ಟಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ನಟ ಉಸ್ತಾದ್ ರಾಮ್ ಪೋತಿನೇನಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಮ್ ಜನುಮದಿನದ ನಿಮಿತ್ತ ‘ಬೋಯಾಪಾಟಿರ್ಯಾಂಪೋ’ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಕೈಯಲ್ಲಿ ಕತ್ತಿ ಹಿಡಿದು, ಎಮ್ಮೆಯೊಟ್ಟಿಗೆ ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ರಾಮ್ ಪೋತಿನೇನಿ ಎಂಟ್ರಿ ಕೊಟ್ಟಿದ್ದಾರೆ. ಮಾಸ್ ಪ್ರಿಯರಿಗೆ ಹೇಳಿಮಾಡಿಸಿದಂತಿರುವ ಬೋಯಾಪಾಟಿರ್ಯಾಂಪೋ ಸಿನಿಮಾಗೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಸಾರಥಿ ಬೋಯಾಪಾಟಿ ಸೀನು ಆಕ್ಷನ್ ಕಟ್ ಹೇಳಿದ್ದಾರೆ.
-
BOYAPATI SREENU - RAM POTHINENI PAN-INDIA FILM FIRST GLIMPSE... On #RamPothineni’s birthday today, director #BoyapatiSreenu [#Sarrainodu, #Akhanda] unveils #FirstGlimpse of the PAN-#India film, starring #RamPothineni.#BoyapatiRAPOTeaser HINDI:
— taran adarsh (@taran_adarsh) May 15, 2023 " class="align-text-top noRightClick twitterSection" data="
Produced by Srinivasaa… pic.twitter.com/usUJuYx0Df
">BOYAPATI SREENU - RAM POTHINENI PAN-INDIA FILM FIRST GLIMPSE... On #RamPothineni’s birthday today, director #BoyapatiSreenu [#Sarrainodu, #Akhanda] unveils #FirstGlimpse of the PAN-#India film, starring #RamPothineni.#BoyapatiRAPOTeaser HINDI:
— taran adarsh (@taran_adarsh) May 15, 2023
Produced by Srinivasaa… pic.twitter.com/usUJuYx0DfBOYAPATI SREENU - RAM POTHINENI PAN-INDIA FILM FIRST GLIMPSE... On #RamPothineni’s birthday today, director #BoyapatiSreenu [#Sarrainodu, #Akhanda] unveils #FirstGlimpse of the PAN-#India film, starring #RamPothineni.#BoyapatiRAPOTeaser HINDI:
— taran adarsh (@taran_adarsh) May 15, 2023
Produced by Srinivasaa… pic.twitter.com/usUJuYx0Df
ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಸದ್ಯ ಬೋಯಾಪಾಟಿರ್ಯಾಂಪೋ ಎಂಬ ಶೀರ್ಷಿಕೆ ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಟೈಟಲ್ ರಿವೀಲ್ ಮಾಡಲಿದೆ ಚಿತ್ರತಂಡ. ಬೋಯಾಪಾಟಿ ಶೀನು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
-
RAM POTHINENI - PURI JAGGANADH REUNITE FOR ‘iSMART SHANKAR’ SEQUEL… TITLED ‘DOUBLE iSMART’… On the eve of #RamPothineni’s birthday, director #PuriJagannadh announces his next PAN-#India project, titled #DoubleiSmart… Sequel to #iSmartShankar… Will star #RamPothineni in the… pic.twitter.com/irS4ggJDzP
— taran adarsh (@taran_adarsh) May 14, 2023 " class="align-text-top noRightClick twitterSection" data="
">RAM POTHINENI - PURI JAGGANADH REUNITE FOR ‘iSMART SHANKAR’ SEQUEL… TITLED ‘DOUBLE iSMART’… On the eve of #RamPothineni’s birthday, director #PuriJagannadh announces his next PAN-#India project, titled #DoubleiSmart… Sequel to #iSmartShankar… Will star #RamPothineni in the… pic.twitter.com/irS4ggJDzP
— taran adarsh (@taran_adarsh) May 14, 2023RAM POTHINENI - PURI JAGGANADH REUNITE FOR ‘iSMART SHANKAR’ SEQUEL… TITLED ‘DOUBLE iSMART’… On the eve of #RamPothineni’s birthday, director #PuriJagannadh announces his next PAN-#India project, titled #DoubleiSmart… Sequel to #iSmartShankar… Will star #RamPothineni in the… pic.twitter.com/irS4ggJDzP
— taran adarsh (@taran_adarsh) May 14, 2023
ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಬೋಯಾಪಾಟಿರ್ಯಾಂಪೋ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಪಕ್ಕ ಮಾಸ್ ಎಂಟರ್ ಟೈನರ್ ಜಾನರ್ ನ ಈ ಚಿತ್ರ ಇದೇ ವರ್ಷ ಅಕ್ಟೋಬರ್ 20ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ಮತ್ತೆ ಒಂದಾದ ಸ್ಮಾರ್ಟ್ ಜೋಡಿ: 2019 ರಲ್ಲಿ ರಾಮ್ ಪೋತಿನೇನಿಗೆ ಬ್ರೇಕ್ ಕೊಟ್ಟಿದ್ದ ಐ ಸ್ಮಾರ್ಟ್ ಶಂಕರ್ ಸಿನಿಮಾದ ಮುಂದುವರೆದ ಭಾಗದ ಬಗ್ಗೆಯೂ ಜನ್ಮದಿನದಂದು ಘೋಷಣೆಯಾಗಿದೆ. ಮತ್ತೆ ಪುರಿ ಜಗನ್ನಾಥ್ ಕಾಂಬಿನೇಶನ್ನಲ್ಲಿ ರಾಮ್ ಸಿನಿಮಾ ಮಾಡುತ್ತಿದ್ದಾರೆ. ಪುರಿ ಜಗನ್ನಾಥ್ ವಿಜಯ್ ದೇವರಕೊಂಡ ಅವರ ಜೊತೆ ಮಾಡಿದ ಲೈಗರ್ ನಂತರ ಮತ್ತೆ ಡೈರೆಕ್ಷನ್ ವಿಭಾಗಕ್ಕೆ ಬಂದಿದ್ದಾರೆ.
ಸೀಕ್ವೆಲ್ ಸಿನಿಮಾಗಳು ಹೆಚ್ಚಾಗಿ ಈಗ ಆಗುತ್ತಿದ್ದು, ಅದೇ ಟೆಂಡ್ನ್ನು ಹಿಟ್ ನಿರ್ದೇಶಕ ಫಾಲೋ ಮಾಡುತ್ತಿದ್ದಾರೆ. ಸಧ್ಯಕ್ಕೆ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ, ಐ ಸ್ಮಾರ್ಟ್ ಎಂದು ಬರೆದು ರುದ್ರಾಕ್ಷಿ ಸುತ್ತಿಕೊಂಡಿರುವ ತ್ರಿಶೂಲವನ್ನು ಒಳಗೊಂಡಿದೆ. ಇದು ಸಹ ಪಂಚ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ತೆಲುಗು, ಕನ್ನಡ, ಹಿಂದಿ, ಮಲೆಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಸ್ವತಃ ಪುರಿ ಜಗನ್ನಾಥ್ ಬಂಡವಾಳ ಹೂಡುತ್ತಿದ್ದಾರೆ. ಇವರಿಗೆ ನಟಿ ಹಾಗೂ ನಿರ್ಮಾಪಕಿ ಚಾರ್ಮಿ ಕೌರ್ ಸಾಥ್ ನೀಡುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಮಹಾ ಶಿವರಾತ್ರಿಯಂದು ತೆರೆಕಾಣಲಿದೆ. ಅಂದರೆ 2024ರ ಮಾರ್ಚ್ 8 ರಂದು ಪಂಚ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಇದು ನನ್ನ ಕೊನೆಯ ಚಿತ್ರ ಅಂತಾನೇ ನಾನು ಕೆಲಸ ಮಾಡುವುದು: ಕೇರಳ ಸ್ಟೋರಿ ಸ್ಟಾರ್ ಅದಾ ಶರ್ಮಾ