ಕನ್ನಡ ಚಿತ್ರರಂಗದಲ್ಲಿ ಮಾಸ್ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಸೂರಿ ಅಭಿಷೇಕ್ ಅಂಬರೀಶ್ಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮಾಡುತ್ತಿದ್ದಾರೆ. ಅಮರ್ ನಂತರ ಅಭಿಷೇಕ್ ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಬ್ಯಾಡ್ ಮ್ಯಾನರ್ಸ್ ಈ ಸಿನಮಾ ಸೆಟ್ಟೇರಿಂದಾಗಿನಿಂದ ಸದ್ದಿಲ್ಲದೇ ಚಿತ್ರೀಕರಣ ಮಾಡುತ್ತಿದೆ. ಸದ್ಯ ಮೈಸೂರಿನಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಈ ಸಿನಿಮಾ ಅಡ್ಡಕ್ಕೆ ಟಗರು ಶಿವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸರ್ಪ್ರೈಸ್ ಭೇಟಿ ಕೊಟ್ಟಿದ್ದಾರೆ. ನಿನ್ನೆಯಷ್ಟೇ 60ನೇ ವಸಂತಕ್ಕೆ ಕಾಲಿಟ್ಟಿರೋ, ಶಿವರಾಜ್ ಕುಮಾರ್ ಮೈಸೂರಿನಲ್ಲಿದ್ದರು. ಈ ಸಮಯದಲ್ಲಿ ಟಗರು ಶಿವ, ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಅಡ್ಡಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಟ ಅಭಿಷೇಕ್ ಅಂಬರೀಶ್ ಮತ್ತು ನಿರ್ದೇಶಕ ಸೂರಿ ಶಿವರಾಜ್ ಕುಮಾರ್ ಅವರಿಗೆ ಹೂನಿನ ಹಾರ ಹಾಕುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳಿದರು.
ಶಿವರಾಜ್ಕುಮಾರ್ ಸೆಟ್ಗೆ ಬಂದಿರುವುದು ಅಚ್ಚರಿ ತಂದಿದೆ. ನಾನು ಬಾಲ್ಯದಲ್ಲಿ ಅಪ್ಪನ ಜೊತೆ ಶಿವಣ್ಣ ಮತ್ತು ಅಪ್ಪು ಅವರ ಶೂಟಿಂಗ್ ಸೆಟ್ಗೆ ಹೋಗುತ್ತಿದ್ದೆ. ಈಗ ಅವರು ನನ್ನ ಸಿನಿಮಾ ಸೆಟ್ಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಸಿನಿಮಾದ ಮೇಕಿಂಗ್ ನೋಡಿ ಶಿವಣ್ಣ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು.
ಬ್ಯಾಡ್ ಮ್ಯಾನರ್ಸ್ ಚಿತ್ರ ಕಮರ್ಷಿಯಲ್ ಕಥೆಯಾಗಿದೆ. ಈ ಚಿತ್ರಕ್ಕಾಗಿ ಅಭಿಷೇಕ್ ಅಂಬರೀಶ್ ಸಾಕಷ್ಟು ತಯಾರಿ ನಡೆಸಿ ಅಭಿನಯಿಸಿದ್ದಾರೆ. ಸುಧೀರ್ ಕೆ ಎಂ ಈ ಚಿತ್ರ ನಿರ್ಮಾಣ ಮಾಡಲಿದ್ದು, ಚರಣ್ ರಾಜ್ ಸಂಗೀತ ಇರಲಿದೆ. ಛಾಯಾಗ್ರಹಕ ಶೇಖರ್ ಕ್ಯಾಮರಾ ವರ್ಕ್, ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ : ಸಪ್ತಪದಿ ತುಳಿಯೋಕೆ ಸಜ್ಜಾದ ಕ್ರೇಜಿ ಸ್ಟಾರ್ ರವಿಚಂದ್ರನ್ ದೊಡ್ಡ ಮಗ