ಮುಂಬೈ: ಪ್ರಭಾಸ್ ಮತ್ತು ನಟಿ ಕೃತಿ ಸನೋನ್ ಅಭಿನಯದ 'ಆದಿಪುರುಷ್' ಚಿತ್ರ ಬಿಡುಗಡೆಯಾದಾಗಿನಿಂದ ಟೀಕೆ- ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಅಲ್ಲದೇ, ಅನೇಕ ಕಡೆ ಸಿನಿಮಾಗೆ ನಿಷೇಧವೂ ವ್ಯಕ್ತವಾಗಿದೆ. ಬಿಡುಗಡೆಗೆ ಮುನ್ನ ಮತ್ತು ಬಿಡುಗಡೆ ನಂತರವೂ ವಿವಾದಗಳನ್ನು ಈ ಚಿತ್ರ ಎದುರಿಸಿದೆ. ಈ ನಡುವೆ ಈ ವಿವಾದಗಳಿಗೆ ಕಿವಿಗೊಡದಿರಲು ನಟಿ ಕೃತಿ ಸನೋನ್ ನಿರ್ಧರಿಸಿದ್ದಾರೆ. ಚಿತ್ರದ ಕುರಿತು ನಕಾರಾತ್ಮಕ ಟೀಕೆಗಳನ್ನು ಬದಿಗಿರಿಸಿರುವ ಅವರು, ಸಿನಿಮಾದ ಬಗ್ಗೆ ವ್ಯಕ್ತವಾಗುತ್ತಿರುವ ಸಕಾರಾತ್ಮಕ ಅಂಶಗಳನ್ನು ನೋಡುತ್ತಿದ್ದಾರೆ.
ಈ ಹಿನ್ನಲೆ ಸೋಮವಾರ, ತಾವು ಮೊದಲ ಬಾರಿಗೆ ಸೀತೆಯಾಗಿ ಅಭಿನಯಿಸಿದ ಪೌರಾಣಿಕ ಚಿತ್ರಕ್ಕೆ ಅಭಿಮಾನಿಗಳು ಪ್ರಶಂಸಿರುವ, ಹುರಿದುಂಬಿಸುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಮ್ ಸಿಯಾ ರಾಮ್ ಘೋಷಣೆಯನ್ನು ಕೇಳಬಹುದಾಗಿದೆ. ಈ ವಿಡಿಯೋ ಹಂಚಿಕೊಂಡಿರುವ ನಟಿ "ಚಪ್ಪಾಳೆ ಮತ್ತು ಪ್ರೋತ್ಸಾಹಕ್ಕೆ ಮಾತ್ರ ಗಮನ! ಜೈ ಸಿಯಾ ರಾಮ್" ಎಂದು ಅಡಿ ಬರಹ ಬರೆದಿದ್ದಾರೆ.
ನಟಿ ಕೃತಿ ಸನೋನ್ ಈ ಪೋಸ್ಟ್ ನೋಡುತ್ತಿದ್ದಂತೆ, ಅಭಿಮಾನಿಗಳು ಕೂಡ ಆಕೆಗೆ ಬೆಂಬಲಿಸಿದ್ದಾರೆ. ಕೃತಿ "ನೀವು ಅದ್ಬುತ ಕೆಲಸ ಮಾಡಿದ್ದೀರಾ". ವಿಮರ್ಶೆ ಬಗ್ಗೆ ನಂಬಬೇಡಿ ಎಂದು ಬಳಕೆದಾರರು ಅವರಿಗೆ ಕಿವಿ ಮಾತು ಹೇಳಿದ್ದಾರೆ. ಕೃತಿ ಸನೋನ್ ತಂಗಿ ನುಪೂರ್ ಸನೋನ್ "ನಿನ್ನ ಬಗ್ಗೆ ಹೆಮ್ಮೆ ಇದೆ" ಎಂದು ಬರೆದಿದ್ದಾರೆ. ಆದಗ್ಯೂ ಕೆಲವು ವರ್ಗದ ಸಾಮಾಜಿಕ ಬಳಕೆದಾರರು, "ಚಿತ್ರವನ್ನು ಸ್ವೀಕರಿಸುವುದು ಕಷ್ಟವಾಗಿದೆ" ಎಂದಿದ್ದಾರೆ.
"ಕೃತಿ ತಮ್ಮ ಭಯಾನಕ ತಪ್ಪು ಒಪ್ಪಿ, ಮುನ್ನಡೆಯಬೇಕು. ಎಂದೆಂದಿಗೂ ಸ್ವೀಕರಿಸದಷ್ಟು ಕೆಟ್ಟದಾಗಿ ರಾಮಾಯಣವನ್ನು ಅಳವಳಡಿಸಲಾಗಿದೆ. ನಿರ್ದೇಶಕರು ಮತ್ತು ಬರಹಗಾರರನ್ನು ಈ ರೀತಿ ಮೂರನೇ ದರ್ಜೆ ಸಿನಿಮಾ ಮಾಡದಂತೆ ನಿಷೇಧಿಸಬೇಕಿದೆ" ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವ ನಿರ್ದೇಶಕ ಓ ರಾವತ್ ಅವರ 'ಆದಿಪುರಷ್' ಸಿನಿಮಾ, ಬಿಡುಗಡೆಗೊಂಡಾಗಿನಿಂದಲೂ ಪ್ರೇಕ್ಷಕರಿಂದ ಸಾಕಷ್ಟು ವಿರೋಧವನ್ನು ಎದುರಿಸಿದೆ. ದೇಶದ ಮೂಲೆ ಮೂಲೆಯ ಜನರು ಈ ಚಿತ್ರವೂ ತಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಇದರಲ್ಲಿನ ಕೆಲವು ಡೈಲಾಗ್ಗಳು ಭ್ರಮನಿರಸನ ಮೂಡಿಸಿವೆ ಎಂದಿದ್ದಾರೆ. ರಾಮಯಾಣದ ಪೌರಾಣಿಕ ಕಥೆಯಲ್ಲಿ ಇಂತಹ ಸಂಭಾಷಣೆ ಅವಶ್ಯಕತೆ ಇತ್ತೇ ಎಂಬ ಪ್ರಶ್ನೆಗಳು ಕೂಡ ವ್ಯಕ್ತವಾಗಿದೆ.
ಆದಿ ಪುರಷ್ ಸಿನಿಮಾ ಸಂಭಾಷಣೆ ವಿವಾದ ಹಿನ್ನಲೆ ನೇಪಾಳದಲ್ಲಿ ಭಾರತೀಯ 'ಆದಿಪುರುಷ್' ಸಿನಿಮಾವನ್ನು ನಿಷೇಧಿಸಬೇಕು ಎಂದು ನೇಪಾಳ ರಾಜಾಧಾನಿ ಕಠ್ಮಂಡು ಮೇಯರ್ ಬಲೆಂದ್ರ ಶಾ ಆದೇಶ ಹೊರಡಿಸಿದರು. ಮೇಯರ್ ನಿರ್ಧಾರದ ಗಂಟೆಯೊಳಗೆ ಪೊಖರಾ ಮೇಯರ್ ಧನರಾಜ್ ಆಚಾರ್ಯ ಕೂಡ ಸೋಮವಾರ ಪ್ರದರ್ಶನಗೊಳ್ಳುತ್ತಿದ್ದ ಈ ಚಿತ್ರದ ಮೂರು ಥಿಯೇಟರ್ ಮಾಲೀಕರಿಗೆ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಆದೇಶಿಸಿದರು. ಮೇಯರ್ಗಳ ಆದೇಶದ ಹಿನ್ನೆಲೆ ಎರಡು ಮೆಟ್ರೊಪಾಲಿಟನ್ ನಗರದಲ್ಲಿ ಆದಿ ಪುರಷ್ ಸಿನಿಮಾ ಸ್ಥಗಿತಗೊಳಿಸಿ ಅಲ್ಲಿ, ನೇಪಾಳಿ ಮತ್ತು ಹಾಲಿವುಡ್ ಸಿನಿಮಾ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ: Adipurush controversy: ಸೀತೆ ಭಾರತವಲ್ಲ, ನೇಪಾಳದ ಮಗಳು: ಹಿಮ ರಾಷ್ಟ್ರದಲ್ಲಿ ಆದಿಪುರುಷ್ ಸಿನಿಮಾ ಪ್ರದರ್ಶನ ಬಂದ್