ಬಾಲಿವುಡ್ ನಟ ಅಮೀರ್ ಖಾನ್ ತಾವು ಆಯ್ದುಕೊಳ್ಳುವ ಕಥೆ, ಅಭಿನಯದಿಂದ ಬಾಲಿವುಡ್ ಚಿತ್ರರಂಗದಲ್ಲಿ ವಿಭಿನ್ನ ಐಡೆಂಟಿಟಿ ಹೊಂದಿದ್ದಾರೆ. ಇವರು ತಮ್ಮ ನಟನೆಗೆ ಫಲಪ್ರದವಾಗಿ ಸಾಕಷ್ಟು ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಕಥೆಯಲ್ಲಿ ಸ್ಫೂರ್ತಿದಾಯಕ ಅಂಶವಿಲ್ಲದಿದ್ದರೆ ಆ ಚಿತ್ರದಲ್ಲಿ ನಟಿಸಲು ಮುಂದಾಗುವುದಿಲ್ಲ. ಆಯಾ ಪಾತ್ರಗಳಿಗೆ ಜೀವ ತುಂಬಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ಅಭಿಮಾನಿಗಳು ಅವರನ್ನು ಪ್ರೀತಿಯಿಂದ 'ಮಿಸ್ಟರ್ ಪರ್ಫೆಕ್ಟ್' ಎಂದು ಕರೆಯುತ್ತಾರೆ.
ಇತ್ತೀಚೆಗೆ ನಟನೆಯಿಂದ ಕೆಲಕಾಲ ದೂರ ಉಳಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. ಸಿನಿಮಾದಿಂದ ವಿರಾಮ ಪಡೆದಿರುವ ಅವರು ಕುಟುಂಬಸ್ಥರಿಗೆ ಸಮಯ ಕೊಡಲು ಮುಂದಾಗಿದ್ದಾರೆ. ಇದೀಗ ತಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ಪೂಜೆ ನಡೆಸಿರುವ ಫೋಟೋಗಳು ವೈರಲ್ ಆಗಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಅಮೀರ್ ಖಾನ್ ಅವರು ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಜೊತೆಗೆ ಪೂಜೆಯಲ್ಲಿ ಪಾಲ್ಗೊಂಡಿರುವುದು.
ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕಳೆದ ವರ್ಷ ಕೊನೆಗೊಳಿಸಿದ್ದರು. ಇದೀಗ ಈ ಫೋಟೋಗಳೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹೃದಯಸ್ಪರ್ಶಿ ಕ್ಷಣಗಳು, ಅಮೀರ್ ಮತ್ತು ಕಿರಣ್ ಜೋಡಿಯಾಗಿ ತುಂಬಾ ಸುಂದರವಾಗಿದ್ದು, ಅವರಿಬ್ಬರನ್ನು ಪ್ರೀತಿಸುತ್ತೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 'ಸಲಾಂ ವೆಂಕಿ' ನಾಳೆ ತೆರೆಗೆ: ಸ್ಟೈಲಿಶ್ ಲುಕ್ನಲ್ಲಿ ಗಮನ ಸೆಳೆದ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್