ETV Bharat / entertainment

ಯಶಸ್ವಿ ಸಿನಿಮಾಗೆ 'ಕಾಂತಾರ'ವನ್ನು ಉದಾಹರಣೆಯಾಗಿ ಕೊಟ್ಟ ನಟ ಶಾಹಿದ್ ಕಪೂರ್

ಜನರು ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣವನ್ನು ಉತ್ತಮ ವಿಷಯಕ್ಕೆ ಬಳಸಲು ಇಷ್ಟಪಡುತ್ತಾರೆ ಎಂದು ಹೇಳಿದ ನಟ ಶಾಹಿದ್ ಕಪೂರ್​ ಕಾಂತಾರ ಚಿತ್ರವನ್ನು ಹೊಗಳಿದ್ದಾರೆ.

Shahid Kapoor on Kantara
ಕಾಂತಾರ ಬಗ್ಗೆ ಶಾಹಿದ್​ ಕಪೂರ್ ಹೇಳಿಕೆ
author img

By

Published : Jan 20, 2023, 4:15 PM IST

ಭಾರತೀಯ ಚಿತ್ರರಂಗದ 2022ರ ಸೂಪರ್​ ಹಿಟ್ ಸಿನಿಮಾ ಕಾಂತಾರ. ಕನ್ನಡದಲ್ಲಿ ಬಿಡುಗಡೆ ಆಗಿ ಬಳಿಕ ತೆಲುಗು, ಮಳೆಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಧೂಳೆಬ್ಬಿಸಿದ ಚಿತ್ರ. ಸಿನಿಮಾ ಬಿಡುಗಡೆ ಆಗಿ ಮೂರುವರೆ ತಿಂಗಳು ಕಳೆದರೂ ಕೂಡ ಚಿತ್ರದ ಬಗೆಗಿನ ಗುಣಗಾನ, ಕ್ರೇಜ್ ಕಡಿಮೆ ಆಗಿಲ್ಲ. ಬಾಲಿವುಡ್​ ಚಿತ್ರರಂಗದ ನಟ ಶಾಹಿದ್ ಕಪೂರ್​ ಈ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಕಾಂತಾರ ಬಗ್ಗೆ ಶಾಹಿದ್​ ಕಪೂರ್ ಹೇಳಿಕೆ: ಕ್ರೈಮ್​ ಥ್ರಿಲ್ಲರ್​​ ಫರ್ಝಿ ವೆಬ್​ ಸೀರಿಸ್​ಗೆ ಸಜ್ಜಾಗುತ್ತಿರುವ ನಟ ಶಾಹಿದ್​ ಕಪೂರ್​ ಮಾತನಾಡಿ, ''ಒಳ್ಳೆಯ ವಿಷಯಗಳು ಕೆಲಸ ಮಾಡುತ್ತವೆ ಎಂದು ಹೇಳಿ ಕಾಂತಾರ ಚಿತ್ರವನ್ನು ಉದಾಹರಣೆ ಆಗಿ ಕೊಟ್ಟರು. ನಟ ರಿಷಬ್​ ಶೆಟ್ಟಿ ಅವರು ಬರೆದು, ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರವು ತನ್ನ ಮೂಲ ಮತ್ತು ಪ್ರಾಮಾಣಿಕ ಕಥೆಯ ಮೂಲಕ ಎಲ್ಲ ಗಡಿಗಳನ್ನು ದಾಟಿದೆ. ಇದು ಸಾಂಕ್ರಾಮಿಕ ಕೋವಿಡ್​ ಕಾಲದ ಬಳಿಕದ ಚಲನಚಿತ್ರಗಳ ಯಶಸ್ಸನ್ನು ವ್ಯಾಖ್ಯಾನಿಸುತ್ತದೆ ಎಂದು ತಿಳಿಸಿದರು.

ಉತ್ತಮ ಸಿನಿಮೀಯ ಅನುಭವ: ಇತ್ತೀಚೆಗೆ ಮಾಧ್ಯಮದೊಂದಿಗೆ ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ ಅವರು, ಕಾಂತಾರದಂತಹ ಚಿತ್ರವನ್ನು ನೀವು ಹೇಗೆ ನಿರ್ಣಯಿಸುತ್ತೀರಿ? ಆ ಸಿನಿಮಾ ಬಿಡುಗಡೆ ಅದ ಹೊತ್ತಿನಲ್ಲಿ ಚಮತ್ಕಾರ ಮಾಡಲಿಲ್ಲ. ಆದರೆ ಬಳಿಕ ಆ ಸಿನಿಮಾದ ಯಶಸ್ಸನ್ನು ಪ್ರೇಕ್ಷಕರು ಮಾಡಿದರು. ಸಿನಿಪ್ರಿಯರು ಸಿನಿಮಾವನ್ನು ಯಶಸ್ವಿಗೊಳಿಸಿದ್ದಾರೆ. ಕಾಂತಾರ ಗಡಿಗಳನ್ನು ದಾಟಿ ಹೊಸ ನೆಲೆ ಸೃಷ್ಟಿಸಿದೆ. ಉತ್ತಮ ಸಿನಿಮೀಯ ಅನುಭವ ಕೊಟ್ಟ ಚಿತ್ರವಿದು. ಕಳೆದ ಮೂರು ವರ್ಷಗಳಲ್ಲಿ (ಕೋವಿಡ್ ಬಳಿಕ) ಸಿನಿಮಾ ನೋಡುವ ರೀತಿ, ಪ್ರೇಕ್ಷಕರ ನಿರೀಕ್ಷೆ ಬದಲಾಗಿದೆ ಎಂದು ತಿಳಿಸಿದರು.

ಸಿನಿಪ್ರಿಯರ ನಿರೀಕ್ಷೆ ಬೆಟ್ಟದಷ್ಟಿದೆ: ನಾನು ಪ್ರೇಕ್ಷಕರಲ್ಲಿ ಗಮನಿಸಿದ ಒಂದು ವಿಷಯ ಎಂದರೆ, ಅವರು ಕಷ್ಟಪಟ್ಟು ಗಳಿಸಿದ ಹಣವನ್ನು ಸಾಧಾರಣ ವಿಷಯಕ್ಕೆ ವಿನಿಯೋಗಿಸಲು ಸಿದ್ಧರಿಲ್ಲ. ಉತ್ತಮ ವಿಷಯ ಮಾತ್ರ ಒಂದು ನಿರ್ದಿಷ್ಟ ಪ್ರಮಾಣ, ಅರ್ಹತೆ ಹೊಂದಿರುತ್ತದೆ. ಕೇವಲ ಒಂದು ನಿರ್ದಿಷ್ಟ ಮನೋರಂಜನಾ ಅಂಶವು ಕೆಲಸ ಮಾಡುವುದಿಲ್ಲ. ಸಿನಿಮಾವನ್ನು ನೋಡುವವರು ಉತ್ತಮ, ವಿಭಿನ್ನ ಕಥಾಹಂದರವನ್ನು ನಿರೀಕ್ಷಿಸುತ್ತಾರೆ. ಅವರು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದಾರೆ. ಆದರೆ ಸಿನಿಮಾ ಉತ್ತಮವಾಗಿರಬೇಕು ಎಂದು ನಟ ಶಾಹಿದ್ ಕಪೂರ್​ ತಿಳಿಸಿದರು.

ಇದನ್ನೂ ಓದಿ: ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಸಿದ್ದಾರ್ಥ್​-ಕಿಯಾರಾ: ಸ್ವರ್ಣನಗರಿಯಲ್ಲಿ ಅದ್ಧೂರಿ ಮದುವೆ!

ಸಿನಿ ಕ್ಷೇತ್ರ ಮೇಲೆ ಕೋವಿಡ್​ ಪ್ರಭಾವ: ಇನ್ನು ಜಗತ್ತಿನೆಲ್ಲೆಡೆ ಸಾಂಕ್ರಾಮಿಕ ರೋಗ ಬಹಳ ಪ್ರಭಾವ ಬೀರಿದೆ. ಸಿನಿ ಕ್ಷೇತ್ರ ಕೂಡ ಹೊರತಲ್ಲ. ಕೋವಿಡ್​ ಆರಂಭಿಕ ಹಂತವು ಎಲ್ಲರಿಗೂ ಕೂಡ ಬಹಳ ಸವಾಲಾಗಿತ್ತು. ಸಾಮಾಜಿಕ ಅಂತರ ವಿಷಯಗಳು ಜನರು ಒಗ್ಗೂಡಲು ಅಡೆತಡೆ ಆಯಿತು. ಇದು ಸಿನಿಮಾ ವೀಕ್ಷಿಸಲು ಬರುವ ಪ್ರೇಕ್ಷಕರ ಮೇಲೆ ಕೊಂಚ ಪ್ರಭಾವ ಬೀರಿದೆ ಎಂದು ತಿಳಿಸಿದೆ.

ಕನ್ನಡ ನಟನ ಬಗ್ಗೆ ಮೆಚ್ಚುಗೆ: ಕನ್ನಡದ ಕಾಂತಾರ ಬಗ್ಗೆ ಗುಣಗಾನ ಮಾಡಿರುವ ನಟ ಶಾಹಿದ್​ ಕಪೂರ್​ ಈ ಹಿಂದೆ ನಿರ್ಮಾಪಕ ಕರಣ್ ಜೋಹರ್ ನಿರೂಪಣೆಯ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕನ್ನಡದ ರಾಕಿಂಗ್​​ ಸ್ಟಾರ್​ ಯಶ್​ ಬಗ್ಗೆ ಗುಣಗಾನ ಮಾಡಿದ್ದರು. ಉತ್ತಮ ನಟ ಯಾರು ಎಂಬ ಪ್ರಶ್ನೆಗೆ ನಟ ಶಾಹಿದ್​ ಕಪೂರ್ ಅವರು ನಟ ಯಶ್​ ಹೆಸರನ್ನು ಉಲ್ಲೇಖಿಸಿದ್ದರು. ಇದು ಕನ್ನಡಿಗರಿಗೆ, ಸ್ಯಾಂಡಲ್​ವುಡ್​ಗೆ, ಯಶ್​ ಅಭಿಮಾನಿಗಳಿಗೆ ಸಂತಸದ ಕ್ಷಣವಾಗಿತ್ತು.

ಇದನ್ನೂ ಓದಿ: ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್​ ನಿಶ್ಚಿತಾರ್ಥ: ಸಮಾರಂಭದ ಕಳೆ ಹೆಚ್ಚಿಸಿದ ಬಾಲಿವುಡ್ ತಾರೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.