ಮುಂಬೈ: ಇತ್ತೀಚೆಗಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅಂಜಿಯೋಪ್ಲಾಸ್ಟಿಗೆ ಒಳಗಾಗಿದ್ದು, ಚೇತರಿಕೆ ಕಾಣುತ್ತಿದ್ದಾರೆ. ತಮ್ಮ ದೈನಂದಿನ ದಿನಚರಿಗೆ ಮರಳುತ್ತಿರುವ ಅವರು ಇತ್ತೀಚೆಗೆ ಲಾಕ್ಮೆ ಫ್ಯಾಷನ್ ವೀಕ್ನಲ್ಲೂ ಕಣ್ಮನ ಸೆಳೆದಿದ್ದರು. ಜೊತೆಗೆ ನಿಧಾನವಾಗಿ ತಮ್ಮ ವ್ಯಾಯಾಮ ಆರಂಭಿಸಿದ್ದು, ಅವರಿಗೆ ಮಗಳು ಆಲಿಶಾ ಮತ್ತು ಮಾಜಿ ಗೆಳೆಯ ರೊಹ್ಮನ್ ಶಾಲ್ ಬೆಂಬಲ ನೀಡಿದ್ದಾರೆ.
- " class="align-text-top noRightClick twitterSection" data="
">
ಈ ಸಂಬಂಧ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ವರ್ಕ್ಔಟ್ ವಿಡಿಯೋವನ್ನು ಬಾಲಿವುಡ್ ತಾರೆ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಕಲ್ಪವೊಂದೇ ದಾರಿ ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದು, 36 ಹ್ಯಾಷ್ಟ್ಯಾಗ್ ಹಾಕಿದ್ದಾರೆ. ಜೊತೆಗೆ ಹೆಚ್ಚಿನ ತರಬೇತಿಗೆ ಇದೀಗ ಅನುಮತಿ ಇದೆ. ಶೀಘ್ರದಲ್ಲೇ ಜೈಪುರದ ಆರ್ಯ ಶೂಟಿಂಗ್ ತೆರಳುತ್ತೇವೆ. ಇಲ್ಲಿ ನನ್ನ ಪ್ರೀತಿಪಾತ್ರರೂ ಸದಾ ಜೊತೆಗಿತ್ತು. ಮತ್ತೆ ನಾನು ಯಥಾಸ್ಥಿತಿಗೆ ಮರಳಲು ಬೆಂಬಲ ನೀಡುತ್ತಿದ್ದಾರೆ. ಆಲಿಶಾ, ಶೋನಾ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ.
ಹೃದಯಾಘಾತಕ್ಕೆ ಒಳಗಾಗಿದ್ದ ನಟಿ: ಕಳೆದ ಫೆಬ್ರವರಿಯಲ್ಲಿ ನಟಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರಿಗೆ ತಕ್ಷಣಕ್ಕೆ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ, ಹೃದಯದ ಕವಾಟದಲ್ಲಿ ಶೇ 95ರಷ್ಟು ಬ್ಲಾಕೆಜ್ ಪತ್ತೆಯಾಗಿತ್ತು ಎಂದು ತಿಳಿಸಿದ್ದರು. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಅವರ ಆರೋಗ್ಯ ಮಾಹಿತಿ ಸಂಬಂಧ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.
ಇದೇ ವೇಳೆ, ಲೈವ್ ಬಂದಿದ್ದ ನಟಿ ಸುಶ್ಮಿತಾ ಅವರು, ಯುವ ಪೀಳಿಗೆಯ ಜನರು ತಮ್ಮ ಹೃದಯದ ಬಗ್ಗೆ ಕಾಳಜಿವಹಿಸಿ, ನಿಯಮಿತವಾಗಿ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದ್ದರು. ತಮ್ಮ ವೃತ್ತಿ ಹಾಗೂ ವೈಯಕ್ತಿ ಜೀವನದಲ್ಲಿ ಅವರ ದಿಟ್ಟ ನಿರ್ಧಾರಗಳು ಮೂಲಕ ನಟಿ ಅನೇಕ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಇದೇ ಕಾರಣಕ್ಕೆ ಅನೇಕ ಮೆಚ್ಚುಗೆ ತುಂಬಿದ ಕಾಮೆಂಟ್ಗಳು ಅವರಿಗೆ ವ್ಯಕ್ತವಾಗುತ್ತದೆ. ಈ ಸಂಬಂಧ ಬರೆದಿರುವ ಅಭಿಮಾನಿಯೊಬ್ಬರು, ಎಷ್ಟು ಪ್ರೇರಣಾದಾಯಕ. ನೀವು ದೀರ್ಘ ಮತ್ತು ಆರೋಗ್ಯಯುತ ಜೀವನ ಕಳೆಯಬೇಕು. ಸುಶ್ಮಿತಾ ಸೇನ್ ಅವರಂತಹ ಅನೇಕ ಜನರು ನಮಗೆ ಬೇಕು. ನಾವು ಉತ್ತಮವಾದದ್ದನ್ನು ಮಾತ್ರ ನಿರೀಕ್ಷಿಸಬಹುದು. ಎಲ್ಲರಿಗೂ ಉತ್ತಮವಾದದ್ದನ್ನು ನಾನು ಭಾವಿಸುತ್ತೇನೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ದೇವರ ಆಶೀರ್ವಾದ ಇರಲಿ ಎಂದಿದ್ದಾರೆ.
ಇನ್ನೊಬ್ಬ ಅಭಿಮಾನಿ ಸಮರ್ಪಣೆಯೇ ಉತ್ತಮ ಎಂದಿದ್ದಾರೆ. ಇನ್ನು ರೊಹ್ಮನ್ ಶಾಲ್ ಅವರ ಕಾಮೆಂಟ್ಗೆ ಸುಶ್ಮಿತಾ ಪ್ರತಿಕ್ರಿಯಿಸಿದ್ದ ಧನ್ಯವಾದಗಳು ಶಿಕ್ಷಕರೇ ಎಂದಿದ್ದಾರೆ.
ಆರ್ಯ 3ಯಲ್ಲಿ ಬ್ಯುಸಿ: ಸದ್ಯ ಈ ನಟಿ ವೆಬ್ ಸಿರೀಸ್ ಆರ್ಯ ಸೀಸನ್ 3ರ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಾಲಿ ಚಿತ್ರದ ಡಬ್ಬಿಂಗ್ ಅನ್ನು ಅವರು ಮುಗಿಸಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಸುಶ್ಮಿತಾ ಶ್ರೀಗೌರಿ ಸಾವಂತ್ ಅವರ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ತೃತೀಯ ಲಿಂಗಿ ಪಾತ್ರ ಮಾಡಲಿದ್ದಾರೆ.
ಇದನ್ನೂ ಓದಿ: ಮಂಗಳಮುಖಿಯರು ಚಪ್ಪಾಳೆ ತಟ್ಟುವುದೇಕೆ?: ಸುಶ್ಮಿತಾ ಸೇನ್ ಸಾಮಾಜಿಕ ಸಂದೇಶ- ವಿಡಿಯೋ