ETV Bharat / entertainment

ಕರುನಾಡಲ್ಲಿ 'ಕಾವೇರಿ' ಕಿಚ್ಚು; ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ರಚ್ಚು - ಕಾವೇರಿ ಹೋರಾಟಕ್ಕೆ ಬೆಂಬಲ

ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮುಂದುವರೆದಿದ್ದು, ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸಿಲ್ಲ ಎಂದು ನಟಿ ರಚಿತಾ ರಾಮ್​ ಹೇಳಿಕೊಂಡಿದ್ದಾರೆ.

Actress Rachita ram birthday celebration update
ಕರುನಾಡಲ್ಲಿ 'ಕಾವೇರಿ' ಕಿಚ್ಚು; ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ರಚ್ಚು
author img

By ETV Bharat Karnataka Team

Published : Oct 1, 2023, 7:54 PM IST

ರಾಜ್ಯಾದ್ಯಂತ ಕಾವೇರಿ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಸೆಪ್ಟೆಂಬರ್​ 29ರಂದು ಕರ್ನಾಟಕ ಬಂದ್​ ಮಾಡಲಾಗಿತ್ತು. ಚಿತ್ರನಟರು ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ನಟಿ ರಚಿತಾ ರಾಮ್ ಕೂಡ​ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್​ ಹಾಕುವ ಮೂಲಕ ಕಾವೇರಿ ಹೋರಾಟಕ್ಕೆ ಜೊತೆಯಾಗಿದ್ದಾರೆ.

ಅಕ್ಟೋಬರ್​ 3ರಂದು ರಚಿತಾ ರಾಮ್​ ಅವರ ಹುಟ್ಟುಹಬ್ಬ. ಪ್ರತಿ ವರ್ಷವೂ ಅವರು ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಅಭಿಮಾನಿಗಳು ಮಧ್ಯರಾತ್ರಿಯೇ ಅವರ ಮನೆ ಮುಂದೆ ಕೇಕ್​ ಹಿಡಿದುಕೊಂಡು ಜಮಾಯಿಸುತ್ತಾರೆ. ನಟಿ ಕೇಕ್​ ಕತ್ತರಿಸಿ, ಖುಷಿಯಿಂದ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್​ ಮಾಡುತ್ತಾರೆ. ಆದರೆ, ಈ ಬಾರಿ ಇಂತಹ ಆಚರಣೆಗೆ ನಟಿ ಒಲ್ಲೆ ಎಂದಿದ್ದಾರೆ. ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡುತ್ತಿರುವಾಗ ತಾವು ಮಾತ್ರ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಎಂಬುದು ಅವರ ಮಾತು.

ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಚಿತಾ, "ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ (ಅಕ್ಟೋಬರ್​ 3) ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರೊಮ್ಯಾಂಟಿಕ್ ಮೂಡ್​ನಲ್ಲಿ ಸತೀಶ್ ನೀನಾಸಂ-ಡಿಂಪಲ್​ ಕ್ವೀನ್​: ಮ್ಯಾಟ್ನಿ ಬಿಡುಗಡೆಗೆ ಸಜ್ಜು

ಈ ಮೂಲಕ ತಮ್ಮ ಈ ವರ್ಷದ ಬರ್ತ್​ಡೇ ಸೆಲೆಬ್ರೇಶನ್​ಗೆ ಬ್ರೇಕ್​ ಹಾಕಿರುವುದಾಗಿ ರಚಿತಾ ರಾಮ್​ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಪೋಸ್ಟ್​ ಅವರ ಫ್ಯಾನ್ಸ್​ಗೆ ನಿರಾಶೆ ಉಂಟು ಮಾಡಿದರೂ, ಅವರ ಆಲೋಚನೆಯನ್ನು ಮೆಚ್ಚಿಕೊಂಡಿದ್ದಾರೆ. 'ಒಳ್ಳೆಯ ನಿರ್ಧಾರ' ಎಂದು ಡಿಂಪಲ್​ ಕ್ವೀನ್​ ನಡೆಯನ್ನು ಶ್ಲಾಘಿಸಿದ್ದಾರೆ.

ರಚಿತಾ ರಾಮ್ ಕುರಿತು..: 1992ರ ಅಕ್ಟೋಬರ್ 3ರಂದು ಜನಿಸಿದ ರಚಿತಾ ರಾಮ್‌ ಈಗ ಸ್ಯಾಂಡಲ್​​ವುಡ್​​ನಲ್ಲಿ ಬಹುಬೇಡಿಕೆಯ ನಟಿಯೂ ಹೌದು. 'ಅರಸಿ' ಧಾರಾವಾಹಿಯ ಮೂಲಕ ಹೆಸರು ಗಳಿಸಿದ ರಚಿತಾ ರಾಮ್, ನಂತರ ದರ್ಶನ್ ಜೊತೆ 'ಬುಲ್​ ಬುಲ್​​' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇದಾದ ಬಳಿಕ ಗಣೇಶ್‌ ಅಭಿನಯದ 'ದಿಲ್ ರಂಗೀಲಾ', ಸುದೀಪ್‌ ನಟನೆಯ 'ರನ್ನ' ಸೇರಿದಂತೆ 'ರಥಾವರ', 'ಚಕ್ರವ್ಯೂಹ', 'ಲವ್​ ಯೂ ರಚ್ಚು', 'ಕ್ರಾಂತಿ' ಮುಂತಾದ ಹಲವು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಗಳ ಮನಸ್ಸು ಗೆದ್ದಿದ್ದಾರೆ.

ಅಷ್ಟೇ ಅಲ್ಲದೆ, 'ರನ್ನ' ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಸೌಥ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಹಿರಿತೆರೆಯಲ್ಲಿ ಮಾತ್ರವಲ್ಲ, ಕಿರುತೆರೆಯಲ್ಲೂ ರಚಿತಾ ಸೈ ಎನಿಸಿಕೊಂಡವರು. ಕನ್ನಡದ ರಿಯಾಲಿಟಿ ಶೋ 'ಕಾಮಿಡಿ ಟಾಕೀಸ್', 'ಮಜಾಭಾರತ- 2', 'ಸೂಪರ್​ ಕ್ವೀನ್​' ಮಾತ್ರವಲ್ಲದೇ ಸದ್ಯ 'ಭರ್ಜರಿ ಬ್ಯಾಚುಲರ್ಸ್​' ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಇವರ ಕೈಯಲ್ಲಿ ಕೆಲವು ಸಿನಿಮಾಗಳಿವೆ.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ 2' ಟೀಸರ್ ರಿಲೀಸ್​: ಅದ್ಭುತ ಪ್ರೇಮಕಥೆಯ ಶೂಟಿಂಗ್​ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.