ETV Bharat / entertainment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ: ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಭಾಗಿ - ಅದಿತಿ ಪ್ರಭುದೇವ

ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲಾ​​ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಬ್ಬರ ರಿಸೆಪ್ಷನ್​ ಕೂಡಾ ನಡೆದಿತ್ತು.

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಭಾಗಿ
ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಭಾಗಿ
author img

By

Published : Nov 28, 2022, 12:26 PM IST

Updated : Nov 28, 2022, 12:46 PM IST

ಕನ್ನಡ ಚಿತ್ರರಂಗದ ಸುಂದರ ನಟಿ ಅದಿತಿ ಪ್ರಭುದೇವ ಸೋಮವಾರ ಉದ್ಯಮಿ ಯಶಸ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿಈ ಸುಂದರ ಜೋಡಿಯ ಮದುವೆ ರಿಸೆಪ್ಷನ್‌ ಅದ್ಧೂರಿಯಾಗಿ ನಡೆದಿತ್ತು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ

ಇದರಲ್ಲಿ ಚಿತ್ರರಂಗ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಅದಿತಿ ಪ್ರಭುದೇವ ಕೆಂಪು ಬಣ್ಣದ ಕಾಸ್ಟೂಮ್​ನಲ್ಲಿ ಮಿಂಚಿದರೆ, ಬ್ಲೂ ಬ್ಲೇಜರ್​ನಲ್ಲಿ ಯಶಸ್ ಕಂಗೊಳಿಸುತ್ತಿದ್ದರು‌. ಈ ಸುಂದರ ಜೋಡಿಯ ಆರತಕ್ಷತೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಸಿಎಂ ಬಸವರಾಜ್ ಬೊಮ್ಮಾಯಿ‌, ವಿ. ಸೋಮಣ್ಣ,‌ ನಟ ಶರಣ್, ಮೇಘಾ ಶೆಟ್ಟಿ, ರಚನಾ ಇಂದರ್ , ಶ್ರೀನಗರ ಕಿಟ್ಟಿ, ರಂಗಾಯಣ ರಘು, ನೀನಾಸಂ ಸತೀಶ್, ಮೇಘನಾ ರಾಜ್, ಚಿಕ್ಕಣ್ಣ ಸೇರಿದಂತೆ ಇತರರು ಆಗಮಿಸಿದ್ದರು.

ಸಿನಿಮಾ ಚಿತ್ರೀಕರಣದಿಂದ ಒಂದಷ್ಟು ಬಿಡುವು ಪಡೆದುಕೊಂಡು ಮದುವೆ ಮಾಡಿಕೊಳ್ಳುತ್ತಿರುವ ನಟಿ ಅದಿತಿ ಪ್ರಭುದೇವ, ಶನಿವಾರ ತಮ್ಮ ಅರಿಶಿನ ಶಾಸ್ತ್ರ ಕಾರ್ಯಕ್ರಮದ ಸುಂದರ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ: ವಿವಾಹ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ.. ಮೆಹೆಂದಿ ಶಾಸ್ತ್ರದ ಫೋಟೋಗಳು ಇಲ್ಲಿವೆ

Last Updated : Nov 28, 2022, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.