'ನ್ಯಾಷನಲ್ ಕ್ರಶ್' ಖ್ಯಾತಿಯ ರಶ್ಮಿಕಾ ಮಂದಣ್ಣ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸರಣಿ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಆಗಾಗ್ಗೆ ಪ್ರಮುಖ ಈವೆಂಟ್ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಾರೆ. ನಟಿಯ ನಟನೆ ಮತ್ತು ಸೌಂದರ್ಯದ ಬಗ್ಗೆ ಅಭಿಮಾನಿಗಳು ಮಾತ್ರವಲ್ಲದೇ ದಕ್ಷಿಣ ಚಿತ್ರರಂಗದಿಂದ ಹಿಡಿದು ಬಾಲಿವುಡ್‌ನ ಸೆಲೆಬ್ರಿಟಿಗಳಲ್ಲೂ ಚರ್ಚೆ ನಡೆಯುತ್ತವೆ. ಅಭಿನಯದ ಜೊತೆಗೆ ಸೌಂದರ್ಯದ ಆಧಾರದ ಮೇಲೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್‌ನಲ್ಲೂ ಅವಕಾಶ ಸಿಕ್ಕಿದೆ.
-
Rashmika's dance in Dubai for kalyan Jewellers..
— Lovely Gorgeous Rashmika (@Lovely_Rash) October 1, 2023 " class="align-text-top noRightClick twitterSection" data="
Rashu Ma'am ❤❤❤❤🥰🥰✨🎆@iamRashmika Ma'am ❤❤❤❤🥰🥰✨🎆#KalyanJewellers #Collab #RashmikaMandanna #rashmikamandanna pic.twitter.com/KUiJYpfG3V
">Rashmika's dance in Dubai for kalyan Jewellers..
— Lovely Gorgeous Rashmika (@Lovely_Rash) October 1, 2023
Rashu Ma'am ❤❤❤❤🥰🥰✨🎆@iamRashmika Ma'am ❤❤❤❤🥰🥰✨🎆#KalyanJewellers #Collab #RashmikaMandanna #rashmikamandanna pic.twitter.com/KUiJYpfG3VRashmika's dance in Dubai for kalyan Jewellers..
— Lovely Gorgeous Rashmika (@Lovely_Rash) October 1, 2023
Rashu Ma'am ❤❤❤❤🥰🥰✨🎆@iamRashmika Ma'am ❤❤❤❤🥰🥰✨🎆#KalyanJewellers #Collab #RashmikaMandanna #rashmikamandanna pic.twitter.com/KUiJYpfG3V
ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿ: ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಹಿಟ್ ನಟಿಯರ ಪೈಕಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸದ್ಯ ಬಹುಬೇಡಿಕೆ ನಟಿಯಾಗಿ ಬಹುಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ, ಟಾಲಿವುಡ್ ನೆಲದಲ್ಲಿ ತಮ್ಮ ಸ್ಥಾನ ಭ್ರದಪಡಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ದಬೈ ಪ್ರವಾಸ: ನಟಿಯ ಬಾಲಿವುಡ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ನಟಿಗೆ ಸಂಬಂಧಿಸಿದ ಸುದ್ದಿಯೊಂದು ಸಖತ್ ಸದ್ದು ಮಾಡುತ್ತಿದೆ. ನಟಿ ಸುದ್ದಿಯಾಗಲು ಕಾರಣ, ಇತ್ತೀಚಿನ ದುಬೈ ಪ್ರವಾಸ. ದುಬೈ ಪ್ರವಾಸದ ವಿಡಿಯೋವೊಂದು ಆನ್ನೈನ್ನಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳ ನಡುವೆ ನಿಂತು ಸಖತ್ ಸ್ಟೆಪ್ ಹಾಕಿದ್ದಾರೆ. ತಮ್ಮ ವಾರಿಸು ಚಿತ್ರದ ಹಿಟ್ ಸಾಂಗ್ ರಂಜಿತಮೆಗೆ ನಟಿ ಮೈ ಬಳುಕಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಮೆಚ್ಚಿನ ನಟ ದಳಪತಿ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಚಿತ್ರವಿದು.
ರಶ್ಮಿಕಾ ಮಂದಣ್ಣ ಡ್ಯಾನ್ಸ್: ದುಬೈನಲ್ಲಿ ಜ್ಯುವೆಲರಿ ಶಾಪ್ ಲಾಂಚ್ ಈವೆಮಟ್ಗೆ ಅತಿಥಿಯಾಗಿ ರಶ್ಮಿಕಾ ಮಂದಣ್ಣ ಭೇಟಿ ಕೊಟ್ಟಿದ್ದರು. ಸ್ಟೈಲಿಶ್ ಸೀರೆಯಲ್ಲಿ ನಟಿ ಕಂಗೊಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸೀರೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಾರಂಭದಲ್ಲಿ ನಟಿಯನ್ನು ನೃತ್ಯ ಮಾಡಲು ನಿರೂಪಕರು ವಿನಂತಿದ್ದು, ರಶ್ಮಿಕಾ ತಮ್ಮದೇ ಚಿತ್ರದ ರಂಜಿತಮೆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಡ್ಯಾನ್ಸ್ ವಿಡಿಯೋ ವೈರಲ್: ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ!
ಸ್ಯಾಂಡಲ್ವುಡ್ನಿಂದ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿಯೂ ಅವಕಾಶ ಪಡೆದುಕೊಂಡಿದ್ದಾರೆ. ಕೊನೆಯದಾಗಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟ ರಣ್ಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಜೊತೆ ಅನಿಮಲ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ತೆರೆಗಪ್ಪಳಿಸಲಿದೆ. ಇನ್ನೂ ದಕ್ಷಿಣದ ಬಹುನಿರೀಕ್ಷಿತ ಪುಷ್ಪ 2 ಶೂಟಿಂಗ್ ಚುರುಕುಗೊಂಡಿದೆ.
ಇದನ್ನೂ ಓದಿ: ಪ್ರಭಾಸ್ ಕೆನ್ನೆಗೆ ಮುದ್ದಿನ ಪೆಟ್ಟು ಕೊಟ್ಟ ಮಹಿಳಾ ಅಭಿಮಾನಿ: ವಿಡಿಯೋ ವೈರಲ್