ಆ ದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಚೇತನ್ ಕೆಲ ಉತ್ತಮ ಸಿನಿಮಾಗಳನ್ನು ಮನೋರಂಜನಾ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅದಾದ ಬಳಿಕ ಸಾಮಾಜಿಕ ಸೇವೆ, ಹೋರಾಟಗಳಲ್ಲಿ ತೊಡಗಿಕೊಂಡರು. ಹಲವು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಚೇತನ್ ಹೇಳಿಕೆಗಳು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತವೆ.
-
Thank you, Kishore, for expressing solidarity by calling my visa cancellation ‘extreme’ & challenging Hindutva politics in your own way.https://t.co/wAr4QLm6PS pic.twitter.com/kMExzWJFjj
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 18, 2023 " class="align-text-top noRightClick twitterSection" data="
">Thank you, Kishore, for expressing solidarity by calling my visa cancellation ‘extreme’ & challenging Hindutva politics in your own way.https://t.co/wAr4QLm6PS pic.twitter.com/kMExzWJFjj
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 18, 2023Thank you, Kishore, for expressing solidarity by calling my visa cancellation ‘extreme’ & challenging Hindutva politics in your own way.https://t.co/wAr4QLm6PS pic.twitter.com/kMExzWJFjj
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 18, 2023
ನಟ ಚೇತನ್ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ. ವೀಸಾ ರದ್ಧತಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ ಚಿತ್ರರಂಗದವರು ಈ ಬಗ್ಗೆ ಧ್ವನಿ ಎತ್ತಿರಲಿಲ್ಲ. ಮೊದಲ ಬಾರಿಗೆ ನಟ ಕಿಶೋರ್ ಪರೋಕ್ಷವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ನಟ ಚೇತನ್ ಅವರ ಹೆಸರು ಉಲ್ಲೇಖಿಸರಿರಲಿಲ್ಲ. ಆದರೆ ಆ ಬರಹ ಚೇತನ್ ಪರ ಎಂಬುದು ಮಾತ್ರ ಸ್ಪಷ್ಟ. ಕಿಶೋರ್ ಬರಹಕ್ಕೆ ಚೇತನ್ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ನಡೆಗೆ ಬೆಂಬಲ ಸೂಚಿಸಿದ ಚಿತ್ರನಟನನ್ನು ಸ್ಮರಿಸಿ, ಧನ್ಯವಾದ ಅರ್ಪಿಸಿದ್ದಾರೆ.
ನಟ ಚೇತನ್ ಟ್ವೀಟ್: ''ನನ್ನ ವೀಸಾ ರದ್ಧತಿ ಬಗ್ಗೆ ಮಾತನಾಡಿದ್ದಕ್ಕೆ, ಮತ್ತು ನಿಮ್ಮದೇ ಆದ ರೀತಿಯಲ್ಲಿ ಹಿಂದುತ್ವ ರಾಜಕೀಯಕ್ಕೆ ಸವಾಲು ಹಾಕಿದ್ದಕ್ಕಾಗಿ ಧನ್ಯವಾದಗಳು ಕಿಶೋರ್'' ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.
ನಟ ಕಿಶೋರ್ ಪೋಸ್ಟ್ ಹೀಗಿತ್ತು: ''ಹಿಂದುತ್ವ ಎನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನಸ್ಥಿತಿ ಇರುವಂತಹದ್ದು. ಆದರೆ 'ಹಿಂದುತ್ವ' ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೇ ಎನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ?.
-
'ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು'?: ಚೇತನ್ ವೀಸಾ ರದ್ಧತಿ ಬಗ್ಗೆ ನಟ ಕಿಶೋರ್ ಹೇಳಿದ್ದಿಷ್ಟು! https://t.co/4kW8qRffcm @ChetanAhimsa #kishore #ChetanAhimsa #chethanvisa
— ETV Bharat Karnataka (@ETVBharatKA) April 18, 2023 " class="align-text-top noRightClick twitterSection" data="
">'ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು'?: ಚೇತನ್ ವೀಸಾ ರದ್ಧತಿ ಬಗ್ಗೆ ನಟ ಕಿಶೋರ್ ಹೇಳಿದ್ದಿಷ್ಟು! https://t.co/4kW8qRffcm @ChetanAhimsa #kishore #ChetanAhimsa #chethanvisa
— ETV Bharat Karnataka (@ETVBharatKA) April 18, 2023'ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು'?: ಚೇತನ್ ವೀಸಾ ರದ್ಧತಿ ಬಗ್ಗೆ ನಟ ಕಿಶೋರ್ ಹೇಳಿದ್ದಿಷ್ಟು! https://t.co/4kW8qRffcm @ChetanAhimsa #kishore #ChetanAhimsa #chethanvisa
— ETV Bharat Karnataka (@ETVBharatKA) April 18, 2023
ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?. ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು?'' ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: 'ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು'?: ಚೇತನ್ ವೀಸಾ ರದ್ಧತಿ ಬಗ್ಗೆ ನಟ ಕಿಶೋರ್ ಹೇಳಿದ್ದಿಷ್ಟು!
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ: ಸಾಮಾಜಿಕ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕರು ನಟ ಚೇತನ್ ಬೆಂಬಲಿಸಿದ ಕಿಶೋರ್ ಅವರ ಮೇಲೂ ಕಿಡಿಕಾರಿದ್ದಾರೆ. ಬೇಕಾದರೆ ನೀವೂ ಹೋಗಿ ಎಂದು ಕಾಮೆಂಟ್ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಿಷ್ಟು ಮಂದಿ ಚೇತನ್ ಸಿದ್ಧಾಂತಕ್ಕೆ ಬೆಂಬಲವಾಗಿ ನಿಂತಿದ್ದಾರೆ. ವೀಸಾ ರದ್ದು ವಿಚಾರ ಯಾವ ರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸ್ಕಾಟ್ಲೆಂಡ್ ಪ್ರವಾಸದಲ್ಲಿ ಮಲೈಕಾ ಅರೋರಾ - ಅರ್ಜುನ್ ಕಪೂರ್