ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯ್ತನದ ಕುರಿತು ಪ್ರತಿ ಅಪ್ಡೇಟ್ ನೀಡುತ್ತಿರುವ ಇಲಿಯಾನಾ ಮಗುವಿನ ತಂದೆ ಯಾರು ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಮಧ್ಯೆ ಅವರು ತಮ್ಮ ಗೆಳೆಯನ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಮುಖವನ್ನು ಮರೆಮಾಚಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
- " class="align-text-top noRightClick twitterSection" data="
">
ಇಲಿಯಾನಾ ತಮ್ಮ ಬೇಬಿಮೂನ್‌ನ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ಅವರು ಒಬ್ಬ ವ್ಯಕ್ತಿಯ ಕೈಯನ್ನು ಹಿಡಿದಿದ್ದಾರೆ. ಆದರೆ, ಈ ಫೋಟೋದಲ್ಲಿ ನಟಿಯ ಮುಖವಾಗಲಿ, ವ್ಯಕ್ತಿಯ ಮುಖವಾಗಲಿ ಕಾಣಿಸುತ್ತಿಲ್ಲ. ಇಬ್ಬರ ಬೆರಳುಗಳಲ್ಲಿ ಉಂಗುರಗಳಿದ್ದು, ಇದರಿಂದ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಫೋಟೋದಲ್ಲಿ ತಮ್ಮ ಗೆಳೆಯನ ಮುಖವನ್ನು ಬಹಿರಂಗಪಡಿಸದೇ ಇದ್ದರೂ ಸಹ ತಮ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ಶೀರ್ಷಿಕೆ ಬರೆದಿದ್ದಾರೆ.
ಹಂಚಿಕೊಂಡಿರುವ ಫೋಟೋಗಳ ಪ್ರಕಾರ, ಇಲಿಯಾನಾ ಪ್ರಸ್ತುತ ರಜಾದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಆದರೆ ಅವರೀಗ ಎಲ್ಲಿದ್ದಾರೆ ಎಂಬುದನ್ನು ಇಲಿಯಾನಾ ಬಹಿರಂಗಪಡಿಸಿಲ್ಲ. ಏಪ್ರಿಲ್ 18ರಂದು ಇಲಿಯಾನಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದರು. ತಮ್ಮ ಇನ್ಸ್ಟಾ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು, ಶೀಘ್ರದಲ್ಲೇ ಬರಲಿದೆ. ನನ್ನ ಪುಟ್ಟ ಪ್ರಿಯತಮೆಯ ಭೇಟಿಗೆ ಕಾಯಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯೊಂದಿಗೆ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ಟೈಗರ್ 3 ಶೂಟಿಂಗ್: ಭರ್ಜರಿ ಆ್ಯಕ್ಷನ್ ಸೀನ್ ಪೂರ್ಣ, ಸಲ್ಲು - ಶಾರುಖ್ ವಿಡಿಯೋ ಲೀಕ್!
ಮೊದಲಿನಿಂದಲೂ ಇಲಿಯಾನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮಿಚ್ಚೆಲ್ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿ ಮುಂಚಿನಿಂದಲೇ ಇತ್ತು. ಮಾಲ್ಡೀವ್ಸ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೊತೆ ಸೆಬಾಸ್ಟಿಯನ್ ಮತ್ತು ಇಲಿಯಾನಾ ಕಾಣಿಸಿಕೊಂಡ ನಂತರ ಈ ಸುದ್ದಿಗಳು ಹುಟ್ಟಿಕೊಂಡಿದ್ದವು. ಆದರೆ, ತಮ್ಮ ಸಂಬಂಧದ ಬಗ್ಗೆ ಅವರಿಬ್ಬರು ಈವೆರೆಗೂ ಅಧಿಕೃತಗೊಳಿಸಿಲ್ಲ. ಅದಕ್ಕೂ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಅವರೊಂದಿಗೆ ಕೆಲ ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು.
ಇನ್ನು ಇಲಿಯಾನಾ ಅವರ ಸಿನಿಮಾ ವಿಚಾರವಾಗಿ ಹೇಳುವುದಾದರೆ, ಅವರು ಕೊನೆಯದಾಗಿ ದಿ ಬಿಗ್ ಬುಲ್ ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವನ್ನು ನಿರ್ಮಾಪಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ ಮತ್ತು ಅಜಯ್ ದೇವಗನ್ ನಿರ್ಮಿಸಿದ್ದಾರೆ. ಅವರು ಮುಂದೆ ಅನ್ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ ಈ ಚಿತ್ರವು ಭಾರತದ ಫೇರ್ ಸ್ಕಿನ್‌ನ ಗೀಳಿನ ಮೇಲೆ ಕಾಮಿಕ್ ಟೇಕ್ ಆಗಿದೆ. ಈ ಚಿತ್ರವು ಹರಿಯಾಣದ ಹಿನ್ನೆಲೆಯಲ್ಲಿದೆ ಮತ್ತು ರಣದೀಪ್ ಹೂಡಾ ಅವರೊಂದಿಗೆ ನಟಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ.
ಇದನ್ನೂ ಓದಿ: ಶಿವಣ್ಣ ನಟನೆಯ 'ಘೋಸ್ಟ್' ಚಿತ್ರದ ಶೂಟಿಂಗ್ ಸೆಟ್ಗೆ ಸಚಿವ ಮಧು ಬಂಗಾರಪ್ಪ ಭೇಟಿ