ETV Bharat / entertainment

'ಲವ್ ಬರ್ಡ್ಸ್' ಲಾಯರ್ ಆದ ಸಂಯುಕ್ತ ಹೊರನಾಡು.. ಫಸ್ಟ್ ಲುಕ್​ ರಿಲೀಸ್! - ಈಟಿವಿ ಭಾರತ ಕನ್ನಡ

'ಲವ್ ಬರ್ಡ್ಸ್' ಕನ್ನಡ ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಲಾಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Samyukta Hornad
ಸಂಯುಕ್ತ ಹೊರನಾಡು
author img

By

Published : Jan 21, 2023, 9:19 AM IST

ಕನ್ನಡ ಚಿತ್ರರಂಗದಲ್ಲಿ 'ಲವ್​ ಮಾಕ್​ಟೈಲ್'​ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಆದಿ ಮತ್ತು ನಿಧಿಮಾ ಜೋಡಿ ಎಲ್ಲರ ಫೇವರಿಟ್​​ ಆಗಿತ್ತು. ಇದೇ ಜೋಡಿ ಮತ್ತೊಮ್ಮೆ 'ಲವ್ ಬರ್ಡ್ಸ್' ಚಿತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕ್ಲ್ಯಾಪ್ ಮಾಡಿದ ಕೊನೆಯ ಚಿತ್ರವಾಗಿರೋ 'ಲವ್ ಬರ್ಡ್ಸ್' ಸಿನಿಮಾದ ಟೀಸರನ್ನು ಈಗಾಗಲೇ ನಟ ವಿಜಯ ರಾಘವೇಂದ್ರ ಹಾಗೂ ಅಜಯ್ ರಾವ್ ಬಿಡುಗಡೆಗೊಳಿಸಿದ್ದಾರೆ.

Samyukta Hornad
'ಲವ್ ಬರ್ಡ್ಸ್' ಚಿತ್ರದ ಲಾಯರ್ ಪಾತ್ರದಲ್ಲಿ ಸಂಯುಕ್ತ ಹೊರನಾಡು

ಇನ್ನೂ ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ ಪ್ರತಿಭಾನ್ವಿತ ನಟಿ ಸಂಯುಕ್ತ ಹೊರನಾಡು ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದರಲ್ಲಿ ಸೈ ಎನಿಸಿಕೊಂಡಿರುವ ಸಂಯುಕ್ತಾ 'ಲವ್ ಬರ್ಡ್ಸ್' ಸಿನಿಮಾದಲ್ಲಿ ಲಾಯರ್​ ಆಗಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲ ಕೇಸ್​ಗಳಲ್ಲೂ ಯಶಸ್ವಿ ಕಂಡು ಸಕ್ಸಸ್​ಫುಲ್​ ವಕೀಲೆಯಾಗಿ ಅಭಿನಯಿಸಿದ್ದಾರೆ. ಮಾಯಾ ಎಂಬ ಪಾತ್ರದಲ್ಲಿ ನಟಿಸಿರುವ ಈಕೆ ಚಿತ್ರದ ನಾಯಕ, ನಾಯಕಿಗೆ ಗೆಳತಿಯಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

'ಯಂಗ್​ ಲಾಯರ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಅವರ ಪಾತ್ರಕ್ಕೆ ಸರಿಹೊಂದುವಂತೆ ಕಾಸ್ಟ್ಯೂಮ್ಸ್​ಗಳನ್ನು ಬಳಸಿಕೊಳ್ಳಲಾಗಿದೆ. ಅವರ ಮಾಯಾ ಪಾತ್ರದ ಫಸ್ಟ್​ ಲುಕ್​ ಅನ್ನು ಬಿಡುಗಡೆ ಮಾಡಿದ್ದೇವೆ' ಎಂದು 'ಲವ್ ಬರ್ಡ್ಸ್' ನಿರ್ದೇಶಕ ಪಿ.ಸಿ ಶೇಖರ್​ ತಿಳಿಸಿದ್ದಾರೆ. ಇನ್ನು 'ಲವ್ ಬರ್ಡ್ಸ್' ಚಿತ್ರದ ನಾಯಕ ದೀಪಕ್​ ಮತ್ತು ನಾಯಕಿ ಪೂಜಾ ಪಾತ್ರದಲ್ಲಿ ರಿಯಲ್​ ಜೋಡಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನ ನಾಗರಾಜ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಲವ್ ಬರ್ಡ್ಸ್ ಟೀಸರ್​ ರಿಲೀಸ್​: ಚಿತ್ರಕ್ಕೆ ಸಾಥ್ ನೀಡಿದ ವಿಜಯ ರಾಘವೇಂದ್ರ, ಅಜಯ್ ರಾವ್

ಈ ಚಿತ್ರವನ್ನು ಶ್ರೀಬನಶಂಕರಿ ಚಿತ್ರಾಲಯ ಲಾಂಛನದ ಅಡಿಯಲ್ಲಿ ಕಡ್ಡಿಪುಡಿ ಚಂದ್ರು ಅವರು ನಿರ್ಮಾಣ ಮಾಡಿದ್ದು, ಶಕ್ತಿ ಶೇಖರ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕವಿರಾಜ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ 'ಲವ್ ಬರ್ಡ್ಸ್' ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.​

ಸಂಯುಕ್ತಾ ಹೊರನಾಡು ಪರಿಚಯ: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪ್ರಸಿದ್ದಿ ಪಡೆದಿರುವ ನಟಿ, ಸರಳ ಹಾಗೂ ಸಹಜ ಅಭಿನಯದ ಮೂಲಕ ಮನೆಮಾತಾದ ಸುಧಾ ಬೆಳವಡಿ ಅವರ ಪುತ್ರಿ ಸಂಯುಕ್ತಾ ಹೊರನಾಡು. ನಟ ದಿಗಂತ್ ಅಭಿನಯದ ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶ ಪಡೆದು, ತಮ್ಮ ಮೊದಲ ಚಿತ್ರದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಮುಗ್ದ ಅಭಿನಯದ ಮೂಲಕ ಜನರಿಗಿಷ್ಟವಾದ ನಟಿ ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಒಗ್ಗರಣೆ ಚಿತ್ರದ ನಟನೆಗೆ ಫಿಲ್ಮ್​ಫೇರ್​ನ ಬೆಸ್ಟ್​ ಸಪೋರ್ಟಿಂಗ್ ನಟಿ ಎಂಬ ಪ್ರಶಸ್ತಿಯನ್ನು ಸಂಯುಕ್ತಾ ಪಡೆದರು. ಕಾಫಿತೋಟ, ನೀನೇ ಬರಿ ನೀನೇ, ಜಿಗರ್ಥಂಡಾ, ಸರ್ಕಾರಿ ಕೆಲಸ ದೇವರ ಕೆಲಸ, ಮಾರಿಕೊಂಡವರು, ದಯವಿಟ್ಟು ಗಮನಿಸಿ, ತ್ರಾಯ, ನಾನು ಮತ್ತು ಗುಂಡ, ಬರ್ಫಿ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಸಹ ಅಭಿನಯಿಸಿದ್ದು, ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಇದನ್ನೂ ಓದಿ: ಯುವನಟ ರಥ ಕಿರಣ್​ ಅಭಿನಯದ ಅಭಿರಾಮಚಂದ್ರ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.