ETV Bharat / entertainment

ನಟಿ ಪರಿಣೀತಿ ಚೋಪ್ರಾ- ಆಪ್ ಸಂಸದ ರಾಘವ್​ ಚಡ್ಡಾ ಅದ್ಧೂರಿ ನಿಶ್ಚಿತಾರ್ಥ

author img

By

Published : May 14, 2023, 8:51 AM IST

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Parineeti Chopra gets engaged to Raghav Chadha
ಪರಿಣಿತಿ ಚೋಪ್ರಾ- ರಾಘವ್​ ಚಡ್ಡಾ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರ ನಿಶ್ಚಿತಾರ್ಥ ಶನಿವಾರ ನೆರವೇರಿತು. ಸಮಾರಂಭವು ಸಿಖ್​ ಸಂಪ್ರದಾಯದಂತೆ ನಡೆದಿದೆ. ಎಂಗೇಜ್​ಮೆಂಟ್​ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ರಾಜಕಾರಣಿಗಳು ಸೇರಿದಂತೆ ಆಪ್ತರಷ್ಟೇ ಪಾಲ್ಗೊಂಡಿದ್ದರು.

ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಕಾರ್ಯಕ್ರಮ ನಡೆಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಓಬ್ರೇನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಸುಮಾರು 150 ಅತಿಥಿಗಳು ಭಾಗಿಯಾಗಿದ್ದರು.

  • Everything I prayed for .. She said yes! 💍
    ਵਾਹਿਗੁਰੂ ਜੀ ਮਿਹਰ ਕਰਨ। 🙏🏻 pic.twitter.com/OquwJwHTDL

    — Raghav Chadha (@raghav_chadha) May 13, 2023 " class="align-text-top noRightClick twitterSection" data=" ">

ರಾಘವ್ ಅವರು ಪವನ್ ಸಚ್‌ದೇವ್ ವಿನ್ಯಾಸಗೊಳಿಸಿದ ಅಚ್ಕನ್ ಧರಿಸಿದ್ದರು. ಮೂಲಗಳ ಪ್ರಕಾರ ಖ್ಯಾತ ಡಿಸೈನರ್​ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪನ್ನು ಪರಿಣೀತಿ ಚೋಪ್ರಾ ಧರಿಸಿದ್ದರು. ಕಾರ್ಯಕ್ರಮದಲ್ಲಿ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಉಪಸ್ಥಿತರಿದ್ದರು. ಪ್ರಿಯಾಂಕಾ ಚೋಪ್ರಾ ನಿನ್ನೆ ಬೆಳಗ್ಗೆ ತನ್ನ ಸಹೋದರಿಯ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದರು.

ನಿಶ್ಚಿತಾರ್ಥದಲ್ಲಿ ಯಾರೂ ಮೊಬೈಲ್​ ಬಳಸುವಂತಿರಲಿಲ್ಲ. ಹೀಗಾಗಿ ಅಭಿಮಾನಿಗಳು ಪಿಗ್ಗಿ ಫೋಟೋಗಾಗಿ ಕಾಯುತ್ತಿದ್ದರು. ಬಳಿಕ ಈ ಜೋಡಿ ನಿಶ್ಚಿತಾರ್ಥ ಮುಗಿಸಿ ಮನೆಯಿಂದ ಹೊರಗೆ ಬಂದು ಪಾಪ್​ಗಳಿಗೆ ಚಂದನೆಯ ನಗೆ ಬೀರಿದರು. ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಕ್ಯಾಮರಾಗೆ ಕ್ಯೂಟ್​ ಸ್ಮೈಲ್​ ಕೊಟ್ಟರು. ಪ್ರಿಯಾಂಕಾ ಚೋಪ್ರಾ ಮತ್ತು ಕುಟುಂಬದ ಸದಸ್ಯರು ಹೊರಗಡೆ ನಿಂತಿದ್ದ ಪಾಪ್​ಗಳಿಗೆ ಸಿಹಿ ಹಂಚಿದರು.

ಇದನ್ನೂ ಓದಿ: ರಾಘವ್ ಚಡ್ಡಾ ಜೊತೆ ಮದುವೆ ವದಂತಿ: ಮೌನ ಮುರಿದ ಪರಿಣಿತಿ ಚೋಪ್ರಾ

ಪಿಗ್ಗಿಗೆ ಅಭಿಮಾನಿಗಳಿಂದ ಶುಭಾಶಯ: ಪರಿಣೀತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ನಿಶ್ಚಿತಾರ್ಥದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಕೊನೆಗೂ ನಿಮ್ಮನ್ನು ಹೀಗೆ ನೋಡಲು ಖುಷಿ ಆಗುತ್ತದೆ ಎಂದು ಫ್ಯಾನ್ಸ್​ ತಮ್ಮ ಸಂತಸವನ್ನು ಕಾಮೆಂಟ್​ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮಾರ್ಚ್ ತಿಂಗಳಲ್ಲಿ ಪದೇ ಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್​ ವದಂತಿ ಆರಂಭವಾಗಿತ್ತು. ಅದಾದ ಬಳಿಕವೂ ರೆಸ್ಟೋರೆಂಟ್​ ಹೊರಗೆ, ಏರ್​ಪೋರ್ಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಹಲವು ಗಣ್ಯರು ಸಹ ಪರೋಕ್ಷವಾಗಿ ಈ ಜೋಡಿ ಪ್ರೀತಿಯಲ್ಲಿರುವ ಬಗ್ಗೆ ಮಾತನಾಡಿದ್ದರು.

ಇತ್ತೀಚೆಗಷ್ಟೇ ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿ ಗಮನ ಸೆಳೆದಿದ್ದರು. ಪಂದ್ಯದ ಹಲವಾರು ಚಿತ್ರಗಳು ಮತ್ತು ವಿಡಿಯೋ ತುಣುಕುಗಳು ವೈರಲ್ ಆಗಿತ್ತು. ಒಂದು ಚಿತ್ರದಲ್ಲಿ, ಪರಿಣೀತಿ ರಾಘವ್ ಅವರ ಭುಜದ ಮೇಲೆ ಒರಗಿ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದರು. ಪ್ರೇಕ್ಷಕರು ಸ್ಟೇಡಿಯಂನಲ್ಲಿ ನಟಿಯನ್ನು ಅತ್ತಿಗೆ ಎಂದು ಕರೆದಿದ್ದರು. ಇನ್ನೂ ಪರಿಣೀತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ದೀರ್ಘಕಾಲದ ಸ್ನೇಹಿತರು ಕೂಡ ಹೌದು.

ಇದನ್ನೂ ಓದಿ: ಮದುವೆ ವಿಷಯ ಕೇಳುತ್ತಿದ್ದಂತೆ ಕೆನ್ನೆ ಕೆಂಪು ಮಾಡಿಕೊಂಡ ನಟಿ ಪರಿಣಿತಿ ಚೋಪ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.