ETV Bharat / entertainment

ಮಾಜಿ ಪತ್ನಿಯರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅಮೀರ್​ ಖಾನ್​: ನೆಟ್ಟಿಗರು ಹೀಗಂದ್ರು! - ಅಮೀರ್​ ಖಾನ್ ಹೆಂಡತಿಯರು

ಬುಕ್​ ಲಾಂಚ್​ ಈವೆಂಟ್‌ವೊಂದಕ್ಕೆ ನಟ ಅಮೀರ್​ ಖಾನ್​ ಮಾಜಿ ಪತ್ನಿಯರ ಜೊತೆಗೂಡಿ ಆಗಮಿಸಿದ್ದರು.

Aamir Khan
ನಟ ಅಮೀರ್​ ಖಾನ್​
author img

By ETV Bharat Karnataka Team

Published : Aug 22, 2023, 8:20 PM IST

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್​ ಖಾನ್​ ಅವರು ಮುಂಬೈನಲ್ಲಿ ನಡೆದ ಬುಕ್​ ಲಾಂಚ್​ ಈವೆಂಟ್‌ವೊಂದಕ್ಕೆ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್​ ರಾವ್​ ಅವರೊಂದಿಗೆ ಆಗಮಿಸಿದ್ದರು. ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ರೀನಾ ದತ್ತಾ ಮತ್ತು ಕಿರಣ್​ ರಾವ್​ ಉತ್ತಮ ಬಾಂಧವ್ಯ ಹೊಂದಿರುವುದನ್ನು ಕಾಣಬಹುದು.

ನಟನ ಮಾಜಿ ಪತ್ನಿಯರು ನಗುನಗುತ್ತಾ ಉತ್ತಮ ಸಮಯ ಕಳೆದಿದ್ದು, ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಅವರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಅಮೀರ್​ ಖಾನ್​ ಅವರಿಗೆ ಎಷ್ಟು ಹೆಂಡತಿಯರಿದ್ದಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿಯೋರ್ವರು ಶೇರ್ ಮಾಡಿರುವ ವಿಡಿಯೋದಲ್ಲಿ, ರೀನಾ ದತ್ತಾ ಮತ್ತು ಕಿರಣ್​ ರಾವ್​ ಒಟ್ಟಿಗೆ ನಿಂತು ಮಾತನಾಡುತ್ತಾ, ನಗುತ್ತಿರುವುದನ್ನು ಕಾಣಬಹುದು. ಪಾಪರಾಜಿಯೋರ್ವರು ಒಟ್ಟಿಗೆ ಫೋಟೋ ತೆಗೆಸಿಕೊಳ್ಳುವಂತೆ ತಿಳಿಸಿದಾಗ, ಅವರು (ನಟ ಅಮೀರ್​ ಖಾನ್​) ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮೊದಲು ಅವರದ್ದು ಆಗಲಿ. ನಡುವೆ ನಾವು ಬಂದರೆ ಸರಿ ಎನಿಸುವುದಿಲ್ಲ ಎಂದು ನಗುತ್ತಾ ಕಿರಣ್​ ರಾವ್ ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ನಟ ಅಮೀರ್​ ಖಾನ್​ ಅವರ ಸಂದರ್ಶನವನ್ನು ಉಲ್ಲೇಖಿಸಿ ಮಾತನಾಡಿದ ಮಾಜಿ ಪತ್ನಿ ಕಿರಣ್​ ರಾವ್​, ಅವರ ಇಂಟರ್​ವ್ಯೂವ್​ ಮುಗಿದ ಬಳಿಕ ಕ್ಯಾಮರಾಗೆ ಪೋಸ್​ ನೀಡುವುದಾಗಿ ತಿಳಿಸಿದ್ದಾರೆ. ಕಿರಣ್​ ರಾವ್​ ಮಾತನಾಡುತ್ತಿದ್ದಂತೆ, ರೀನಾ ಅವರತ್ತ ನೋಡಿ ಮುಗುಳ್ನಕ್ಕರು. ಕಿರಣ್​ ರಾವ್​ ಹಸಿರು ಉಡುಪಿನ ಮೇಲೆ ನೀಲಿ ಶರ್ಟ್​ ಧರಿಸಿದ್ದರೆ, ರೀನಾ ದತ್ತಾ ಉದ್ದನೆಯ ಗೆರೆಗಳ ಡ್ರೆಸ್ ಧರಿಸಿ ಆಗಮಿಸಿದ್ದರು.

ವಿಡಿಯೋ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. 'ಅಮೀರ್ ಖಾನ್​ ಅವರಿಂದ ವಿಚ್ಛೇದನ ಪಡೆದ ನಂತರ ಇಬ್ಬರೂ ಬಹಳ ಸಂತೋಷವಾಗಿದ್ದಾರೆ' ಎಂದು ನೆಟ್ಟಿಗರೋರ್ವರು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, 'ನಟ ಅಮೀರ್ ಖಾನ್​ ಅವರಿಗೆ ಎಷ್ಟು ಹೆಂಡತಿಯರಿದ್ದಾರೆ?' ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರೋರ್ವರು ಕಾಮೆಂಟ್​ ಮಾಡಿ, 'ಏಕ್ತಾ ಕಪೂರ್​ ಅವರ ಟಿವಿ ಧಾರಾವಾಹಿ ಕಭಿ ಸೌತಾನ್​ ಕಭಿ ಸಹೇಲಿ' ನೆನಪಾಯ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Jacqueline Fernandez: ಕೆಂಪು ಸೀರೆಯುಟ್ಟು ಕಿಲ್ಲರ್ ಲುಕ್ - ಜಾಕ್ವೆಲಿನ್ ಫರ್ನಾಂಡಿಸ್​ ನೋಟಕ್ಕೆ ಬೆರಗಾದ ಅಭಿಮಾನಿಗಳು

ನಟ ಅಮೀರ್​ ಖಾನ್​​ 1986 ರ ಏಪ್ರಿಲ್​ 18 ರಂದು ರೀನಾ ದತ್ತಾ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳ ಹೆಸರು ಇರಾ ಮತ್ತು ಮಗ ಜುನೈದ್​. 2002ರಲ್ಲಿ ದಂಪತಿ ವಿಚ್ಛೇದನ ಪಡೆದರು. ಬಳಿಕ 2005ರ ಡಿಸೆಂಬರ್​ 28ರಂದು ಕಿರಣ್​ ರಾವ್​ ಅವರನ್ನು ಮದುವೆಯಾದರು. ದಂಪತಿಗೆ ಆಜಾದ್​​ ರಾವ್​ ಖಾನ್​ ಎಂಬ ಪುತ್ರರಿದ್ದಾರೆ. ಬಾಡಿಗೆ ತಾಯ್ತನ ಪ್ರಕ್ರಿಯೆ ಮೂಲಕ ಮಗು ಪಡೆದರು. ಈ ಜೋಡಿ 2021ರಲ್ಲಿ ವಿಚ್ಛೇದನ ಪಡೆದರು.

ಇದನ್ನೂ ಓದಿ: Samantha: ಸೀರೆಯುಟ್ಟು ನ್ಯೂಯಾರ್ಕ್​​ ಸಿಟಿ ಸುತ್ತಿದ ಸಮಂತಾ ರುತ್​ ಪ್ರಭು - ಫೋಟೋಗಳಿಗೆ ಮನಸೋತ ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.