ETV Bharat / entertainment

ಸಹಾಯ ಹಸ್ತ ಚಾಚಿದ ಸೋನು ಸೂದ್​.. ಅಂಧ ಮಗುವಿನ ಬಾಳಿಗೆ ಬೆಳಕಾದ ಸ್ಟಾರ್​

ನಟ ಸೋನು ಸೂದ್​ ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ.

actor Sonu Sood
ಸೋನು ಸೂದ್
author img

By

Published : Jul 23, 2023, 7:04 PM IST

ದೇಶದಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್​ ನಟ, ನಿರ್ಮಾಪಕ ಸೋನು ಸೂದ್​ ರಿಯಲ್​ ಲೈಫ್​ ಹೀರೋ ಎನಿಸಿಕೊಂಡಿದ್ದಾರೆ. ಇವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇದೀಗ ಮತ್ತೊಂದು ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ.

ನಟ ಸೋನು ಸೂದ್​ ಅಂಧ ಮಗು ಗುಲ್ಶನ್​ಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸೋನು ಟ್ವೀಟ್​ನಲ್ಲಿ, "ಗುಲ್ಶನ್​ ನಿನ್ನ ಚಿಕಿತ್ಸೆಯ ಸಮಯ ಬಂದಿದೆ, ಇನ್ನು ನಿನ್ನ ಕಣ್ಣುಗಳಿಂದಲೇ ಜಗತ್ತನ್ನು ನೋಡಬಹುದು" ಎಂದು ಬರೆದಿದ್ದಾರೆ. 11 ತಿಂಗಳ ಮುಗ್ಧ ಗುಲ್ಶನ್​ ಕಣ್ಣಿಲ್ಲದೇ ಹುಟ್ಟಿದ್ದು, ಸೋನು ಅವರಿಂದಾಗಿ ಮಗು ಇನ್ನು ಮುಂದೆ ಜಗತ್ತನ್ನು ನೋಡಲು ಮತ್ತು ಯಾರ ಸಹಾಯವಿಲ್ಲದೇ ಜೀವನ ನಡೆಸಲು ಸಾಧ್ಯವಾಗುತ್ತದೆ.

actor Sonu Sood
ಅಂಧ ಮಗುವಿನ ಬಾಳಿಗೆ ಬೆಳಕಾದ ನಟ ಸೋನು ಸೂದ್​

ಬಡ ಕುಟುಂಬದಲ್ಲಿ ಜನಿಸಿದ ಅಂಧ ಮಗು.. ಬಿಹಾರದ ನವಾದಾ ನಗರದ ಪಕ್ರಿಬರವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಗನ್ ಪಂಚಾಯತ್‌ನ ಅಮರಪುರ ಗ್ರಾಮದಲ್ಲಿ ಇಂತಹ ಮಗು ಜನಿಸಿದೆ. ಆದರೆ ಗುಲ್ಶನ್​ ಕುಟುಂಬದವರು ಬಡವರಾಗಿದ್ದು, ಮಗುವಿನ ಚಿಕಿತ್ಸೆ ವೆಚ್ಚ ಭರಿಸಲು ಶಕ್ತರಾಗಿಲ್ಲ. ಹಾಗಾಗಿ ಈ ಮಗುವಿನ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ವೀಕ್ಷಿಸಿದ ನಟ ಸೂದ್​ ಈ ಬಡ ಕುಟುಂಬಕ್ಕೆ ದೇವರಾಗಿ ಬಂದಿದ್ದಾರೆ. ಮಗುವಿನ ಪಾಲಿಗೆ ಆಶಾಕಿರಣವಾಗಿದ್ದಾರೆ.

ಇದನ್ನೂ ಓದಿ: 'ರಾಝಿ ಸಿನಿಮಾದಲ್ಲಿ ಆಲಿಯಾ ಭಟ್ ಅಭಿನಯ ಅಮೋಘ, ಕಣ್ಣೀರು ತಡೆಯಲಾಗಲಿಲ್ಲ': ಸುಧಾ ಮೂರ್ತಿ

ಗುಲ್ಶನ್​ ತಂದೆ ರಾಜೇಶ್​ ಚೌಹಾಣ್​ ರಿಕ್ಷಾ ಚಾಲಕರಾಗಿದ್ದಾರೆ. ತಾಯಿ ಗೃಹಿಣಿ. ಇವರ ಜೀವನ ನಡೆದುಕೊಂಡು ಹೋಗುತ್ತಿರುವುದೇ ರಾಜೇಶ್​ ಅವರ ದುಡಿಮೆಯಿಂದ. ಇಷ್ಟು ಕಷ್ಟದಲ್ಲಿರುವ ಕುಟುಂಬದ ಸಮಸ್ಯೆಗೆ ಸೋನ್​ ಸೂದ್​ ನೆರವಿಗೆ ಬಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂತ್ರಸ್ತ ಮಗುವಿನ ತಂದೆ, "ಸೋನು ಸೂದ್ ಕೇವಲ ನಟ ಮಾತ್ರವಲ್ಲ, ಪ್ರತಿಯೊಬ್ಬ ನಿರ್ಗತಿಕ ದೇಶವಾಸಿಗಳಿಗೂ ದೇವರು ಆಗಿದ್ದಾರೆ" ಎಂದು ಹೇಳಿದ್ದಾರೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ: ಕೆಲವು ತಿಂಗಳುಗಳ ಹಿಂದೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸೋನು ಸೂದ್​ ಸಹಾಯ ಹಸ್ತ ಚಾಚಿದ್ದರು. ಉಜ್ಜಯಿನಿಯ ಕಣಿಪುರದಲ್ಲಿರುವ ತಿರುಪತಿ ಧಾಮದ ನಿವಾಸಿ ಅಥರ್ವ ಎಂಬ ಬಾಲಕ ಬೆನ್ನುಮೂಳೆಯ ಸ್ನಾಯು ಕ್ಷೀಣತೆ sma-2 ಕಾಯಿಲೆಯಿಂದ ಬಳಲುತ್ತಿದ್ದ. ಅದಕ್ಕೂ ಮೊದಲು ಬಾಲಕನ ಪೋಷಕರು ನಟ ಸೋನು ಸೂದ್​ ಭೇಟಿಯಾಗಿ ಮಗುವಿನ ಕಾಯಿಲೆ ಕುರಿತು ದುಃಖ ಹಂಚಿಕೊಂಡಿದ್ದರು. ಹೀಗಾಗಿ ಅಥರ್ವ ಚಿಕಿತ್ಸೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ, ಮಗುವಿನ ಚಿಕಿತ್ಸೆಗೆ ಸಾಧ್ಯವಾದಷ್ಟು ದೇಣಿಗೆ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದರು.

ಇದನ್ನೂ ಓದಿ: ಮಹೇಶ್​ ಚಿತ್ರಕ್ಕೆ ಸಂಕಷ್ಟ: 'ಗುಂಟೂರು ಖಾರಂ' ಸಿನಿಮಾದಿಂದ ಸಂಗೀತ ಸಂಯೋಜಕ ತಮನ್ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.