ಕೆಲ ದಿನಗಳ ಹಿಂದೆ ಬಾಲಿವುಡ್ ಸೂಪರ್ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಬಿರುಕು ವದಂತಿ ಕುರಿತು ನಟ ರಣ್ವೀರ್ ಸಿಂಗ್ ಮೌನ ಮುರಿದಿದ್ದರು. ನಮ್ಮಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಇದೀಗ ನಟಿ ದೀಪಿಕಾ ಪಡುಕೋಣೆ ಪರೋಕ್ಷವಾಗಿ ಬಿರುಕು ವದಂತಿಗೆ ಬ್ರೇಕ್ ಹಾಕಿದ್ದಾರೆ.
-
BREAKING ! Everything is not OK between #DeepikaPadukone & #RanveerSingh !!!
— Umair Sandhu (@UmairSandu) September 27, 2022 " class="align-text-top noRightClick twitterSection" data="
">BREAKING ! Everything is not OK between #DeepikaPadukone & #RanveerSingh !!!
— Umair Sandhu (@UmairSandu) September 27, 2022BREAKING ! Everything is not OK between #DeepikaPadukone & #RanveerSingh !!!
— Umair Sandhu (@UmairSandu) September 27, 2022
ದೀಪ್ವೀರ್ ದಂಪತಿ ಚಿತ್ರರಂಗದಲ್ಲೇ ಪ್ರಖ್ಯಾತ ಜೋಡಿ. ನಟನೆ ಜೊತೆಗೆ ಸುಂದರ ವೈಯಕ್ತಿಕ ಜೀವನದಿಂದಲೂ ಗಮನ ಸೆಳೆಯುವ ಕ್ಯೂಟ್ ಕಪಲ್. ಈ ಜೋಡಿಯ ಬಗ್ಗೆ ಗುಸು ಗುಸು ಆರಂಭವಾದಾಗ ಅದಕ್ಕೆ ಪ್ರತಿಕ್ರಿಯಿಸಲು ಸಾಮಾನ್ಯವಾಗಿ ಇವರು ಕಂಡುಕೊಳ್ಳುವ ಮಾರ್ಗವೆಂದರೆ ಅದು ಸೋಷಿಯಲ್ ಮೀಡಿಯಾ. ಹೆಚ್ಚಾಗಿ ಇಂಥಹದ್ದನ್ನು ನೇರವಾಗಿ ತಿಳಿಸುವುದಿಲ್ಲ. ಶುಕ್ರವಾರ ಈ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫ್ಲರ್ಟಿ ಚಾಟ್‌ನೊಂದಿಗೆ ಪ್ರತ್ಯೇಕತೆಯ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
ಕೆಲ ದಿನಗಳ ಹಿಂದೆ ದೀಪಿಕಾ ಮತ್ತು ರಣವೀರ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದರು. ಇದು ಫ್ಯಾನ್ಸ್ ಆತಂಕಕ್ಕೆ ಕಾರಣ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಈ ಕುರಿತು ರಣವೀರ್ ಸಿಂಗ್ ಅವರಿಗೆ ನೇರವಾಗಿ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, 'ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದೆವು. 2022ಕ್ಕೆ 10 ವರ್ಷ ಆಯ್ತು, ಎಲ್ಲವೂ ಸರಿ ಇದೆ, ಆ ದೇವರಿಗೆ ಧನ್ಯವಾದ' ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂಬ ಸಂದೇಶ ರವಾನಿಸಿದ್ದರು.
-
Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022 " class="align-text-top noRightClick twitterSection" data="
">Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022
ಇನ್ನೂ ನಿನ್ನೆ ಸಂಜೆ, ನಟ ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಪಿಂಕ್ ಲುಕ್ ಅವತಾರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ರಣವೀರ್ ಸಂಪೂರ್ಣ ಅಂದರೆ ಶೂ, ಪ್ಯಾಂಟ್‌ನಿಂದ ಹಿಡಿದು ಶರ್ಟ್ ವರೆಗೂ ಗುಲಾಬಿ ಬಣ್ಣದಲ್ಲಿ ಕಾಣಿಸುತ್ತಿದ್ದರು. ಈ ಫೋಟೋಗಳು ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿವೆ. ನಟಿ ದೀಪಿಕಾ ಪಡುಕೋಣೆ ಕೂಡ "Edible" (ಖಾದ್ಯ, ತಿನ್ನಲು ಯೋಗ್ಯ) ಎಂದು ಕಾಮೆಂಟ್ ಹಾಕಿದ್ದಾರೆ. ರಣವೀರ್ ದೀಪಿಕಾಗೆ ಕಿಸ್ ಇಮೋಜಿ ಮೂಲಕ ಉತ್ತರಿಸಿದ್ದಾರೆ. ಈ ಫ್ಲರ್ಟಿ ಚಾಟ್ ನೋಡಿದ ಅಭಿಮಾನಿಗಳಿಗೆ ಸಮಾಧಾನವಾಗಿದೆ. ಈ ಜೋಡಿ ಎಂದಿನಂತೆ ಖುಷಿಯಾಗಿ ಇದ್ದಾರೆ ಎನ್ನುವುದಕ್ಕೆ ಈ ಇನ್ಸ್ಟಾಗ್ರಾಮ್ ಸಂಭಾಷಣೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ದೀಪ್ವೀರ್ ದಾಂಪತ್ಯದಲ್ಲಿ ಬಿರುಕು ವದಂತಿ.. ಮೌನ ಮುರಿದ ನಟ ರಣ್ವೀರ್ ಸಿಂಗ್
ರಣವೀರ್ ಮತ್ತು ದೀಪಿಕಾ ಆರು ವರ್ಷಗಳ ಡೇಟಿಂಗ್ ನಂತರ ನವೆಂಬರ್ 14, 2018 ರಂದು ಮದುವೆ ಆಗಿ ಸುಖ ಸಂಸಾರ ಸಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿತ್ತು.