ಮಂಡ್ಯ: ಇಲ್ಲಿನ ರಾಜಕೀಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸದ್ಯ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಅಡಿಯೋ ಒಂದು ಸದ್ದು ಮಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ.
ಸಂಸದ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಅಡಿಯೋದಲ್ಲಿ 500 ಕೊಟ್ಟು ಜನರನ್ನ ಕರೆತರುವ ಬಗ್ಗೆ ಡಾನ್ ರಮೇಶ್ ಎಂಬುವವರು ಮತ್ತು ಶಿವರಾಮೇಗೌಡ ಮಧ್ಯೆ ಸಂಭಾಷಣೆ ನಡೆದಿದೆ ಎನ್ನಲಾಗಿದೆ.
43 ಸೆಕೆಂಡ್ಗಳ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ನಾವು ಯಾವಾಗಿಂದ ಬರ್ಬೇಕಣ್ಣ, ಕ್ಯಾನ್ವಾಸ್ಗೆ. ತಲೆಗೆ 500 ಕೊಡ್ತೀವಿ ಕರ್ಕೊಂಡು ಬಾ. ಗಂಗನಹಳ್ಳಿ, ಕೆಂಗನಹಳ್ಳಿಯಿಂದ ಸುಮಾರು ಜನ ಇದ್ದಾರೆ. ಬಸ್ಸುಗಳ ವ್ಯವಸ್ಥೆ ನಾವೇ ಮಾಡ್ಕೋ ಬೇಕಣ್ಣ?. ನೀವೇ ಮಾಡ್ಕೊಂಡ್ ಬನ್ನಿ ದುಡ್ಡು ಕೊಡ್ತೀನಿ. ಒಂದು ತಲೆಗೆ ಐದು ನೂರು ರೂಪಾಯಿ. ಎಲ್ಲಾ ಅಪ್ಪಾಜಿಗೌಡಂಗೆ ಜವಾಬ್ದಾರಿ ಕೊಟ್ಟಿದ್ಧೀವಿ ಎಂಬ ಸಂಬಾಷಣೆ ಒಳಗೊಂಡ ವಿಡಿಯೋ ವೈರಲ್ ಅಗಿದೆ. ಇದೀಗ ಈ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.