ETV Bharat / entertainment

ಶಾರುಖ್​ ಖಾನ್​ 'ಪಠಾಣ್' ಚಿತ್ರದಲ್ಲಿ ಟಾಮ್​ ಕ್ರೂಸ್​ ಸಾಹನ ನಿರ್ದೇಶಕ ಕೇಸಿ ಓ ನೀಲ್ - ಟಾಮ್​ ಕ್ರೂಸ್​ ಅವರ ಮಿಷನ್​ ಇಂಪಾಸಿಬಲ್

ನಮ್ಮ ಟಾಮ್​ ಕ್ರೂಸ್​ ಜೊತೆ ಕೆಲಸ ಮಾಡಿರುವ ಸಾಹಸ ನಿರ್ದೇಶಕ ಕೇಸಿ ಓ' ನೀಲ್ ಅಂತಹವರು ತಮ್ಮ ತಂಡ ಸೇರುತ್ತಿರುವುದು ನಮಗೆ ಸಂತಸ ತಂದಿದೆ ಎಂದು ನಿರ್ದೇಶಕ ಸಿದ್ಧಾರ್ಥ್​​ ಆನಂದ್​ ಹೇಳಿದ್ದಾರೆ.

ಶಾರುಖ್​ ಖಾನ್​ 'ಪಠಾಣ್' ಚಿತ್ರದಲ್ಲಿ ಟಾಮ್​ ಕ್ರೂಸ್​ ಸಾಹನ ನಿರ್ದೇಶಕ ಕೇಸಿ ಓ' ನೀಲ್

author img

By

Published : Nov 25, 2022, 3:54 PM IST

ಮುಂಬೈ: ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ ಚಿತ್ರ 'ಪಠಾಣ್'​ ಗೂ ಹಾಲಿವುಡ್​ ಸ್ಟಾರ್​ ಟಾಮ್​ ಕ್ರೂಸ್​ಗೂ ಬಹಳ ನಂಟು ಇದೆ ಎಂದು ಚಿತ್ರ ನಿರ್ದೇಶಕ ಸಿದ್ಧಾರ್ಥ್​​ ಆನಂದ್​ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧಾರ್ಥ್​​, ನಮ್ಮ ದೇಶದ ಬಹುದೊಡ್ಡ ಹೀರೋ ಶಾರುಖ್​ ಖಾನ್​ರೊಂದಿಗೆ ನೀವು ದೊಡ್ಡ ಆ್ಯಕ್ಷನ್​ ಚಿತ್ರ ಮಾಡಲು ಹೊರಟಾಗ ನಿಮಗೆ ಚಾಪಿಂಯನ್​ ತಂಡ ಬೇಕು. ಅದೃಷ್ಟವಶಾತ್​ ನಮಗೆ ಎ- ತಂಡ ಸಿಕ್ಕಿದ್ದು, ಟಾಮ್​ ಕ್ರೂಸ್​ ಜೊತೆ ಕೆಲಸ ಮಾಡಿರುವ ಸಾಹಸ ನಿರ್ದೇಶಕ ಕೇಸಿ ಓ' ನೀಲ್ ನಂತಹವರು ತಮ್ಮ ತಂಡ ಸೇರುತ್ತಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ.

ಎಮ್ಮಿ ಪ್ರಶಸ್ತಿ ನಾಮಿನೇಟ್​ ಆಗಿರುವ ಕೇಸಿ ಓ ನೀಲ್ ಹಾಲಿವುಡ್​ನ ಉತ್ತಮ ಸಾಹಸ ನಿರ್ದೇಶಕರಾಗಿದ್ದಾರೆ. ಟಾಮ್​ ಕ್ರೂಸ್​ ಅವರ ಮಿಷನ್​ ಇಂಪಾಸಿಬಲ್​, ಜಾಕ್​ ರಿಚರ್​ನಂತಹ ಸಿನಿಮಾ ಹಿಂದೆ ಇವರು ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಮಾರ್ವಲ್​ ಸ್ಟುಡಿಯೋ ಮತ್ತು ಸ್ಟೀವೆನ್​ ಸ್ಪೈಲ್ಬರ್ಗ ಜೊತೆ ಕೂಡ ಕೆಲಸ ಮಾಡಿದ್ದಾರೆ. ಪಠಾಣ್​ ಸಿನಿಮಾಕ್ಕೆ ಅವರ ಅನುಭವ ಬಂಡಾರವನ್ನು ಅವರು ತರಲಿದ್ದು, ಹಾಲಿವುಡ್​ ಬೆನ್ನೆಲುಬಾಗಿರುವ ಅವರ ಸೃಜನಶೀಲತೆ ನಿಮ್ಮನ್ನು ಹಿಡಿದಿಡುತ್ತದೆ ಎಂದಿದ್ದಾರೆ ಸಿದ್ಧಾರ್ಥ್​​​

ಪಠಾಣ್​ನಲ್ಲಿ ಕೇಸಿ ಓ' ನೀಲ್ ಸೃಷ್ಟಿ ಅತ್ಯದ್ಬುತವಾಗಿದೆ. ಈ ಚಿತ್ರದ ಕುರಿತು ನಾವು ಏನನ್ನೂ ಹೇಳುವುದಿಲ್ಲ. ಜ. 25ರಂದು ಚಿತ್ರ ಬಿಡುಗಡೆಗೊಂಡಾಗಲೇ ನೀವು ಅದನ್ನು ಅನುಭವಿಸಬೇಕು. ಕಾಸಿ ಕೂಡ ಬೆಳ್ಳಿ ಪರದೇ ನಟನಾಗಿದ್ದು, ಗಿಲ್ಡ್​ ಅವಾರ್ಡ್​ ನಾಮಿನಿ ಮತ್ತು ಮೂರು ಬಾರಿ ಟಾರಸ್​ ವರ್ಲ್ಡ್​​ ಸ್ಟಂಟ್​ ಅವಾರ್ಡ್​ ವಿನ್ನರ್​ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್​​ ಅಮೆರಿಕ ವಿಂಟರ್​ ಸೋಲ್ಡಜರ್​ ಮತ್ತು ಮಿಷನ್​ ಇಂಪಾಸಿಬಲ್​ನಲ್ಲಿ ಗೋಸ್ಟ್​(ದೆವ್ವದ) ಪಾತ್ರ ನಿರ್ವಹಿಸಿದ್ದಾರೆ.

ಮೋಷನ್​ ಪಿಕ್ಚರ್​ ಆರ್ಟ್ ಅಕಾಡೆಮಿಯ ಸದಸ್ಯರಾಗಿದ್ದಾರೆ. ಶಾರುಖ್​ ಅಭಿನಯದ ಈ ಆ್ಯಕ್ಷನ್​ ಚಿತ್ರ ಮುಂದಿನ ವರ್ಷ ಅಂದರೆ ಜನವರಿ 2023ರ ಜನವರಿ 25ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಅನುಮತಿ ಇಲ್ಲದೆ ಅಮಿತಾಬ್‌ ಬಚ್ಚನ್ ಚಿತ್ರ, ಧ್ವನಿ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.