ETV Bharat / entertainment

ನಟನ ಪತ್ನಿಯನ್ನು ಕಟ್ಟಾಕಿ 250 ಪವನ್​ ಚಿನ್ನಾಭರಣ ಕಳವು.. ಮನೆಗೆಲಸದವನ ಗ್ಯಾಂಗ್​ನಿಂದ ಕೃತ್ಯ - ನಟನ ಪತ್ನಿಯನ್ನು ಕಟ್ಟಾಕಿ 250 ಪವನ್​ ಚಿನ್ನಾಭರಣ ಕಳವು

ಪೊಲೀಸರು ಮನೆಯಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಹಲವು ವರ್ಷಗಳಿಂದ ಅವರ ಮನೆಯಲ್ಲಿ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ನೇಪಾಳದ ರಮೇಶ್ ಎಂಬಾತ ಸ್ನೇಹಿತರೊಂದಿಗೆ ಸೇರಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ.

Tamil actor Radhakrishna
ತಮಿಳು ನಟ ರಾಧಾಕೃಷ್ಣ
author img

By

Published : Nov 12, 2022, 12:27 PM IST

ಚೆನ್ನೈ(ತಮಿಳುನಾಡು): ನಂದಂಬಾಕ್ಕಂನ ಡಿಫೆನ್ಸ್ ಕಾಲೊನಿಯಲ್ಲಿರುವ ನಟ ರಾಧಾಕೃಷ್ಣನ್ ಅವರ ಮನೆಗೆ ಮೂವರು ಅಪರಿಚಿತ ವ್ಯಕ್ತಿಗಳು ನುಗ್ಗಿ ಅವರ ಪತ್ನಿಯನ್ನು ಕಟ್ಟಿಹಾಕಿ 250 ಪವನ್ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ನಟ ರಾಧಾಕೃಷ್ಣ ಅವರ ಪತ್ನಿ ರಾಜಿ ಮನೆಯಲ್ಲಿ ಒಬ್ಬರೇ ಇದ್ದಾಗ ಏಕಾಏಕಿ ಮೂವರ ತಂಡ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ಈ ವೇಳೆ ಮನೆಯಲ್ಲಿದ್ದ 250 ಪವನ್ ಚಿನ್ನಾಭರಣ ಹಾಗೂ 3 ಲಕ್ಷ ನಗದು ದೋಚಿ ಕಳ್ಳರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಕುರಿತು ಅಕ್ಕಪಕ್ಕದ ಜನರು ಠಾಣೆಗೆ ಮಾಹಿತಿ ನೀಡಿದ್ದಾರೆ. ನಂದಂಬಾಕ್ಕಂ ಪೊಲೀಸರು ಬೆರಳಚ್ಚು ತಜ್ಞರು ಮತ್ತು ಸ್ನಿಫರ್ ಶ್ವಾನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಟ ರಾಧಾಕೃಷ್ಣ ಅವರ ಮನೆಯಲ್ಲಿ ಹಲವು ವರ್ಷಗಳಿಂದ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ನೇಪಾಳದ ರಮೇಶ್ ಎಂಬಾತ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ದರೋಡೆ ನಡೆಸಿರುವುದು. ಹಾಗೂ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ನಂದಂಬಾಕ್ಕಂ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ದರೋಡೆಕೋರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ರಾಖಿ ಸಾವಂತ್- ಶೆರ್ಲಿನ್ ಚೋಪ್ರಾ ಕೆಸರೆರಚಾಟ: ಇಬ್ಬರ ವಿರುದ್ಧವೂ ಕೇಸು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.