ETV Bharat / entertainment

Allu Arjun & Trivikram: ಮತ್ತೊಮ್ಮೆ ಅಲ್ಲು ಅರ್ಜುನ್​- ತ್ರಿವಿಕ್ರಮ್​ ಕಾಂಬೋದಲ್ಲಿ ಹೊಸ ಸಿನಿಮಾ.. - etv bharat kannada

ನಿರ್ದೇಶಕ ತ್ರಿವಿಕ್ರಮ್​ ಮತ್ತು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಕಾಂಬೋದಲ್ಲಿ ಮತ್ತೊಂದು ಸಿನಿಮಾ ಫೈನಲ್​ ಆಗಿದೆ.

Allu Arjun & Trivikram
ಅಲ್ಲು ಅರ್ಜುನ್​- ತ್ರಿವಿಕ್ರಮ್
author img

By

Published : Jul 3, 2023, 1:51 PM IST

ನಿರ್ದೇಶಕ ತ್ರಿವಿಕ್ರಮ್​ ಮತ್ತು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಕಾಂಬೋದಲ್ಲಿ ಮೂಡಿಬಂದಿರುವ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಈಗಾಗಲೇ 'ಜುಲಾಯಿ', 'ಸನ್​ ಆಫ್ ಸತ್ಯಮೂರ್ತಿ' ಮತ್ತು 'ಅಲವೈಕುಂಠಪುರಂಲೋ' ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡಿವೆ. ಅದರಲ್ಲೂ 'ಅಲವೈಕುಂಠಪುರಂಲೋ' ಸಿನಿಮಾ ರಾಷ್ಟ್ರಮಟ್ಟದಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಆಗಿದೆ. ಹೀಗಾಗಿ ಈ ಜೋಡಿಗೆ ಭಾರತೀಯ ಚಿತ್ರರಂಗದಲ್ಲಿ ಒಂದೊಳ್ಳೆ ಹೆಸರಿದೆ.

ಈ ಮೂರು ಚಿತ್ರಗಳನ್ನು ಕೂಡ ಹರಿಕಾ ಹಾಸಿನಿ ಕ್ರಿಯೇಷನ್ಸ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಪಕ ರಾಧಾಕೃಷ್ಣ ನಿರ್ಮಿಸಿದ್ದಾರೆ. ಕೆಲವು ದಿನಗಳಿಂದ ಈ ಮೂವರ ಕಾಂಬಿನೇಷನ್​ನಲ್ಲಿ ಮತ್ತೊಂದು ಚಿತ್ರ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಅಲ್ಲು ಅರ್ಜುನ್​ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಅನಿಮಲ್ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಟೀ-ಸೀರಿಸ್ ನಿರ್ಮಾಣ ಸಂಸ್ಥೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಇದೀಗ ಅಲ್ಲು ತ್ರಿವಿಕ್ರಮ್​ ಜೊತೆ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: Roopesh Shetty 'ಸರ್ಕಸ್'​ ಸಕ್ಸಸ್​; 'ಬಿಗ್​ ಬಾಸ್​' ವಿನ್ನರ್​ಗೆ ಸ್ಪರ್ಧಿಗಳು ಸಾಥ್​, ಸಿಂಪಲ್​ ಸುನಿ ಪ್ರಶಂಸೆ

ಖ್ಯಾತ ನಿರ್ಮಾಪಕ ನಾಗವಂಶಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿ ಟ್ವೀಟ್ ಮಾಡಿದ್ದಾರೆ. ಈ ಬಾರಿ ಡಬಲ್ ಎಂಟರ್​ಟೈನ್​ಮೆಂಟ್ ನೊಂದಿಗೆ ಬರಲಿದ್ದಾರೆ ಎಂಬ ವಿಶೇಷ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಜೊತೆಗೆ ಈ ಸಿನಿಮಾ ಸೋಷಿಯೋ ಫ್ಯಾಂಟಸಿ ಫಾರ್ಮ್​ನಲ್ಲಿ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಸಿನಿಮಾದ ಅಧಿಕೃತ ಘೋಷಣೆಯಿಂದ ಅಲ್ಲು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಅಲ್ಲದೇ ಹೊಸ ಸಿನಿಮಾದ ಪೋಸ್ಟರ್, ವಿಡಿಯೋ ಕೂಡ ಟ್ರೆಂಡಿಂಗ್ ಆಗಿದೆ.

ಸದ್ಯ ಅಲ್ಲು ಅರ್ಜುನ್ 'ಪುಷ್ಪ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಸುಕುಮಾರ್ ಶರವೇಗದಲ್ಲಿ ಶೂಟಿಂಗ್​ ನಡೆಸುತ್ತಿದ್ದಾರೆ. 'ಪುಷ್ಪ 2' ಕಥೆ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಸುತ್ತ ಸುತ್ತುತ್ತದೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ. ಬಹುಭಾಷಾ ನಟಿ ಸಾಯಿ ಪಲ್ಲವಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈ ವರ್ಷವೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ಫ್ಲಾನ್​ ಮಾಡಿಕೊಂಡಿದೆ.

ಮತ್ತೊಂದೆಡೆ ನಿರ್ದೇಶಕ ತ್ರಿವಿಕ್ರಮ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಜೊತೆ 'ಗುಂಟೂರು ಖಾರಂ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮೊದಲಿನಿಂದಲೂ ಸಾಕಷ್ಟು ಅಡ್ಡಿಗಳು ಆಗುತ್ತಿವೆ. ಕಥೆಯಲ್ಲಿ ಬದಲಾವಣೆ, ಶೂಟಿಂಗ್ ವಿಳಂಬ, ಕಾಸ್ಟಿಂಗ್ ವಿಚಾರದಲ್ಲಿ ಗೊಂದಲ ಹೀಗೆ.. ಅಂತೂ ಇಬ್ಬರು ಈಗಿರುವ ಸಿನಿಮಾಗಳ ಶೂಟಿಂಗ್​ ಮುಗಿಸಿದ ಬಳಿಕ ಈ ಹೊಸ ಸಿನಿಮಾ ಶುರುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: 'ನಮೋ ಭೂತಾತ್ಮ 2' ಟೀಸರ್ ಬಿಡುಗಡೆಗೊಳಿಸಿ, ನಾನು ಕೋಮಲ್ ಸಾರ್ ಅಭಿಮಾನಿ ಎಂದ ಧ್ರುವ ಸರ್ಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.