ETV Bharat / entertainment

ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ ಡಿಕ್ರೂಜ್​: ಹುಟ್ಟಿದ ತಕ್ಷಣ ನಾಮಕರಣ.. ಕಂದಮ್ಮನ ಫೋಟೋ ನೋಡಿ.. - etv bharat kannada

Ileana dcruz: ಬಾಲಿವುಡ್​ ನಟಿ ಇಲಿಯಾನಾ ಡಿಕ್ರೂಜ್​ ಆಗಸ್ಟ್​ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Ileana dcruz
ಇಲಿಯಾನಾ ಡಿಕ್ರೂಜ್
author img

By

Published : Aug 6, 2023, 9:58 AM IST

ಬಾಲಿವುಡ್​ ನಟಿ ಇಲಿಯಾನಾ ಡಿಕ್ರೂಜ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಗಸ್ಟ್​ 1 ರಂದು ಮಗು ಜನಿಸಿದ್ದು, ಈ ಸಂತಸದ ವಿಚಾರವನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಬಹುತೇಕ ಸೆಲೆಬ್ರಿಟಿಗಳು ಕೆಲವು ತಿಂಗಳವರೆಗೆ ತಮ್ಮ ಮಗುವಿನ ಮುಖವನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ಇಲಿಯಾನಾ ಡಿಕ್ರೂಜ್​ ಇದಕ್ಕೆ ವಿರುದ್ಧವಾಗಿದ್ದಾರೆ. ಅವರು ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮಗುವಿನ ಹೆಸರು 'ಕೋವಾ ಫೀನಿಕ್ಸ್​ ಡೋಲನ್​' ಎಂದು ಘೋಷಿಸಿದ್ದಾರೆ.

"ನಮ್ಮ ಮುದ್ದು ಮಗನನ್ನು ಈ ಜಗತ್ತಿಗೆ ಸ್ವಾಗತಿಸಲು ನಾವು ಬಹಳ ಸಂತೋಷಪಡುತ್ತೇವೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ" ಎಂದು ಮಗುವಿನ ಫೋಟೋ ಹಂಚಿಕೊಂಡಿರುವ ಇಲಿಯಾನಾ ಕ್ಯಾಪ್ಶನ್​ ನೀಡಿದ್ದಾರೆ. ಸೋಷಿಯಲ್​ ಮೀಡಿಯಾ ಬಳಕೆದಾರರು, ನಟಿಯ ಅಭಿಮಾನಿಗಳು ಕಮೆಂಟ್​ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಮಗುವಿನ ಫೋಟೋವನ್ನು ಬಹಿರಂಗಪಡಿಸಿದ್ದಕ್ಕಾಗಿ ಫ್ಯಾನ್ಸ್​ ಖುಷಿಯಾಗಿದ್ದಾರೆ.

ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ಇಲಿಯಾನಾ ಡಿಕ್ರೂಜ್,​ ಏಪ್ರಿಲ್​ 18 ರಂದು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿ, ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಬಳಿಕ ಬೇಬಿ ಬಂಪ್​ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದ ತಿಂಗಳವರೆಗೂ ಮಗುವಿನ ತಂದೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಬಹಿರಂಗವಾಗಿ ಗೆಳೆಯನ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ.

ಈ ಹಿಂದೆ ಇಲಿಯಾನ ಬಾಲಿವುಡ್​ ನಟಿ ಕತ್ರಿನಾ ಕೈಫ್​ ಅವರ ಸಹೋದರ ಸೆಬಸ್ಟಿಯನ್​ ಲ್ಯೂರೆಂಟ್​ ಮಿಷೆಲ್​ ಜೊತೆಗೆ ಡೇಟಿಂಗ್​ ನಡೆಸಿದ್ದರು. ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಹಲವು ಸ್ನೇಹಿತರೊಂದಿಗೆ ಮಾಲ್ಡೀವ್ಸ್​​ಗೆ ಹಾರಿದಾಗ ಇವರ ಜೊತೆ ಇಲಿಯಾನ ಕೂಡ ಪ್ರಯಾಣ ನಡೆಸಿದ್ದರು. ನಂತರ ಈ ಇಬ್ಬರೂ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೂ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್​ ಅವರೊಂದಿಗೆ ಕೆಲ ವರ್ಷಗಳ ಕಾಲ ನಟಿ ಡೇಟಿಂಗ್​ ನಡೆಸಿದ್ದರು. ಹೀಗಾಗಿ ಇಲಿಯಾನಾ ಫ್ಯಾನ್ಸ್​, ಮಗುವಿನ ತಂದೆ ಕತ್ರಿನಾ ಕೈಫ್​ ಸಹೋದರ ಎಂದು ಊಹಿಸಿದ್ದರು.

ಆದರೆ ಕಳೆದ ತಿಂಗಳು ಇಲಿಯಾನಾ ತಮ್ಮ ಗೆಳೆಯನ ಫೋಟೋವನ್ನು ಬಹಿರಂಗಪಡಿಸಿದ್ದರು. ‘ಡೇಟ್ ನೈಟ್’ ಎಂಬ ಶೀರ್ಷಿಕೆಯೊಂದಿಗೆ ಮೊದಲ ಬಾರಿ ತಮ್ಮ ಗೆಳೆಯನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಹಾಗಂತ ಇಲಿಯಾನಾ ಅವರ ಹೆಸರನ್ನು ಬಹಿರಂಪಡಿಸಿಲ್ಲ. ಆದರೆ ಕತ್ರಿನಾ ಕೈಫ್​ ಸಹೋದರ ಸೆಬಸ್ಟಿಯನ್​ ಲ್ಯೂರೆಂಟ್​ ಮಿಷೆಲ್ ಅಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಗೆಳೆಯನ ಹೆಸರನ್ನು ತಿಳಿಸುವಂತೆ ಅಭಿಮಾನಿಗಳು ನಟಿಯಲ್ಲಿ ಕೇಳಿಕೊಂಡಿದ್ದರು. ಆದರೆ ಈ ಬಗ್ಗೆ ಇಲಿಯಾನಾ ಪ್ರತಿಕ್ರಿಯಿಸಿಲ್ಲ.

ಇನ್ನು, ಇವರ ಸಿನಿಮಾ ವಿಚಾರವಾಗಿ ನೋಡುವುದಾದರೆ, ಅವರು ಕೊನೆಯದಾಗಿ ದಿ ಬಿಗ್ ಬುಲ್ ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವನ್ನು ನಿರ್ಮಾಪಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ ಮತ್ತು ಅಜಯ್ ದೇವಗನ್ ನಿರ್ಮಿಸಿದ್ದಾರೆ. ಅವರು ಮುಂದೆ ಅನ್​ಫೇರ್​ ಅಂಡ್​ ಲವ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ ಈ ಚಿತ್ರವು ಭಾರತದ ಫೇರ್ ಸ್ಕಿನ್‌ನ ಗೀಳಿನ ಮೇಲೆ ಕಾಮಿಕ್ ಟೇಕ್ ಆಗಿದೆ. ಈ ಚಿತ್ರವು ಹರಿಯಾಣದ ಹಿನ್ನೆಲೆಯಲ್ಲಿದೆ ಮತ್ತು ರಣದೀಪ್ ಹೂಡಾ ಅವರೊಂದಿಗೆ ನಟಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ.

ಇದನ್ನೂ ಓದಿ: ಕೊನೆಗೂ ಮಗುವಿನ ತಂದೆಯನ್ನು ಪರಿಚಯಿಸಿದ ಇಲಿಯಾನಾ ಡಿಕ್ರೂಜ್.. ಕತ್ರಿನಾ ಕೈಫ್​​ ಸಹೋದರನಲ್ಲ, ಮತ್ಯಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.