ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಆದಿಪುರುಷ್' ಬಿಡುಗಡೆಗೆ ಸಜ್ಜಾಗುತ್ತಿದೆ. ಬಾಲಿವುಡ್ ನಿರ್ದೇಶಕ ಓವಂ ರಾವತ್ ರಾಮಾಯಣ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಸೀತೆಯಾಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದು, ಶನಿವಾರ ಮೋಷನ್ ಪೋಸ್ಟರ್ ಜೊತೆ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಸೀತಾನವಮಿಯಂದು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ 'ಅಮರ ನಿಮ್ಮ ನಾಮ ಜೈ ಸೀತಾ ರಾಮ' ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
-
अमर है नाम, जय सिया राम।🙏
— Om Raut (@omraut) April 29, 2023 " class="align-text-top noRightClick twitterSection" data="
The eternal chant, Jai Siya Ram.🙏
అమరం, అఖిలం
ఈ నామం,
సీతారాముల ప్రియనామం🙏
அழியா நின் நாமம்
ஜெய் சீதாராம்🙏
ಅಮರ ನಿಮ್ಮ ನಾಮ
ಜೈ ಸೀತಾ ರಾಮ🙏
എന്നേക്കും ശാശ്വതമാണ്
ജയ് സീതാ റാം🙏
Jai Siya Ram
जय सिया राम
జై సీతారాం
ஜெய் சீதா ராம்
ಜೈ ಸೀತಾ ರಾಮ್ pic.twitter.com/sFkBzF2fuJ
">अमर है नाम, जय सिया राम।🙏
— Om Raut (@omraut) April 29, 2023
The eternal chant, Jai Siya Ram.🙏
అమరం, అఖిలం
ఈ నామం,
సీతారాముల ప్రియనామం🙏
அழியா நின் நாமம்
ஜெய் சீதாராம்🙏
ಅಮರ ನಿಮ್ಮ ನಾಮ
ಜೈ ಸೀತಾ ರಾಮ🙏
എന്നേക്കും ശാശ്വതമാണ്
ജയ് സീതാ റാം🙏
Jai Siya Ram
जय सिया राम
జై సీతారాం
ஜெய் சீதா ராம்
ಜೈ ಸೀತಾ ರಾಮ್ pic.twitter.com/sFkBzF2fuJअमर है नाम, जय सिया राम।🙏
— Om Raut (@omraut) April 29, 2023
The eternal chant, Jai Siya Ram.🙏
అమరం, అఖిలం
ఈ నామం,
సీతారాముల ప్రియనామం🙏
அழியா நின் நாமம்
ஜெய் சீதாராம்🙏
ಅಮರ ನಿಮ್ಮ ನಾಮ
ಜೈ ಸೀತಾ ರಾಮ🙏
എന്നേക്കും ശാശ്വതമാണ്
ജയ് സീതാ റാം🙏
Jai Siya Ram
जय सिया राम
జై సీతారాం
ஜெய் சீதா ராம்
ಜೈ ಸೀತಾ ರಾಮ್ pic.twitter.com/sFkBzF2fuJ
ಪೋಸ್ಟರ್ನಲ್ಲಿ ಲಂಕೆಯಲ್ಲಿರುವ ಸೀತಾ ಮಾತೆ ಕಣ್ಣೀರು ಹಾಕುತ್ತಾ ರಾಮನ ಬರುವಿಕೆಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಇನ್ನೊಂದರಲ್ಲಿ ಸೀತೆಯ ಹಿಂದೆ ರಾಮನಾಗಿ ಪ್ರಭಾಸ್ ನಿಂತಿದ್ದಾರೆ. ಅದೇ ಪೋಸ್ಟರ್ನಲ್ಲಿ ಶ್ರೀರಾಮ ಲಕ್ಷ್ಮಣನ ಜೊತೆಗೆ ಲಂಕೆಗೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಹೊಸದಾಗಿ ಬಿಡುಗಡೆಯಾಗಿರುವ ಆದಿಪುರುಷ್ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಟ್ರೆಂಡ್ ಆಗಿವೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಪ್ರಭಾಸ್ ಅವರ ಪೋಸ್ಟರ್ಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಟಿ-ಸೀರಿಸ್ ಬ್ಯಾನರ್ ಅಡಿ ಭೂಷಣ್ ಕುಮಾರ್ ನಿರ್ಮಿಸಿದ ಈ ಚಿತ್ರದಲ್ಲಿ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರ ನಿರ್ವಹಿಸಿದರೆ, ದೇವದತ್ತ ನಾಗೆ ಹನುಮಂತನ ಪಾತ್ರವನ್ನು ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಜೂನ್ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಿದ್ಧಗೊಳ್ಳುತ್ತಿದೆ. ಈ ಕ್ರಮದಲ್ಲಿ ಸಿನಿಮಾ ಪ್ರಮೋಷನ್ ಆರಂಭಿಸಿರುವ ಚಿತ್ರತಂಡ ಒಂದೊಂದಾಗಿ ಹೊಸ ಪೋಸ್ಟರ್ ಮತ್ತು ಲಿರಿಕಲ್ ಸಾಂಗ್ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.
ಇದನ್ನೂ ಓದಿ: ಜೂ. 1ರಂದು ಕಿಚ್ಚ ಸುದೀಪ್ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್ನ್ಯೂಸ್
ಆದರೆ ಅಕ್ಟೋಬರ್ 2ರಂದು ಆದಿಪುರುಷ್ ಟೀಸರ್ ಬಿಡುಗಡೆ ಆಗಿ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗಿತ್ತು. ಟೀಸರ್ನಲ್ಲಿ ಬರುವ ಕೆಲ ಗ್ರಾಫಿಕ್ಸ್ ಅನ್ನು ಅನೇಕರು ಕಾರ್ಟೂನ್ಗಳಿಗೆ ಹೋಲಿಕೆ ಮಾಡಿದ್ದರು. ಟೀಸರ್ ಟೀಕೆಗೊಳಗಾಗಿತ್ತು. ಅದಲ್ಲದೇ ಈ ಹಿಂದೆ ರಾಮನವಮಿಯಂದು ಬಿಡುಗಡೆಯಾಗಿದ್ದ ಪೋಸ್ಟರ್ ಅಷ್ಟೊಂದು ಮೆಚ್ಚುಗೆ ಗಳಿಸಿರಲಿಲ್ಲ. ಹನುಮಂತನ ವೇಷ ಭೂಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ರಾಮಾಯಣದಲ್ಲಿನ ಪಾತ್ರಧಾರಿಗಳನ್ನು ಬಿಂಬಿಸಲಾಗಿದೆ ಎಂದು ಹೇಳಲಾಗಿತ್ತು.
ಈ ಕಾರಣಕ್ಕಾಗಿ ಆದಿಪುರುಷ್ ಸಿನಿಮಾದ ಮೇಲೆ ವಕೀಲ ರಾಜ್ ಗೌರವ್ ಅವರು ದೆಹಲಿ ಹೈಕೋರ್ಟ್ನಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಓಂ ರಾವುತ್ ವಿರುದ್ಧ ಅರ್ಜಿ ಸಲ್ಲಿಸಿ, ಸಿನಿಮಾ ಬಿಡುಗಡೆಯನ್ನು ಮುಂದೂಡುವಂತೆ ಕೋರಿದ್ದರು. ಮಾತ್ರವಲ್ಲದೇ 2021ರಲ್ಲಿ ‘ಆದಿಪುರುಷ್' ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಸೆಟ್‌ನಲ್ಲಿ ಇರಲಿಲ್ಲ. ಬದಲಾಗಿ ನಿರ್ದೇಶಕ ಓಂ ರಾವುತ್ ಮತ್ತು ಇತರ ಕೆಲವರು ಮಾತ್ರ ಹಾಜರಿದ್ದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.
ಇದನ್ನೂ ಓದಿ: 13 ವರ್ಷಗಳ ನಂತರ ಐಟಿ ಉದ್ಯೋಗಿಯಾದ ಸಮಂತಾ: 'ಖುಷಿ' ಪೋಸ್ಟರ್ ರಿಲೀಸ್