ETV Bharat / entertainment

ಮಿರರ್ ಸೆಲ್ಫಿ ಹಂಚಿಕೊಂಡ ಮಲೈಕಾ ಅರೋರಾ: ಅಭಿಮಾನಿಗಳು ಫಿದಾ - ಮಲೈಕಾ ಅರೋರಾ

ಸಾಮಾಜಿಕ ಮಾಧ್ಯಮದಲ್ಲಿ ಮಲೈಕಾ ಅರೋರಾ ಅವರ ಚಂದದ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ತನ್ನ ಸೌಂದರ್ಯ ಮತ್ತು ಬೋಲ್ಡ್ ಫಿಗರ್‌ಗೆ ಹೆಸರುವಾಸಿಯಾದ ಇವರು ಈಗ ಮಿರರ್ ಸೆಲ್ಫಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

Malaika Arora
ಮಲೈಕಾ ಅರೋರಾ
author img

By

Published : Sep 6, 2022, 7:07 PM IST

ಹೈದರಾಬಾದ್: ಮಲೈಕಾ ಅರೋರಾ ಬಾಲಿವುಡ್‌ನ ಮನಮೋಹಕ ಸುಂದರಿಯರಲ್ಲಿ ಒಬ್ಬರು. ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ನಟಿಯರಲ್ಲಿ ಮಲೈಕಾ ಹೆಸರು ಏಕಿದೆ ಎನ್ನುವುದನ್ನು ನಟಿ ತಮ್ಮ ಫೋಟೊಗಳ ಮೂಲಕ ಸಾಬೀತುಪಡಿಸುತ್ತಿರುತ್ತಾರೆ. ಇದೀಗ ಮಲೈಕಾ ತಮ್ಮ ಹೊಸ ಮಿರರ್ ಸೆಲ್ಫಿ ಮೂಲಕ ಸಾಮಾಜಿಕ ಜಾಲತಾಣಗಳ ಟೆಂಪರೇಚರ್ ಹೆಚ್ಚಿಸಿದ್ದಾರೆ.

ಮಲೈಕಾ ಅರೋರಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಮಿರರ್ ಸೆಲ್ಫಿ ಅಭಿಮಾನಿಗಳ ನಿದ್ದೆಗೆಡಿಸಿದೆ.​​ ಸೆಲ್ಫಿಯಲ್ಲಿ ಅವರು ಬಿಳಿ ಉಡುಗೆಯಲ್ಲಿ ತನ್ನ ಕರ್ವಿ ಫಿಗರ್ ತೋರಿಸಿದ್ದಾರೆ. ಈ ಫೋಟೋದಲ್ಲಿ ಮಲೈಕಾ ಸೌಂದರ್ಯ ಎದ್ದು ಕಾಣುತ್ತಿದೆ. ಎರಡನೇ ಚಿತ್ರದಲ್ಲಿ ಅವರು ಫೇಸ್ ಪ್ಯಾಕ್ ಧರಿಸಿರುವುದನ್ನು ಕಾಣಬಹುದು.

Malaika Arora
ಮಲೈಕಾ ಅರೋರಾ

ಮಾಜಿ ಪತಿ ಅರ್ಬಾಜ್ ಖಾನ್‌ನಿಂದ ವಿಚ್ಛೇದನದ ನಂತರ ಮಲೈಕಾ ಈಗ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ಬಾರಿ ಈ ಜೋಡಿ ಪ್ಯಾರಿಸ್‌ಗೆ ಹೋಗಿದ್ದರು. ಅಲ್ಲಿ ಮಲೈಕಾ ಗೆಳೆಯ ಅರ್ಜುನ್ ಕಪೂರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು . ಮೂಲಗಳ ಪ್ರಕಾರ ಈ ವರ್ಷಾಂತ್ಯಕ್ಕೆ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅರ್ಜುನ್ ಕಪೂರ್​-​ ಮಲೈಕಾ ಪ್ಯಾರಿಸ್​ ಪ್ರಣಯ: ಮುಂಬೈನಲ್ಲಿ ಲ್ಯಾಂಡ್​ ಆದ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.