ಹೈದರಾಬಾದ್: ಅಕ್ಟೋಬರ್ 2017 ರಲ್ಲಿ ವಿವಾಹವಾದ ಸಮಂತಾ ಮತ್ತು ಚೈತನ್ಯ ಕಳೆದ ವರ್ಷ ತಮ್ಮ ವಿಚ್ಛೇದನದ ಬಗ್ಗೆ ಘೋಷಿಸಿದ್ದರು. ಸಮಂತಾ ಜೊತೆ ಬ್ರೇಕ್ ಅಪ್ ಆದ ನಂತರ ಯಂಗ್ ಹೀರೋ ನಾಗಚೈತನ್ಯ ಕಳೆದ ಕೆಲವು ದಿನಗಳಿಂದ ಹೀರೋಯಿನ್ವೊಬ್ಬರ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದೇ ವಿಷಯ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹು ಚರ್ಚಿತವಾಗಿ ಮಾರ್ಪಟ್ಟಿದೆ.
ನಟ ಚೈತನ್ಯ ಅವರ PR ತಂಡವು ಸಾಮಾಜಿಕ ಜಾಲತಾಣದಲ್ಲಿ ನಟಿ ಸಮಂತಾಳನ್ನು ಟ್ರೋಲ್ ಮಾಡಲು ಪ್ರಾರಂಭಿಸಿತು. ಇದೆಲ್ಲವನ್ನೂ ಸ್ಯಾಮ್‌ನ PR ತಂಡ ಮಾಡುತ್ತಿದೆ ಎಂದು ದೂರಿತು .ಆದರೆ ಈ ವಿಚಾರವಾಗಿ ಇತ್ತೀಚೆಗೆ ನಟಿ ಸಮಂತಾ ಪ್ರತಿಕ್ರಿಯಿಸಿ ಟ್ರೋಲ್ ಮಾಡಿದವರಿಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.
ಓದಿ: ಇನ್ಸ್ಟಾಗ್ರಾಮ್ನಲ್ಲಿ ಮಾಜಿ ಪತಿಯನ್ನು ಅನ್ಫಾಲೋ ಮಾಡಿದ ಸಮಂತಾ.. ಆದ್ರೆ ನಾಗಚೈತನ್ಯ...?
ಹುಡುಗಿಯರ ಮೇಲೆ ವದಂತಿಗಳು ಬಂದ್ರೆ ಅದು ನಿಜ ಅಂತಾ ತಿಳಿಯುತ್ತಾರೆ. ಆದರೆ ಹುಡುಗನ ಮೇಲೆ ವದಂತಿಗಳು ಬಂದರೆ ಅದು ಹುಡುಗಿ ಮಾಡಿದ್ದಾಳೆ ಅಂತಾ ತಿಳಿದುಕೊಳ್ಳುತ್ತಾರೆ. ಇನ್ನು ಮುಂದಾದ್ರೂ ಎಚ್ಚೆತ್ತುಕೊಳ್ಳಿ ಹುಡುಗರೇ.. ಇವೆಲ್ಲವನ್ನೂ ಬಿಟ್ಟು ಮುಂದೆ ಸಾಗಿ.. ನಿಮ್ಮ ಕೆಲಸ ಮತ್ತು ಕುಟುಂಬದ ಮೇಲೆ ಗಮನಹರಿಸಿ ಎಂದು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ಅಭಿಮಾನಿಗಳ ನಡುವೆ ದೊಡ್ಡ ಗಲಾಟೆಯೇ ನಡೆದಿದ್ದು, ಇದೀಗ ಹಾಟ್ ಟಾಪಿಕ್ ಆಗಿ ಹೊರಹೊಮ್ಮಿದೆ.
ಸ್ಯಾಮ್ ಶೀಘ್ರದಲ್ಲೇ ಶಾಕುಂತಲಂ ಮತ್ತು ಯಶೋದಾ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ನಾಗ ಚೈತನ್ಯ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಮತ್ತು 'ಥ್ಯಾಂಕ್ಯೂ' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಇನ್ನೂ ಹೆಚ್ಚಿನ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿರುವ ನಾಗ ಚೈತನ್ಯ ಬ್ಯುಸಿಯಾಗಿದ್ದಾರೆ.