ETV Bharat / entertainment

ನಟ ರಮೇಶ್ ಅರವಿಂದ್ ಮನೆಗೆ ಬಂತು ಕೋಟಿ ಬೆಲೆ ಬಾಳುವ ಐಷಾರಾಮಿ ಕಾರ್ - ಶಿವಾಜಿ ಸುರತ್ಕಲ್ 2

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಕೋಟಿ ಬೆಲೆ ಬಾಳುವ ಐಷಾರಾಮಿ ಕಾರ್​ ಖರೀದಿಸಿದ್ದಾರೆ.

Actor and director Ramesh Aravind
ನಟ ರಮೇಶ್ ಅರವಿಂದ್ ಮನೆಗೆ ಬಂತು ಕೋಟಿ ಬೆಲೆ ಬಾಳುವ ಐಷಾರಾಮಿ ಕಾರ್
author img

By

Published : Apr 6, 2023, 9:43 PM IST

ಬೆಂಗಳೂರು: ನಟನೆ, ನಿರ್ದೇಶನ, ನಿರ್ಮಾಣ, ನಿರೂಪಣೆ ಹಾಗೂ ಮೋಟಿವೇಟರ್​ ಆಗಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಛಾಪು ಮೂಡಿಸಿರುವವರು ನಟ ರಮೇಶ್ ಅರವಿಂದ್. ಶಿವಾಜಿ ಸುರತ್ಕಲ್ 2 ಸಿನಿಮಾದ ಬಿಡುಗಡೆ ಖುಷಿಯಲ್ಲಿರೋ ಇವರ ಮನೆಗೆ ಇದೀಗ ಕೋಟಿ ಬೆಲೆ ಬಾಳುವ ಕಾರ್​ ಬಂದಿದೆ. ಹೌದು, ರಮೇಶ್ ಅರವಿಂದ್ ಹೊಚ್ಚ ಹೊಸ ಕಾರ್ ಖರೀದಿಸಿದ್ದಾರೆ.

ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರ್: ರಮೇಶ್ ಅರವಿಂದ್ ಮನೆಯಲ್ಲಿ ಲಕ್ಷಾಂತರ ಬೆಲೆ ಬಾಳುವ ಫಾರ್ಚುನರ್, ಹುಂಡೈ ಕ್ರೆಟಾ, ಇನೋವಾ ಕ್ರಿಸ್ಟಾ ಹೀಗೆ ನಾಲ್ಕು ಐಷಾರಾಮಿ ಕಾರ್​ಗಳಿವೆ. ಈಗ ಈ ಎಲ್ಲಾ ಕಾರುಗಳಿಗೂ ಹೆಚ್ಚು ಐಷಾರಾಮಿಯಾಗಿರುವ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರ್​ ಅನ್ನು ರಮೇಶ್ ಅರವಿಂದ್ ಖರೀದಿಸಿದ್ದಾರೆ. ಇದರ ಆನ್‌ರೋಡ್ ಬೆಲೆ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು. ಕಪ್ಪು ಬಣ್ಣದ ಬ್ಲ್ಯಾಕ್ ಬ್ಯೂಟಿ ರಮೇಶ್ ಅರವಿಂದ್ ಮನೆಯ ಹೊಸ ಅತಿಥಿ.

ಇದನ್ನೂ ಓದಿ: SCAM 1770 ಪೋಸ್ಟರ್ ರಿಲೀಸ್: ನೀವು ನೋಡಲೇಬೇಕಾದ ಸಿನಿಮಾ ಎಂದ ನಿರ್ದೇಶಕ

ಬೆಂಗಳೂರಿನ ಅಧಿಕೃತ ಮರ್ಸಿಡೀಸ್ ಬೆಂಜ್ ಕಾರು ಡೀಲರ್ ಬಳಿಯಿಂದ ಕಾರು ಖರೀದಿಸಿದ್ದಾರೆ. ಕಾರು ಡೆಲಿವರಿ ಪಡೆಯಲು ರಮೇಶ್ ಅರವಿಂದ್ ಹಾಗೂ ಪತ್ನಿ ಅರ್ಚನಾ ಅವರ ಜೊತೆ ಬಂದಿದ್ದರು. ಮರ್ಸಿಡೀಸ್ ಶೋ ರೂಂನ ಸಿಬ್ಬಂದಿ ಅಲ್ಲೇ ಕೇಕ್ ಕಟ್ ಮಾಡುವ ಮೂಲಕ ಕಾರ್​ ಕೀಯನ್ನು ರಮೇಶ್ ಅರವಿಂದ್​ಗೆ ನೀಡಿದರು. ಜೊತೆಗೆ ಸರಳವಾಗಿ ಕಪ್ಪು ಸುಂದರಿಗೆ ಪೂಜೆ ಸಲ್ಲಿಸಿ, ಸ್ವತಃ ರಮೇಶ್ ಅರವಿಂದ್ ಡ್ರೈವ್ ಮಾಡುವ ಮೂಲಕ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಪತ್ನಿ, ಪುತ್ರಿಯೇ ತಮ್ಮ ಮೆಚ್ಚಿನ ಜನರೆಂದ ಅಭಿಷೇಕ್ ಬಚ್ಚನ್!

ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರ್​ನ ಸ್ಪೆಷಾಲಿಟಿ ಬಗ್ಗೆ ಹೇಳೋದಾದ್ರೆ, ತುಂಬಾ ಸೇಫ್ಟಿ ಹಾಗೂ ಆರಾಮದಾಯಕ ಪ್ರಯಾಣ, ದೂರದ ಪ್ರಯಾಣ, ನಗರದ ಜಂಜಾಟಗಳ ನಡುವೆ ಆಯಾಸವಿಲ್ಲದೇೆ ಪ್ರಯಾಣಕ್ಕೆ ಈ ಕಾರ್ ಸೂಕ್ತ.

ಇತ್ತೀಚೆಗೆಷ್ಟೇ ನಟ ಡಾಲಿ ಧನಂಜಯ್​ ಅವರಿಗೆ ಗುರುದೇವ್ ಹೊಯ್ಸಳ ಸಿನಿಮಾ ನಿರ್ಮಾಪಕ ಕಾರ್ತೀಕ್ ಹಾಗೂ ಯೋಗಿ ಜಿ. ರಾಜ್ ಅವರು ಉಡುಗೊರೆಯಾಗಿ ಕೋಟಿ ಬೆಲೆ ಬಾಳುವ ಟೊಯೋಟೊ ವೆಲ್‌ಫೈರ್‌ ಮಾಡೆಲ್‌ ಕಾರ್ ನೀಡಿದ್ದರು.

ಇದನ್ನೂ ಓದಿ: ಸೂಪರ್​ ಸ್ಟಾರ್​ಗಳೊಂದಿಗೆ ನಟನೆ: ಬಾಲಿವುಡ್​ಗೆ ಆರ್​ಆರ್​ಆರ್​ ನಟ ಜೂ. ಎನ್​ಟಿಆರ್​ ಎಂಟ್ರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.