ETV Bharat / entertainment

ಗಂಡು ಮಗುವಿಗೆ ಜನ್ಮ ನೀಡಿದ 'ಮಗಧೀರ' ಚೆಲುವೆ ಕಾಜಲ್ ಅಗರವಾಲ್ - ಕಾಜಲ್ ಅಗರವಾಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆಂದು ವರದಿಯಾಗಿದೆ.

Kajal Agarwal Baby Boy
Kajal Agarwal Baby Boy
author img

By

Published : Apr 19, 2022, 8:24 PM IST

ಹೈದರಾಬಾದ್​: ಮಗಧೀರ ಚಿತ್ರದ ಬೆಡಗಿ ಕಾಜಲ್ ಅಗರವಾಲ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಬಾಯ್​ಫ್ರೆಂಡ್ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ, ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಟುಂಬ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿವೆ.

Kajal Agarwal Baby Boy

ಕಾಜಲ್ ಹಾಗೂ ಗೌತಮ್​ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. 2020ರ ಅಕ್ಟೋಬರ್​​ 6ರಂದು ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟಿ ಕಾಜಲ್​​ ಗರ್ಭಿಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಮೇಲಿಂದ ಮೇಲೆ ಪ್ರೆಗ್ನೆನ್ಸಿ ಫೋಟೋ ಹಂಚಿಕೊಳ್ಳುತ್ತಿದ್ದರು. ಜೊತೆಗೆ ತಾವು ಮಾಡ್ತಿದ್ದ ವರ್ಕೌಟ್ ಫೋಟೋ ಸಹ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ: 'RRR' ಸಕ್ಸಸ್​: ಗೋಲ್ಡನ್​ ಟೆಂಪಲ್​​ನಲ್ಲಿ 'ಲಂಗರ್ ಸೇವಾ' ಆಯೋಜಿಸಿದ ರಾಮ್​ಚರಣ್​

ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಸಿನಿಮಾ ನೀಡಿರುವ ಖ್ಯಾತ ನಟಿ ಕಾಜಲ್ ಈಗಾಗಲೇ ಆಚಾರ್ಯ ಸೇರಿ ಅನೇಕ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು, ಆಚಾರ್ಯ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.