ETV Bharat / entertainment

ಸಿಕ್ಸ್​ ಪ್ಯಾಕ್​ ಮೈಕಟ್ಟು, ಬಜಾರ್​ ಹುಡುಗ 'ಧನ್ವೀರ್ ಗೌಡ್ರ' ಖಡಕ್‌ ದರ್ಶನ- ವಿಡಿಯೋ ನೋಡಿ - Dhanveer Gowda body build

ಮಾಸ್​ ಅವತಾರದಲ್ಲಿ ಕಾಣಿಸಿಕೊಳ್ಳಲು ನಟ ಧನ್ವೀರ್ ಗೌಡ ಸಜ್ಜಾಗಿದ್ದು, ಮೈಕಟ್ಟಿನ ವಿಡಿಯೋ ಹಂಚಿಕೊಂಡಿದ್ದಾರೆ.

Actor Dhanveer Gowda
ನಟ ಧನ್ವೀರ್ ಗೌಡ
author img

By

Published : May 17, 2023, 1:18 PM IST

ನಟ ಧನ್ವೀರ್ ಗೌಡ ಸಿಕ್ಸ್​ ಪ್ಯಾಕ್​ ಮೈಕಟ್ಟು

2019ರಲ್ಲಿ ತೆರೆಕಂಡ ಬಜಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ಧನ್ವೀರ್ ಗೌಡ. ಸ್ಯಾಂಡಲ್​ವುಡ್​ನಲ್ಲಿ ಸಾಧಿಸಬೇಕೆಂಬ ಛಲ, ಅದಕ್ಕೆ ತಕ್ಕ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಗಳತ್ತ 'ಧನ್ವೀರ್ ಗೌಡ' ಚಿತ್ತ ಹರಿಸಿದ್ದಾರೆ. ಇದೀಗ ಕೈವ ಹಾಗೂ ವಾಮನ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಶಂಕರ್ ರಾಮನ್ ಆ್ಯಕ್ಷನ್​ ಕಟ್ ಹೇಳಿರುವ 'ವಾಮನ' ಸಿನಿಮಾ ಮತ್ತು ಜಯತೀರ್ಥ ನಿರ್ದೇಶನದ 'ಕೈವ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಚಿತ್ರಗಳನ್ನು ಶೀಘ್ರವೇ ರಿಲೀಸ್​ ಮಾಡಬೇಕೆಂದು ಚಿತ್ರತಂಡದಿಂದ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಧನ್ವೀರ್ ಗೌಡ ಬೇರ್ ಬಾಡಿಯಲ್ಲಿ ದರ್ಶನ ಕೊಟ್ಟಿದ್ದಾರೆ.

ಹೇಳಿ ಕೇಳಿ ನಟ ಧನ್ವೀರ್ ಫಿಟ್ನೆಸ್​ಗೆ ಹೆಚ್ಚು ಒತ್ತು ಕೊಡುವ ಯುವ ನಟ. ಪ್ರತಿ ಸಿನಿಮಾಕ್ಕಾಗಿ ಸಾಕಷ್ಟು ಕಸರತ್ತು ನಡೆಸುವ ಧನ್ವೀರ್​ ಸದ್ಯ ಸಿಕ್ಸ್ ಪ್ಯಾಕ್ ಕ್ಲಬ್ ಸೇರಿದ್ದಾರೆ. ಕಟ್ಟುಮಸ್ತಾದ ದೇಹ ಹೊಂದಿರುವ ಧನ್ವೀರ್ ದರ್ಶನ ಕೊಟ್ಟಿರುವ ಝಲಕ್ ನೋಡಿದ್ರೆ ಅಬ್ಬಬ್ಬಾ! ಅನ್ನೋದು ಖಂಡಿತ.

ಇಷ್ಟೆಲ್ಲ ಕಷ್ಟಪಟ್ಟು ದೇಹವನ್ನು ಹುರಿಗೊಳಿಸಿರುವ ಧನ್ವೀರ್ ಗೌಡ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ. ಮಾಸ್, ಲವರ್ ಬಾಯ್ ಹೀಗೆ ಯಾವುದೇ ಪಾತ್ರ ಕೊಟ್ಟರೂ ಅದ್ಭುತವಾಗಿ ನಟಿಸುವ ಧನ್ವೀರ್ ಬಜಾರ್ ಚಿತ್ರದಲ್ಲಿ ಮಾಸ್ ಅವತಾರದಲ್ಲಿ, ಬೈ ಟು ಲವ್ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ವಾಮನ ಹಾಗೂ ಕೈವ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ. ಒಂದಷ್ಟು ಹೊಸ ಕಥೆ ಕೇಳಿರುವ ಅವರು ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಿದ್ದಾರೆ. ಹೊಸ ಸಿನಿಮಾಗಾಗಿ ಬಜಾರ್ ಹುಡ್ಗ ಇಷ್ಟೊಂದು ಕಸರತ್ತು ಮಾಡಿರೋದಾ ಅನ್ನೋದು ಸದ್ಯದಲ್ಲೇ ರಿವೀಲ್ ಆಗಲಿದೆ.

ಇದನ್ನೂ ಓದಿ: ಶಾರುಖ್ ಮುಂಬೈ ನಿವಾಸಕ್ಕೆ ಅಮೆರಿಕ ರಾಯಭಾರಿ ಭೇಟಿ; ಬಾಲಿವುಡ್, ಹಾಲಿವುಡ್‌ ಬಗ್ಗೆ ಮಾತುಕತೆ

ಕೆಲ ದಿನಗಳ ಹಿಂದೆ 'ವಾಮನ' ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ನಟನ ಮಾಸ್​​ ಅವತಾರ ಟೀಸರ್​ನಲ್ಲಿ ಅದ್ಧೂರಿಯಾಗಿ ಮೂಡಿ ಬಂದಿದೆ. ಆ್ಯಕ್ಷನ್, ಅದ್ಧೂರಿ ಸೆಟ್, ಹೊಸ ಗೆಟಪ್, ಮ್ಯೂಸಿಕ್, ವಿಷ್ಯುವಲ್ಸ್, ಪಂಚಿಂಗ್ ಡೈಲಾಗ್ ಎಲ್ಲವೂ ಪ್ರೇಕ್ಷಕರ ಮನ ಗೆದ್ದಿತ್ತು. ಧನ್ವೀರ್ ಗೌಡರ ಎಂಟ್ರಿ ಚಿತ್ರ ಗೆಲ್ಲುವ ಸೂಚನೆ ಕೊಟ್ಟಿತ್ತು. ಈ ಸಿನಿಮಾದಲ್ಲಿ ಅವರು ಗುಣ ಎಂಬ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಪಿವಿಆರ್​ ಐನಾಕ್ಸ್​ಗೆ 300 ಕೋಟಿ ರೂ.ಗೂ ಅಧಿಕ ನಷ್ಟ: 50 ಸ್ಕ್ರೀನ್​​ ಮುಚ್ಚುವ ನಿರ್ಧಾರ

ಧನ್ವೀರ್​ ಜೊತೆ ಏಕ್ ಲವ್ ಯಾ ಚಿತ್ರ ನಟಿ ರೀಷ್ಮಾ ನಾಣಯ್ಯ ಅಭಿನಯ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಆ್ಯಕ್ಷನ್​​ ಸೀನ್​ಗಳು ಪ್ರೇಕ್ಷಕರ ಮನ ತಲುಪಲಿದೆ. ಖಳನಾಯಕನಾಗಿ ಸಂಪತ್ ಕಾಣಿಸಿಕೊಳ್ಳಲಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ, ಮಹೇನ್ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಖ ಅವರ ಸಂಕಲನ, ಅರ್ಜುನ್ ರಾಜ್ ಆ್ಯಕ್ಷನ್ ಈ ಚಿತ್ರಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.