಶನ್
ಓಟಿಟಿಯಲ್ಲೂ ಬರಲಿದೆ.. ಯಾವುದೇ ಹೊಸ ಸಿನಿಮಾ ಬಿಡುಗಡೆಯಾದಾಗ OTT ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆಯೇ? ಎಂದು ಸಿನಿ ಪ್ರೇಮಿಗಳು ಕಾತರದಿಂದ ನೋಡುತ್ತಿರುತ್ತಾರೆ. ಈಗ ನೆಟ್ಟಿಗರು 'ಆದಿಪುರುಷ' ಎಲ್ಲಿ ಸ್ಟ್ರೀಮ್ ಆಗಲಿದೆ? ಎಂದು ಹುಡುಕಾಡುತ್ತಿದ್ದಾರೆ. ಈ ಚಿತ್ರದ OTT ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ತೆಲುಗು, ಹಿಂದಿ, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಆದರೆ ಆದಿಪುರುಷ್ OTT ತಲುಪಲು ಸುಮಾರು 60 ದಿನಗಳು ಬೇಕಾಗಬಹುದು.
ನಿರ್ದೇಶಕ ಓಂ ರಾವುತ್ ರಾಮಾಯಣಕ್ಕೆ ಆಧುನಿಕ ಸ್ಪರ್ಶ ನೀಡಿ ‘ಆದಿಪುರುಷ್’ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ರಾಘವ್ ಪಾತ್ರದಲ್ಲಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಟಿಸಿದ್ದಾರೆ. ಟಿ ಸೀರಿಸ್ 500 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ನಿರ್ಮಿಸಿದೆ.
ಇದನ್ನೂ ಓದಿ: 'Adipurush' ಸಿನಿಮಾದ ಕೆಲ ದೃಶ್ಯ ಕತ್ತರಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಹಿಂದೂ ಸೇನೆ