ETV Bharat / entertainment

'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತೆ: ರಮ್ಯಾ - ರಾಜ್ಯಾದ್ಯಂತ ಸುದ್ದಿ ಮಾಡುವ ಭರವಸೆ

‘ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ’ ಪ್ರೀತಿ, ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತದೆ ಎಂದು ಮೋಹಕ ತಾರೆ ರಮ್ಯಾ ಹೇಳಿದ್ದಾರೆ.

Actress Ramya talk about Swati Muttina Male Haniye  Swati Muttina Male Haniye movie  Swati Muttina Male Haniye movie release date  Swati Muttina Male Haniye movie songs  ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ  ಮೋಹಕ ತಾರೆ ರಮ್ಯಾ  ರಾಜ್ಯಾದ್ಯಂತ ಸುದ್ದಿ ಮಾಡುವ ಭರವಸೆ  ನಟ ನಿರ್ದೇಶಕ ರಾಜ್ ಬಿ ಶೆಟ್ಟಿ
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಪೋಸ್ಟರ್​
author img

By

Published : Jan 13, 2023, 2:29 PM IST

2023ನೇ ವರ್ಷ ಕನ್ನಡ ಚಿತ್ರರಂಗಕ್ಕೆ ಲಕ್ಕಿ ವರ್ಷ ಆಗುವ ಸೂಚನೆಗಳು ಸಿಗ್ತಾ ಇವೆ. ಯಾಕೆಂದರೆ ಈ ವರ್ಷ ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಹೊಸ ಕಂಟೆಂಟ್ ಇರುವ ಚಿತ್ರಗಳು ಬರ್ತಾ ಇವೆ. ಈ ಸಾಲಿನಲ್ಲಿ ಮೋಹಕ ತಾರೆ ರಮ್ಯಾ ನಿರ್ಮಾಣ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವೂ ಒಂದಾಗಿದೆ.

Actress Ramya talk about Swati Muttina Male Haniye  Swati Muttina Male Haniye movie  Swati Muttina Male Haniye movie release date  Swati Muttina Male Haniye movie songs  ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ  ಮೋಹಕ ತಾರೆ ರಮ್ಯಾ  ರಾಜ್ಯಾದ್ಯಂತ ಸುದ್ದಿ ಮಾಡುವ ಭರವಸೆ  ನಟ ನಿರ್ದೇಶಕ ರಾಜ್ ಬಿ ಶೆಟ್ಟಿ
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಪೋಸ್ಟರ್​

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಕನ್ನಡ ಚಿತ್ರರಂಗ ಅಲ್ಲದೇ ರಾಜ್ಯಾದ್ಯಂತ ಸುದ್ದಿ ಮಾಡುವ ಭರವಸೆ ಮೂಡಿಸುತ್ತಿದೆ. ಸಿನಿ ರಸಿಕರು ಕಾತುರದಿಂದ ಕಾಯುತ್ತಿರುವ ಚಿತ್ರವೊಂದರಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರವೂ ಒಂದಾಗಿದೆ. ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ, ತಮ್ಮ ನಿರ್ಮಾಣ ಸಂಸ್ಥೆಯಾದ 'ಆಪಲ್ ಬಾಕ್ಸ್ ಸ್ಟುಡಿಯೋಸ್' ವತಿಯಿಂದ ಮೊದಲ ಬಾರಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ರಮ್ಯಾ 'ಲೈಟರ್ ಬುದ್ಧ ಫಿಲಂಸ್' ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶಿಸುತ್ತಿದ್ದು, ಅವರೊಂದಿಗೆ ಸಿರಿ ರವಿಕುಮಾರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ದೃಶ್ಯ

ಈ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಬಗ್ಗೆ ಮಾತನಾಡಿರುವ ನಟಿ-ನಿರ್ಮಾಪಕಿ ರಮ್ಯಾ, ಈ ಚಿತ್ರವು ನಮ್ಮೆಲ್ಲರನ್ನು ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತೆ ಎಂದು ವಿಶ್ವಾಸದಿಂದ ತಿಳಿಸಿದರು. ಮೊದಲ ಬಾರಿ ನಾನು ನಿರ್ಮಾಪಕಿಯ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಕಲಿತೆ. ನನಗೆ ಇದೊಂದು ಅದ್ಭುತವಾದ ಅನುಭವ. ಈ ಚಿತ್ರವು ಪ್ರೀತಿ ಹಾಗು ಆತ್ಮಶೋಧನೆಯನ್ನು ಕುರಿತು ಒಂದು ಸುಂದರ, ಕಾವ್ಯಾತ್ಮಕ ಹಾಗು ಸೌಮ್ಯ ಅನುಭವವಾಗಲಿದೆ ಅಂತಾ ರಮ್ಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಟಿ

ಸಿನಿಮಾ 2022 ವಿಜಯದಶಮಿಯಂದು ಘೋಷಿಸಲಾಗಿದ್ದು, ಹಲವಾರು ಮನೋಜ್ಞ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಮೊದಲನೇ ನೋಟದ ಪೋಸ್ಟರ್ ಹಾಗು ಮುಖ್ಯ ಪಾತ್ರಗಳನ್ನು ಪರಿಚಯಿಸಲು ಬಿಡುಗಡೆ ಮಾಡಿದ ಪೋಸ್ಟರ್​ಗಳ ಮೂಲಕ ಈಗಾಗಲೇ ಎಲ್ಲರ ಗಮನವನ್ನು ಸೆಳೆದಿದೆ. 'ಪ್ರೇರಣಾ' ಮತ್ತು 'ಅನಿಕೇತ್' ಎಂಬ ಮುಖ್ಯ ಪಾತ್ರಗಳಲ್ಲಿ ಸಿರಿ ರವಿಕುಮಾರ್ ಹಾಗು ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ಪ್ರತಿಭಾನ್ವಿತ ನಟರ ದಂಡೇ ಇದೆ. ಮುಖ್ಯವಾಗಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನಿತರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಹಾಗು ಸಂಕಲನದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸದ್ಯ ಪೋಸ್ಟರ್​ನಿಂದಲೇ ಕುತೂಹಲ ಹುಟ್ಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಮೈಸೂರಿನ ಆದಿಲ್‌ ಜೊತೆ ರಾಖಿ ಸಾವಂತ್‌ ಶಾದಿ: ಇಸ್ಲಾಂಗೆ ಮತಾಂತರವಾಗಿ 'ಪಾತಿಮಾ' ಹೆಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.