ETV Bharat / entertainment

ಮತ್ತೆ ಇಡಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್: ಐದು ದಿನಗಳಲ್ಲಿ ಎರಡನೇ ಬಾರಿ ಗ್ರಿಲ್​ - money laundering case

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಎರಡನೇ ಬಾರಿಗೆ ಇಡಿ ವಿಚಾರಣೆ ಎದುರಿಸಿದರು. ಇದಕ್ಕೂ ಮುನ್ನ ಬುಧವಾರ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಆ ವೇಳೆ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರಿಗೆ 100 ಪ್ರಶ್ನೆಗಳನ್ನು ಕೇಳಿದ್ದರು ಎಂದು ಹೇಳಲಾಗುತ್ತಿದೆ.

sukesh chandrashekhar money laundering case
ನಟಿ ಜಾಕ್ವೆಲಿನ್ ಫರ್ನಾಂಡೀಸ್
author img

By

Published : Sep 19, 2022, 5:28 PM IST

Updated : Sep 19, 2022, 6:08 PM IST

ನವದೆಹಲಿ: ಮಹಾ ವಂಚಕ ಸುಕೇಶ್ ಚಂದ್ರಶೇಖರ್​​ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸೋಮವಾರ ಆರ್ಥಿಕ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿಯನ್ನು 5 ದಿನಗಳಲ್ಲಿ ದೆಹಲಿ ಪೊಲೀಸರು ವಿಚಾರಣೆಗೆ ಕರೆಸಿರುವುದು ಇದು ಎರಡನೇ ಬಾರಿ.

sukesh chandrashekhar money laundering case
ನಟಿ ಜಾಕ್ವೆಲಿನ್ ಫರ್ನಾಂಡೀಸ್

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಇಂದು (ಸೋಮವಾರ) ಮಧ್ಯಾಹ್ನ ಕಚೇರಿಗೆ ಆಗಮಿಸಿದ್ದು, ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಬುಧವಾರಷ್ಟೇ ವಂಚಕ ಚಂದ್ರಶೇಖರ್ ಹಾಗೂ ನಟಿ ಜಾಕ್ವೆಲಿನ್ ಸಂಬಂಧಕ್ಕೆ ಕೊಂಡಿಯಾಗಿರುವ ವ್ಯಕ್ತಿ ಪಿಂಕಿ ಇರಾನಿ ಬಗೆಗಿನ ಪ್ರಶ್ನೆ ಸೇರಿದಂತೆ ಅವರನ್ನು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.

ನೋರಾ ಫತೇಹಿ

ವಂಚಕ ಚಂದ್ರಶೇಖರ್, ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಅನೇಕರಿಂದ ಹಣ ವಸೂಲಿ ಮಾಡಿರುವ ಆರೋಪದ ಹಿನ್ನೆಲೆ ಸದ್ಯ ಜೈಲಿನಲ್ಲಿದ್ದಾನೆ. ಇದೇ ವ್ಯಕ್ತಿ ಜಾಕ್ವೆಲಿನ್ ಸೇರಿದಂತೆ ಅನೇಕ ನಟಿಯರಿಗೆ ದುಬಾರಿ ಬೆಲೆಯ ವಸ್ತುಗಳನ್ನು ನೀಡಿರುವುದು ತನಿಖೆಯಿಂದ ಬಯಲಾಗಿದೆ.

  • Delhi | Actor Jacqueline Fernandez arrives at Delhi Police EoW (Economic Offences Wing) for questioning in the Sukesh Chandrashekhar money laundering case. pic.twitter.com/U37rZynlRu

    — ANI (@ANI) September 19, 2022 " class="align-text-top noRightClick twitterSection" data=" ">

ಆಗಸ್ಟ್ 17 ರಂದು ಜಾರಿ ನಿರ್ದೇಶನಾಲಯವು ಮಹಾ ವಂಚಕ ಚಂದ್ರಶೇಖರ್​ಗೆ ಸಂಬಂಧಿಸಿದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿತ್ತು. ಅಲ್ಲದೇ ಇಡಿ ಪ್ರಕಾರ, ಫರ್ನಾಂಡಿಸ್ ಜೊತೆಗೆ ಇನ್ನೊಬ್ಬ ಬಾಲಿವುಡ್ ನಟಿ ನೋರಾ ಫತೇಹಿ ಸುಕೇಶನಿಂದ ಐಷಾರಾಮಿ ಕಾರುಗಳು ಮತ್ತು ಇತರ ದುಬಾರಿ ಉಡುಗೊರೆಗಳನ್ನು ಪಡೆದಿರುವುದು ಗೊತ್ತಾಗಿದೆ. ಹಾಗಾಗಿ ನೋರಾ ಫತೇಹಿ ಅವರಿಗೂ ಪೊಲೀಸರು ಸಮನ್ಸ್ ನೀಡಿದ್ದರು.

ಸಮನ್ಸ್​ ಹಿನ್ನೆಲೆ ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಅಲ್ಲಿ ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ಸಂಬಂಧ ಮತ್ತು ಭೇಟಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಇನ್ನು ಗಮನಿಸಬೇಕಾದ ಸಂಗತಿಯೆಂದರೆ, ಈ ಪ್ರಕರಣದಲ್ಲಿ ಇವರಷ್ಟೇ ಅಲ್ಲದೇ ಇತರೆ ಅನೇಕ ಕಿರುತೆರೆ ನಟಿಯರ ಹೆಸರುಗಳೂ ಒಂದೊಂದಾಗಿ ಹೊರಬರುತ್ತಿವೆ.

ಇದನ್ನೂ ಓದಿ : ಪಿಎಸ್​ಐ ಹಗರಣದ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ‌ ಪಿಎಸ್ಐ ಮರುಪರೀಕ್ಷೆ‌‌ ದಿನಾಂಕ ಪ್ರಕಟ: ಡಿಜಿ‌ ಪ್ರವೀಣ್ ಸೂದ್

Last Updated : Sep 19, 2022, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.