ಕನ್ನಡ ಚಿತ್ರರಂಗದಲ್ಲಿ ಮಾಸ್ ನಿರ್ದೇಶಕ ಎಂದೇ ಖ್ಯಾತರಾಗಿರುವ ಸುಕ್ಕಾ ಸೂರಿ ನಿರ್ದೇಶನ ಹಾಗೂ ಅಭಿಷೇಕ್ ಅಂಬರೀಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಬ್ಯಾಡ್ ಮ್ಯಾನರ್ಸ್'. ಈ ಸಿನೆಮಾ ಸೆಟ್ಟೇರಿದಾಗಿಂದಲೂ ಸದ್ದಿಲ್ಲದೇ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈ ಸಿನಿಮಾ ಅಡ್ಡಾಕ್ಕೆ ನಟ ಡಾಲಿ ಧನಂಜಯ್ ಭೇಟಿ ನೀಡಿದ್ದಾರೆ.
ಈ ವೇಳೆ, ಸುಮಾರು ಒಂದು ಗಂಟೆ ಕಾಲ ಸೂರಿ ಹಾಗೂ ಅಭಿಷೇಕ್ ಜೊತೆ ಧನಂಜಯ್ ಮಾತುಕತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಇದೊಂದು ಔಪಚಾರಿಕ ಭೇಟಿ ಅಂತಾ ಹೇಳಲಾಗುತ್ತಿದೆ. 'ಬ್ಯಾಡ್ ಮ್ಯಾನರ್ಸ್' ಒಂದು ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಕಥೆಯಾಧಾರಿತ ಚಿತ್ರವಾಗಿದೆ.
ಚಿತ್ರಕ್ಕಾಗಿ ಅಭಿಷೇಕ್ ಸಾಕಷ್ಟು ತಯಾರಿಯೊಂದಿಗೆ ಅಭಿನಯಿಸಿದ್ದಾರೆ. ಸುಧೀರ್ ಕೆ.ಎಂ ನಿರ್ಮಾಣ ಮಾಡಲಿದ್ದು, ಚರಣ್ ರಾಜ್ ಸಂಗೀತ ಇರಲಿದೆ. ಛಾಯಾಗ್ರಹಕ ಶೇಖರ್ ಕ್ಯಾಮರಾ ಕೈಚಳಕವಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ.
ಈ ಹಿಂದೆ ಡಾಲಿ ಧನಂಜಯ್, ನಿರ್ದೇಶಕ ಸೂರಿ ಜೊತೆ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಮಾಡಿದ್ದರು. ಇದೀಗ ಕೆಲ ಮೂಲಗಳ ಪ್ರಕಾರ ಈ ಭೇಟಿ ವೇಳೆ ಮತ್ತೆ ಧನಂಜಯ್ ಹಾಗೂ ಸೂರಿ ಸಿನೆಮಾ ಮಾಡುವ ಮಾತುಕತೆ ಆಗಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ತೋಪೆದ್ದ 'ಧಾಕಡ್': ನಿರ್ಮಾಪಕ, ನಟಿ ಕಂಗನಾ ಕಂಗಾಲು