ETV Bharat / entertainment

ಸಿಕ್ಕಿಂ ಪ್ರವಾಹದಲ್ಲಿ ತೆಲುಗು ಹಿರಿಯ ನಟಿ ಸರಳ ಕುಮಾರಿ ನಾಪತ್ತೆ: ತಾಯಿಯನ್ನು ಪತ್ತೆ ಹಚ್ಚುವಂತೆ ಮಗಳ ಮನವಿ - Sarala Kumari missing in Sikkim floods

ತೆಲುಗು ಹಿರಿಯ ನಟಿ ಸರಳ ಕುಮಾರಿ ಅವರು ಸಿಕ್ಕಿಂ ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ.

actress Sarala Kumari
ತೆಲುಗು ಹಿರಿಯ ನಟಿ ಸರಳ ಕುಮಾರಿ
author img

By ETV Bharat Karnataka Team

Published : Oct 8, 2023, 10:13 AM IST

ಸಿಕ್ಕಿಂ ಮೇಘ ಸ್ಪೋಟದಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟ ಜನರ ಸಂಖ್ಯೆ 30ಕ್ಕೇರಿದೆ. ನಾಪತ್ತೆಯಾದವರ ಸಂಖ್ಯೆ 80 ದಾಟಿದೆ. ತೆಲುಗು ಚಿತ್ರರಂಗದ ಹಿರಿಯ ನಟಿ ಸರಳ ಕುಮಾರಿ ಅವರೂ ಕೂಡಾ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ನೆಲೆಸಿರುವ ಇವರ ಪುತ್ರಿ ನಬಿತಾ ತಮ್ಮ ತಾಯಿಯನ್ನು ಪತ್ತೆ ಹಚ್ಚುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಕ್ಟೋಬರ್ 2 ರಂದು ಪ್ರವಾಸ ಕೈಗೊಂಡಿದ್ದ ನಟಿ: 1983 ರಲ್ಲಿ 'ಮಿಸ್​ ಆಂಧ್ರಪ್ರದೇಶ್'​ ಆಗಿ ಹೊರಹೊಮ್ಮಿದ ನಂತರ ಸರಳ ಕುಮಾರಿ ಸಿನಿಮಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ದಾನವೀರಶೂರಕರ್ಣ, ಸಂಘರ್ಷನ್​ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಹೈದರಾಬಾದ್‌ನ ಹೈಟೆಕ್ ಸಿಟಿ ಬಳಿ ನೆಲೆಸಿರುವ ಸರಳ ಕುಮಾರಿ ತಮ್ಮ ಪರಿಚಯಸ್ಥರೊಂದಿಗೆ ಅಕ್ಟೋಬರ್ 2 ರಂದು ಸಿಕ್ಕಿಂ ಪ್ರವಾಸ ತೆರಳಿದ್ದರು. ಈ ಕುರಿತು ಅಮೆರಿಕದಲ್ಲಿರುವ ಮಗಳಿಗೆ ಮಾಹಿತಿ ನೀಡಿದ್ದರು.

ಪುತ್ರಿ ನಬಿತಾ ಮಾಹಿತಿ: ಸಿಕ್ಕಿಂನ ಹೋಟೆಲ್‌ವೊಂದರಲ್ಲಿ ಅವರು ತಂಗಿದ್ದರು. ಆದರೆ, ಇತ್ತೀಚೆಗೆ ಸಂಭವಿಸಿರುವ ಪ್ರವಾಹದ ಬಳಿಕ ಸರಳ ಕುಮಾರಿ ಅವರ ಪತ್ತೆಯಿಲ್ಲ. ನಟಿಯ ಕುರಿತು ಯಾವುದೇ ಮಾಹಿತಿ ಸಿಗದ ಕಾರಣ ಮಗಳು ಕಳವಳ ವ್ಯಕ್ತಪಡಿಸಿದ್ದಾರೆ. "ಅಕ್ಟೋಬರ್ 3 ರಂದು ನಾನು ನನ್ನ ತಾಯಿಯೊಂದಿಗೆ ಕೊನೆಯ ಬಾರಿಗೆ ಮಾತನಾಡಿದೆ. ಅವರು ಯಾವುದೇ ಹೆಚ್ಚಿನ ಮಾಹಿತಿಯನ್ನು ನನಗೆ ನೀಡಲಿಲ್ಲ. ಮಾಧ್ಯಮದ ಮೂಲಕ ಪ್ರವಾಹದ ಬಗ್ಗೆ ತಿಳಿದುಕೊಂಡೆ. ಸೇನೆಯನ್ನು ಸಂಪರ್ಕಿಸಲು ಯತ್ನಿಸಿದ್ದು, ಅದು ಕೂಡ ವಿಫಲವಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಸರ್ಕಾರಕ್ಕೆ ಮನವಿ: ತಮ್ಮ ತಾಯಿಯನ್ನು ಪತ್ತೆ ಹಚ್ಚುವಂತೆ ತೆಲಂಗಾಣ ಸರ್ಕಾರಕ್ಕೆ ನಬಿತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಿಖಿಲ್​ ಶೂಟಿಂಗ್​ ಸೆಟ್​ಗೆ ಯುವ ರಾಜ್​ಕುಮಾರ್ ಸರ್​ಪ್ರೈಸ್​ ವಿಸಿಟ್​; ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ

ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಂತೆ, ಹೆಚ್ಚಿನ ಮೃತದೇಹಗಳು ಪತ್ತೆಯಾಗಬಹುದು ಎಂದು ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಲ್ಬಜಾರ್, ಮೇನಗುರಿ, ಜಲ್ಪೈಗುರಿ ಜಿಲ್ಲೆಯ ಜಲ್ಪೈಗುರಿ ಟೌನ್ ಮತ್ತು ನೆರೆಯ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈವರೆಗೆ ಪತ್ತೆಯಾದ ಮೃತದೇಹಗಳನ್ನು ಇರಿಸಲಾಗಿದೆ.

ಇದನ್ನೂ ಓದಿ: ಹೊಸಬರ 'ಆಪಲ್​ ಕಟ್'​ ಸಿನಿಮಾಗೆ ಸಿಕ್ತು ವಿಕಟಕವಿ ಯೋಗರಾಜ್​ ಭಟ್​ ಅಭಯಹಸ್ತ

ಅನೇಕ ಪ್ರವಾಸಿಗರು ಸಿಕ್ಕಿಂನಾದ್ಯಂತ ಇನ್ನೂ ವಿವಿಧ ಸ್ಥಳಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗೆ ಸಿಲುಕಿಕೊಂಡವರ ಸಂಖ್ಯೆ 3,000 ಎಂದು ಅಂದಾಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಹವಾಮಾನ ಸುಧಾರಿಸಿದ್ದು ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.