ETV Bharat / entertainment

'ಸ್ವೀಟ್​ 16'.. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅಭಿಷೇಕ್​ - ಐಶ್ವರ್ಯಾ ಬಚ್ಚನ್​ - ಈಟಿವಿ ಭಾರತ ಕನ್ನಡ

ಬಾಲಿವುಡ್​ ಸುಂದರ ಜೋಡಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ತಮ್ಮ ದಾಂಪತ್ಯ ಜೀವನದಲ್ಲಿ 16 ವರ್ಷ ಪೂರೈಸಿದ್ದಾರೆ.

Abhishek Bachchan, Aishwarya Bachchan
ಅಭಿಷೇಕ್​- ಐಶ್ವರ್ಯಾ ಬಚ್ಚನ್​
author img

By

Published : Apr 21, 2023, 1:39 PM IST

ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಭಾರತದಲ್ಲಿ ಅತ್ಯಂತ ಪವರ್​ ಫುಲ್​ ಮತ್ತು ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿ ಸುಂದರ ಜೀವನ ನಡೆಸುತ್ತಿರುವ ಜೋಡಿಗಳ ಸಾಲಲ್ಲಿ ಇವರು ಸೇರಿದ್ದಾರೆ. ಇಂದು ಇವರಿಬ್ಬರ ದಾಂಪತ್ಯ ಜೀವನಕ್ಕೆ 16 ವರ್ಷ ಪೂರೈಸಿದ ವಿಶೇಷ ದಿನ.

ಈ ಖುಷಿಯಲ್ಲಿರುವ ದಂಪತಿ ಸುಂದರ ಸೆಲ್ಫಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಬ್ಯೂಟಿಫುಲ್​ ಜೋಡಿ ಬಿಳಿ ಬಣ್ಣದ ಡ್ರೆಸ್​ನಲ್ಲಿ ಮಿಲಿಯನ್​ ಡಾಲರ್​ ಸ್ಮೈಲ್​ ಚೆಲ್ಲಿದ್ದಾರೆ. ಫೋಟೋಗೆ 'ಸ್ವೀಟ್​ 16' ಎಂಬುದಾಗಿ ಕ್ಯಾಪ್ಶನ್​ ಬರೆದಿದ್ದಾರೆ. ಜೊತೆಗೆ ಕೆಂಪು ಹೃದಯದ ಎಮೋಜಿ ಅನ್ನು ಸೇರಿಸಿದ್ದಾರೆ. ದಂಪತಿಯ ವಿವಾಹ ವಾರ್ಷಿಕೋತ್ಸವದ ಪೋಸ್ಟ್​ ನೆಟ್ಟಿಗರಿಂದ 5 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು ಕಮೆಂಟ್​ಗಳನ್ನು ಗಳಿಸಿದೆ.

'ಅಭಿನಂದನೆಗಳು ಮತ್ತು ಶುಭಾಶಯಗಳು' ಎಂಬುದಾಗಿ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. 'ಸುಂದರ ಜೋಡಿ' ಎಂಬುದಾಗಿ ಮತ್ತೊಬ್ಬರು ಬರೆದಿದ್ದಾರೆ. 2007 ರಲ್ಲಿ ಮುಂಬೈನಲ್ಲಿರುವ ಅಮಿತಾಭ್​ ಬಚ್ಚನ್​ ಅವರ ಬಂಗಲೆಯಾದ ಪ್ರತೀಕ್ಷಾದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ವಿವಾಹ ಸಮಾರಂಭ ನಡೆಯಿತು. ವಿವಾಹವಾದ ನಾಲ್ಕು ವರ್ಷಗಳ ನಂತರ ದಂಪತಿ 2011ರ ನವೆಂಬರ್​ 16 ರಂದು ಆರಾಧ್ಯಳಿಗೆ ಪೋಷಕರಾದರು.

ಇದನ್ನೂ ಓದಿ: 100 ದೇಶಗಳಲ್ಲಿ ಸಲ್ಮಾನ್​ ಸಿನಿಮಾ ರಿಲೀಸ್: 5,700ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ

ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದು, ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ. ಆಗಾಗ ಒಟ್ಟಿಗೆ ವಿದೇಶಕ್ಕೆ ಪ್ರವಾಸ ತೆರಳುತ್ತಾರೆ. ಅಪರೂಪಕ್ಕೆ ತಮ್ಮ ಮುದ್ದಾದ ಫೋಟೋ ಶೇರ್​ ಮಾಡುತ್ತಾರೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ಹಿಂದೆ ಸರಿಯಲ್ಲ. ಮಗಳ ಜೊತೆಗೂ ದಂಪತಿ ಹೆಚ್ಚು ಟೈಮ್​ ಸ್ಪೆಂಡ್​ ಮಾಡುತ್ತಾರೆ. ಮಗಳು ಆರಾಧ್ಯ ಬಚ್ಚನ್​ ಪ್ರಸ್ತುತ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಶನಲ್​ ಸ್ಕೂಲ್​ನಲ್ಲಿ ಆರನೇ ತರಗತಿ ಓದುತ್ತಿದ್ದಾಳೆ.

ಇನ್ನೂ ಐಶ್ವರ್ಯಾ ರೈ ಕೆಲಸದ ವಿಚಾರವಾಗಿ ಹೇಳುವುದಾದರೆ, ಪೊನ್ನಿಯನ್​ ಸೆಲ್ವಂ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೋಳ ಸಾಮ್ರಾಜ್ಯಕ್ಕಾಗಿ ನಡೆದ ಹೋರಾಟ, ರಕ್ತಚರಿತ್ರೆಯನ್ನು ಕಟ್ಟಿಕೊಡುವ ಪೊನ್ನಿಯನ್​ ಸೆಲ್ವಂ ಚಿತ್ರಕ್ಕೆ ತ್ರಿಶಾ ಜೊತೆಗೆ ಐಶ್ವರ್ಯಾ ನಾಯಕಿಯಾಗಿದ್ದಾರೆ. ಈ ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ 480 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಸಿನಿಮಾ ಕತೆಯೊಂದಿಗೆ ಮೇಕಿಂಗ್​ನಿಂದಲೂ ಗಮನ ಸೆಳೆದಿತ್ತು.

ಇದೀಗ ಸಿನಿಮಾದ ಸೀಕ್ವೆಲ್​ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ಮಣಿರತ್ನಂ ಅವರ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ವಿಕ್ರಮ್​ ಮತ್ತು ಕಾರ್ತಿ ನಾಯಕರಾಗಿ ನಟಿಸಿದ್ದಾರೆ. ಮದ್ರಾಸ್​ ಟಾಕೀಸ್​ ಮತ್ತು ಲೈಕಾ ಪ್ರೊಡಕ್ಷನ್ಸ್​ ಅಡಿಯಲ್ಲಿ ಮಣಿರತ್ನಂ ಮತ್ತು ಸುಭಾಸ್ಕರನ್​ ಅಲ್ಲಿರಾಜ ನಿರ್ಮಿಸಿರುವ ಪೊನ್ನಿಯನ್​ ಸೆಲ್ವನ್​ 2 ಏಪ್ರಿಲ್​ 28 ರಂದು ಥಿಯೇಟರ್​ಗೆ ಬರಲಿದೆ. ಮತ್ತೊಂದೆಡೆ, ಅಭಿಷೇಕ್ ಬಚ್ಚನ್​ ದಿ ಬಿಗ್ ಬುಲ್​ನ ಸೀಕ್ವೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬ್ಲೂ ಟಿಕ್ ಸೇವೆ​ ಕಳೆದು ಕೊಳ್ಳುತ್ತಿದ್ದಂತೆ ಮೆಮ್​ಗೆ ಒಳಗಾದ ಬಾಲಿವುಡ್​ ಸೆಲೆಬ್ರಿಟಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.