ETV Bharat / entertainment

ಸಿನಿಮಾ ಕ್ಷೇತ್ರ ಪ್ರವೇಶಿಸಿದ ನೆನಪಿರಲಿ ಪ್ರೇಮ್​ ಮಗಳು; 'ಟಗರು ಪಲ್ಯ'ದಿಂದ ಅದೃಷ್ಟ ಪರೀಕ್ಷೆ! - ನಟ ಪ್ರೇಮ್

ನಟ ಡಾಲಿ ಧನಂಜಯ್ ತಮ್ಮ ನಿರ್ಮಾಣದ ಮೂಲಕವೇ ನಟ ಪ್ರೇಮ್ ಅವರ ಮಗಳನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದಾರೆ.

Nenapirali Prem's Daughter
ಟಗರು ಪಲ್ಯ ಸಿನಿಮಾ ನಟಿ ಅಮೃತ ಪ್ರೇಮ್​
author img

By

Published : Nov 28, 2022, 5:51 PM IST

ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಸಿನಿ ಕೆರಿಯರ್ ಶುರು ಮಾಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಲು ಬಟ್ಟಲು ಕಣ್ಣಿನ ಹುಡುಗಿ ಅಣಿಯಾಗುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Nenapirali Prem's Daughter
ಟಗರು ಪಲ್ಯ ಸಿನಿಮಾ ನಟಿ ಅಮೃತ ಪ್ರೇಮ್​

ಟಗರು ಪಲ್ಯಕ್ಕಾಗಿ ಅಮೃತಾ ಲಂಗ ದಾವಣಿ ತೊಟ್ಟು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ. ನಿರ್ದೇಶಕ ಕೆ ಉಮೇಶ್ ಅವರು ಹಳ್ಳಿ ಹುಡುಗಿಯ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಮೃತ ಕೂಡ ಯಾವುದೇ ಟೆನ್ಶನ್‌ ಇಲ್ಲದೆ ಸಖತ್ ಕೂಲ್ ಆಗಿ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದರು. ಫೋಟೋಶೂಟ್ ಮೇಕಿಂಗ್ ಅನಾವರಣಗೊಂಡಿದೆ.

ನಟ ಪ್ರೇಮ್​ ಮಗಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಉಮೇಶ್.ಕೆ ಕೃಪ, 'ಸಿನಿಮಾಗೆ ಫ್ರೆಶ್ ಫೇಸ್ ಹುಡುಕಾಟದಲ್ಲಿದ್ದೆವು. ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಪುತ್ರಿ ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದೆ. ಕಥೆ ಕೇಳಿ ಹೇಳುತ್ತೇನೆ ಎಂದಿದ್ರು. ಅವರಿಗೂ ಈ ಕಥೆ ಇಷ್ಟವಾಯ್ತು. ಸಿನಿಮಾ ಮಾಡಲು ಒಪ್ಪಿಕೊಂಡ್ರು' ಎಂದರು.

Nenapirali Prem's Daughter
ಟಗರು ಪಲ್ಯ ಸಿನಿಮಾ ನಟಿ ಅಮೃತ ಪ್ರೇಮ್​

ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ನೆನಪಿರಲಿ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ಒಬ್ಬ ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರೋದು ಖುಷಿ ಇದೆ. ಆಕೆ ಓದುವುದರಲ್ಲೂ ಡಿಸ್ಟಿಂಕ್ಷನ್, ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾಳೆ.

Nenapirali Prem's Daughter
ಟಗರು ಪಲ್ಯ ಸಿನಿಮಾ ನಟಿ ಅಮೃತ ಪ್ರೇಮ್​

ನಿರ್ದೇಶಕ ಉಮೇಶ್.ಕೆ ಕೃಪ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಕೇಳಿದ ಮೇಲೆ ಬೇಡ ಎನ್ನಲಾಗಲಿಲ್ಲ. ಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳಸಬೇಕು' ಎಂದು ಮನವಿ ಮಾಡಿದರು.

Nenapirali Prem's Daughter
ಟಗರು ಪಲ್ಯ ಸಿನಿಮಾ ನಟಿ ಅಮೃತ ಪ್ರೇಮ್​

ಬಯೋ ಮೆಡಿಕಲ್ ಇಂಜಿನಿಯರಿಂಗ್ ಓದುತ್ತಿರುವ ಅಮೃತ ಪ್ರೇಮ್ ಓದಿನ ಜೊತೆ ಚಿತ್ರರಂಗದಲ್ಲೂ ಗುರುತಿಸಿಕೊಳ್ಳಲಿದ್ದಾರೆ. 'ಟಗರು ಪಲ್ಯ' ಸಿನಿಮಾ ಹಲವು ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಿಕೊಟ್ಟಿದೆ. ಉಮೇಶ್.ಕೆ.ಕೃಪ ಈ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. 'ಇಕ್ಕಟ್' ಖ್ಯಾತಿಯ ನಾಗಭೂಷಣ್ ನಾಯಕ ನಟನಾಗಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲಿ ಸೆಟ್ಟೇರಲಿದೆ.

ಇದನ್ನೂ ಓದಿ: ಮೆಟ್ರೋ ರೈಲು ಪ್ರಯಾಣದ ಖುಷಿ ಅನುಭವಿಸಿದ ರೆಬಲ್ ಸ್ಟಾರ್ ಸುಪುತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.