ETV Bharat / entertainment

ಹಕ್ಕುಗಳಿಗಾಗಿ ಹೋರಾಟ, ಸರ್ಕಾರಕ್ಕೆ ಸೆಡ್ಡು ಹೊಡೆಯಲು 'ಕ್ಷೇತ್ರಪತಿ'ಯಾದ ನವೀನ್ ಶಂಕರ್ - ಈಟಿವಿ ಭಾರತ್​ ಕನ್ನಡ ನ್ಯೂಸ್

ಸದ್ಯದಲ್ಲೇ ಕ್ಷೇತ್ರಪತಿ ಸಿನಿಮಾ ಬೆಳ್ಳಿತೆರೆ ಬರಲಿದ್ದು, ಈ ನಿಟ್ಟಿನಲ್ಲಿ ಚಿತ್ರತಂಡ ಭರ್ಜರಿ ಸಿದ್ದತೆ ಮಾಡಿಕೊಂಡಿದೆ.

ನವೀನ್ ಶಂಕರ್ ನಟನೆಯ ಕ್ಷೇತ್ರಪತಿ ಸಿನಿಮಾ
ನವೀನ್ ಶಂಕರ್ ನಟನೆಯ ಕ್ಷೇತ್ರಪತಿ ಸಿನಿಮಾ
author img

By

Published : Jun 15, 2023, 10:48 PM IST

ಸ್ಯಾಂಡಲ್‌ವುಡ್‌ನಲ್ಲಿ ಕಂಟೆಂಟ್ ಇರುವ ಚಿತ್ರಗಳು ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿವೆ. ಗುಲ್ಟು ಚಿತ್ರದ ಮೂಲಕ ಭರವಸೆ ಮೂಡಿಸಿ, ಹೊಂದಿಸಿ ಬರೆಯಿರಿ, ಹೊಯ್ಸಳ ಚಿತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಅನಾವರಣ ಮಾಡಿರುವ ನವೀನ್ ಶಂಕರ್ ಬೇಡಿಕೆ ಹೊಂದಿರುವ ನಟ. ಡಾಲಿ ಧನಂಜಯ್​ ನಟನೆಯ 25ನೇ ಚಿತ್ರದಲ್ಲಿ ಗುರುದೇವ್ ಹೊಯ್ಸಳದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡ ನವೀನ್ ಶಂಕರ್ ಈಗ ಕ್ಷೇತ್ರಪತಿ ಸಿನಿಮಾ ಮಾಡ್ತಿದ್ದಾರೆ.

ನವೀನ್ ಉತ್ತರ ಕರ್ನಾಟಕದ ಹೈದನಾಗಿ ಕಾಣಿಸಿಕೊಂಡಿರುವ ಕ್ಷೇತ್ರಪತಿ ಸಿನಿಮಾದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನವೀನ್ ಶಂಕರ್ ಅವರ ಲುಕ್​ ಹಾಗೂ ಟೀಸರ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಕ್ಕುಗಳಿಗಾಗಿ ನಡೆಯುವ ಹೋರಾಟದ ಕಥೆ ಕ್ಷೇತ್ರಪತಿ ಸಿನಿಮಾದಲ್ಲಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ : Daredevil Mustafa: 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ

ಈ ಹಿಂದೆ ಅದ್ಭುತ ಪ್ರದರ್ಶನ ಕಂಡ "ಹೊಂದಿಸಿ ಬರೆಯಿರಿ" ಚಿತ್ರದಲ್ಲಿ ನಾಯಕ - ನಾಯಕಿಯಾಗಿ ನಟಿಸಿ, ಜನಮನ ಗೆದ್ದಿರುವ, ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ "ಕ್ಷೇತ್ರಪತಿ" ಚಿತ್ರದಲ್ಲೂ ನಾಯಕ - ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ : 'ಮಾರಕಾಸ್ತ್ರ' ಚಿತ್ರಕ್ಕಾಗಿ ಮತ್ತೆ ಖಾಕಿ ತೊಟ್ಟ ಆ್ಯಕ್ಷನ್ ಕ್ವೀನ್ ಮಾಲಾಶ್ರೀ

"ಕ್ಷೇತ್ರಪತಿ" ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ. ಹಾಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ‌. ಸಿನಿಮಾ ಲೋಕದಲ್ಲಿ ಹೊಸ ಅಧ್ಯಾಯ ಬರೆದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್ ಚಿತ್ರ ಸಂಗೀತ ನೀಡಿ ಎಲ್ಲರನ್ನೂ ಕುಣಿಸಿದ್ದ ರವಿ ಬಸ್ರೂರ್ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ.ವಿ. ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನವಿದೆ. ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯದಲ್ಲೇ ಕ್ಷೇತ್ರಪತಿ ಬೆಳ್ಳಿತೆರೆಯ ಮೂಲಕ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ : ಸಂಚಾರಿ ವಿಜಯ್​ ಎರಡನೇ ಪುಣ್ಯಸ್ಮರಣೆ: ಹೋಟೆಲ್​ ಕೆಲ್ಸ ಮಾಡ್ತಾ ಸಿನಿಮಾ ಹೀರೋ ಆದ ನಟರಿವರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.