ಲಾಸ್‌ವೇಗಾಸ್/ಅಮೆರಿಕ : "ಫಾಲು" ಎಂಬ ವೇದಿಕೆಯನ್ನ ಬಳಸಿಕೊಂಡು ಪ್ರಸಿದ್ಧಿ ಪಡೆದ ಭಾರತೀಯ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಅವರಿಗೆ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. 'ಎ ಕಲರ್‌ಫುಲ್ ವರ್ಲ್ಡ್' ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಎಂದು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಂತಸದ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫಲ್ಗುಣಿ, 'ಇಂದು ನಡೆದ ಮ್ಯಾಜಿಕ್ ಅನ್ನು ವಿವರಿಸಲು ನನ್ನ ಬಳಿ ಪದಗಳೇ ಇಲ್ಲ. ಗ್ರ್ಯಾಮಿ ಪ್ರೀಮಿಯರ್ ಸಮಾರಂಭದಲ್ಲಿ ಪ್ರಶಸ್ತಿ ಸಿಕ್ಕಿರುವುದು ಸಂತಸ ನೀಡಿದೆ. 'ಕಲರ್‌ಫುಲ್ ವರ್ಲ್ಡ್'ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಹಾಗೂ ರೆಕಾರ್ಡಿಂಗ್ ಅಕಾಡೆಮಿಗೆ ಧನ್ಯವಾದಗಳು' ಅಂತಾ ಬರೆದುಕೊಂಡಿದ್ದಾರೆ.
ಫಲ್ಗುಣಿ 2007ರಲ್ಲಿ ಸ್ವಯಂ-ಶೀರ್ಷಿಕೆಯ ಸೋಲೋ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಆಗ್ನೇಯ ಏಷ್ಯಾದ ಜಾನಪದ ಅಂಶಗಳನ್ನು ಪಾಶ್ಚಿಮಾತ್ಯ ಸಂಗೀತದೊಂದಿಗೆ ಸಂಯೋಜಿಸಿದ್ದರು. ಅಷ್ಟೇ ಅಲ್ಲ, ಫಲ್ಗುಣಿ ಶಾ ಅವರು ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರೊಂದಿಗೆ ಸಹ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಮ್ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: ಜೀವನವು ಮತ್ತೊಮ್ಮೆ ಸುಂದರವಾಗಿದೆ.. ಕೇಶಮುಂಡನದ ಫೋಟೋ ಶೇರ್ ಮಾಡಿದ ನಟಿ !