ETV Bharat / entertainment

ಸುಕೇಶ್​ನಿಂದ ಉಡುಗೊರೆ ಪಡೆದಿಲ್ಲ ಅದು ನನ್ನ ಕಷ್ಟಾರ್ಜಿತ ಹಣ.. ನಟಿ ಜಾಕ್ವೆಲಿನ್

author img

By

Published : Aug 25, 2022, 9:56 AM IST

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ಪರಿಗಣಿಸಿದ ಇಡಿ ಆರೋಪವನ್ನು ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ತಳ್ಳಿ ಹಾಕಿದ್ದಾರೆ. ವಂಚಕ ಸುಕೇಶ್​ ಚಂದ್ರಶೇಖರ್​ ಅವರಿಂದ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

actress-jacqueline
ನಟಿ ಜಾಕ್ವೆಲಿನ್

ನವದೆಹಲಿ: 200 ಕೋಟಿ ರೂಪಾಯಿ ವಂಚನೆ ಪ್ರಕರಣ ಪ್ರಮುಖ ಆರೋಪಿ ಸುಕೇಶ್​ ಚಂದ್ರಶೇಖರ್​ ಜೊತೆ ಗುರುತಿಸಿಕೊಂಡು ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ದೋಷಿ ಎಂದು ಹೇಳಲಾದ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಲ್ಲಿಸಲಾದ ಚಾರ್ಜ್​ಶೀಟ್​ನಲ್ಲಿ ಇಡಿ ತನ್ನನ್ನು ದೋಷಿ ಎಂದು ಗುರುತಿಸಿದೆ. ಸುಕೇಶ್​ ಚಂದ್ರಶೇಖರ್​ ಅವರಿಂದ ಹಣ ಪಡೆದು ಅದನ್ನು ಎಫ್​ಡಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಅದು ಸುಳ್ಳು. ಅವರಿಂದ ನಾನು ಹಣ ಪಡೆದಿಲ್ಲ. ಅದೆಲ್ಲವೂ ನನ್ನ ಕಷ್ಟಾರ್ಜಿತ ದುಡ್ಡಾಗಿದೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣದಲ್ಲಿ ಇಡಿ ಕೇಳಿದ ಸ್ಪಷ್ಟನೆಗೆ ಉತ್ತರ ನೀಡಿರುವ ನಟಿ ಜಾಕ್ವೆಲಿನ್​, ಸುಕೇಶ್​ ಚಂದ್ರಶೇಖರ್​ ಅವರ ಜೊತೆ ಸಂಪರ್ಕ ಬೆಳೆಸಿಕೊಳ್ಳುವ ಮೊದಲು ನಾನು ಆ ಹಣವನ್ನು ಎಫ್​ಡಿ ಮಾಡಿಸಿದ್ದೇನೆ. ಅದು ಕಾನೂನುಬದ್ಧವಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ನಾನು ತೆರಿಗೆಯನ್ನೂ ಪಾವತಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದು ನನ್ನ ಸ್ವಂತ ದುಡಿಮೆಯ ಹಣ. ಚಂದ್ರಶೇಖರ್ ಅವರು ವಂಚಿಸಿ ನನಗೆ ನೀಡಿದ್ದಲ್ಲ. ನಾನು ಅವರಿಂದ ಅಕ್ರಮವಾಗಿ ಹಣ, ಉಡುಗೊರೆಯನ್ನು ಪಡೆದುಕೊಂಡಿದ್ದೇನೆ ಎಂಬ ಆರೋಪ ಬಂದಿದೆ ಅಷ್ಟೇ ಎಂದು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣ ಜಾಲಾಡುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಈ ಬಗ್ಗೆ ಕೋರ್ಟ್​ಗೆ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ನಟಿ ಜಾಕ್ವೆಲಿನ್​ ಅವರು ಸುಕೇಶ್​ ಚಂದ್ರಶೇಖರ್​ ಅಕ್ರಮವಾಗಿ ಹಣ ಗಳಿಸಿರುವುದು ಗೊತ್ತಿದ್ದೂ, ಅವರಿಂದ ಹಣ ಪಡೆದಿದ್ದಾರೆ ಎಂದು ಉಲ್ಲೇಖಿಸಿ ದೋಷಿಯನ್ನಾಗಿ ಪರಿಗಣಿಸಿದೆ ಎಂದು ವರದಿಯಾಗಿದೆ.

ಓದಿ: ಡ್ರಗ್ಸ್ ಕೇಸ್‌ನಿಂದ ಹೊರಬಂದ ಆರ್ಯನ್ ನಿರಾಳ: ಮಕ್ಕಳ ಫೋಟೊ ನೋಡಿ ಶಾರುಕ್‌ ಹೇಳಿದ್ದೇನು?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.