ಅದ್ಧೂರಿ ಮೇಕಿಂಗ್ ಹಾಗೂ ಕಂಟೆಂಟ್ ವಿಚಾರದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಚಿತ್ರರಂಗ 2023 ಸಾಲಿನಲ್ಲಿ ಯಾವ ರೀತಿ ಸಕ್ಸಸ್ ಕಾಣುತ್ತೆ ಅನ್ನೋ ಬಗ್ಗೆ ಈಗಲೇ ಲೆಕ್ಕಾಚಾರ ಆರಂಭವಾಗಿದೆ. ಶುಕ್ರವಾರದಂದು ಒಂದರಿಂದ ಮೂರು ಚಿತ್ರಗಳು ಬಿಡುಗಡೆ ಆಗುತ್ತಿದ್ದವು. ಆದ್ರೀಗ ಒಂದೇ ದಿನ 8 ರಿಂದ 10 ಸಿನಿಮಾಗಳು ಬಿಡುಗಡೆ ಆಗುವ ಸಮಯ ಬಂದಿದೆ. ಈ ವಾರ ಕೂಡ ಬರೋಬ್ಬರಿ 12 ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗಿವೆ.
ಕಾಸಿನ ಸರ, ದೂರದರ್ಶನ, 19.20.21, ಕಡಲ ತೀರದ ಭಾರ್ಗವ, ಪ್ರಜಾರಾಜ್ಯ, ಇನ್ಕಾರ್, ನಾಕು ಮುಖ, ಬೀಗ, ಅಂಬಾಸಿಡರ್, ರಾಕ್ಷಸ ತಂತ್ರ, ಒಂದಂಕೆ ಕಾಡು, ಚೇರ್ಮನ್ ಹೀಗೆ ಒಟ್ಟು 12 ಸಿನಿಮಾಗಳು ಶುಕ್ರವಾರ ಒಂದೇ ದಿನ ರಿಲೀಸ್ ಆಗಲಿದ್ದು, ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿವೆ.
ಈ 12 ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಅಭಿನಯದ ಕಾಸಿನ ಸರ ಚಿತ್ರ ಸದ್ದು ಮಾಡುತ್ತಿದೆ. ರೈತ ಹೋರಾಟಗಾರನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದು, ಅವರಿಗೆ ಬೆಂಬಲವಾಗಿ ನಿಲ್ಲುವ ಪತ್ನಿಯ ಪಾತ್ರಕ್ಕೆ ಹರ್ಷಿಕಾ ಪೂಣಚ್ಚ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಎನ್.ಆರ್. ನಂಜುಂಡೇಗೌಡ ನಿರ್ದೇಶನ ಮಾಡಿದ್ದಾರೆ.
ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಅಭಿನಯದ ದೂರದರ್ಶನ ಚಿತ್ರ ಟೈಟಲ್ನಿಂದಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಸುಕೇಶ್ ಶೆಟ್ಟಿ ನಿರ್ದೇಶನಲ್ಲಿ ಈ ಸಿನಿಮಾ ತಯಾರಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಸುಕೇಶ್ ಶೆಟ್ಟಿ. ಹಳ್ಳಿಯೊಂದಕ್ಕೆ ದೂರದರ್ಶನ (ಟಿವಿ) ಆಗಮನವಾದ ಮೇಲೆ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಹಲವು ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: ಮಾಜಿ ವಿಶ್ವ ಸುಂದರಿಗೆ ಹೃದಯಾಘಾತ.. ಎರಡು ದಿನಗಳ ಬಳಿಕ ಬಹಿರಂಗಪಡಿಸಿದ ನಟಿ ಸುಶ್ಮಿತಾ ಸೇನ್
ಇನ್ನು, ಟ್ರೇಲರ್ನಿಂದಲೇ ಕುತೂಹಲ ಮೂಡಿಸಿರೋ ಚಿತ್ರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನದ 19.20.21 ಸಿನಿಮಾ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ 19.20.21 ಸಿನಿಮಾ ಕೂಡ ನಾಳೆ ಬಿಡುಗಡೆ ಆಗುತ್ತಿದೆ. ವಿಠಲ್ ಮಲೆಕುಡಿಯ ಅವರ ಹೋರಾಟದ ಕಥೆಯೇ 19.20.21 ಸಿನಿಮಾ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ.
ಇದನ್ನೂ ಓದಿ: ವಿಠಲ್ ಮಲೆಕುಡಿಯ ನಕ್ಸಲ್ ನಂಟು ಆರೋಪ ಪ್ರಕರಣ ಆಧಾರಿತ 19.20.21 ಸಿನಿಮಾ ನಾಳೆ ತೆರೆಗೆ
ಈ ಮೂರು ಸಿನಿಮಾಗಳು ಟ್ರೇಲರ್ ಹಾಗೂ ಕಂಟೆಂಟ್ ವಿಚಾರವಾಗಿ ಸ್ಯಾಂಡಲ್ವುಡ್ನಲ್ಲಿ ಒಂದು ಮಟ್ಟಿಗೆ ಗಮನ ಸೆಳೆದಿವೆ. ಇನ್ನು, ಉಳಿದ 9 ಸಿನಿಮಾಗಳು ಹೊಸ ಪ್ರತಿಭೆಗಳ ಚಿತ್ರಗಳು. ಇಷ್ಟು ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವ ಸಿನಿಮಾ ನೋಡಬೇಕು ಅಂತಾ ಗೊಂದಲಕ್ಕೆ ಬಿಳೋದು ಗ್ಯಾರಂಟಿ.
ಇದನ್ನೂ ಓದಿ: ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಬಹುನಿರೀಕ್ಷಿತ ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆ ಮುಹೂರ್ತ ಫಿಕ್ಸ್