ETV Bharat / elections

ಅನಂತಕುಮಾರ್ ಕೋಟೆಯಲ್ಲಿ ಕಾಂಗ್ರೆಸ್​ ಭರ್ಜರಿ ರೋಡ್​ಶೋ..!! - kannada news

ಮೈತ್ರಿ ಅಭ್ಯರ್ಥಿ ಪರ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಭರ್ಜರಿ ರೋಡ್​ ಶೋ ನಡೆಸುವ ಮೂಲಕ ಮತದಾರರನ್ನುಸೆಳೆಯುವ ಯತ್ನ ಮಾಡಿದರು.

ಮೈತ್ರಿ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ದಿನೇಶ್ ಗುಂಡೂರಾವ್ ಮತಯಾಚನೆ
author img

By

Published : Apr 8, 2019, 2:10 PM IST

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದು ಭರ್ಜರಿ ರೋಡ್​ ಶೋ ನಡೆಸಿ ಮತ ಯಾಚಿಸಿದರು.

ಬೆಳಗ್ಗೆ 9.30ಕ್ಕೆ ಬನಶಂಕರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಮೈತ್ರಿ ಅಭ್ಯರ್ಥಿಯಾದ ಬಿ.ಕೆ ಹರಿಪ್ರಸಾದ್ ಪರ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋನೊಟೈಪ್ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು.

ಮೈತ್ರಿ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ದಿನೇಶ್ ಗುಂಡೂರಾವ್ ಮತಯಾಚನೆ

ದಕ್ಷಿಣ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಈ ಬಾರಿ ಹರಿಪ್ರಸಾದ್​​ಗೆ ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಅವಕಾಶ ಮಾಡಿಕೊಡುವಂತೆ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಬಿ.ಕೆ‌ ಹರಿಪ್ರಸಾದ್ ಗೆ ಮಾಜಿ ಸಚಿವೆ ಮೋಟಮ್ಮ, ಕೆಪಿಸಿಸಿ ಪ್ರಧಾನ‌ ಕಾರ್ಯಕರ್ತ ಗುರಪ್ಪ ನಾಯ್ಡು ಹಾಗೂ ಪದ್ಮನಾಭ ನಗರ ವಿಧಾನಸಭಾ ಪರಾಜಿತ ಜೆಡಿಎಸ್ ಅಭ್ಯರ್ಥಿ ಗೋಪಾಲ್ ಸೇರಿದಂತೆ ಹಲವರು ಈ ವೇಳೆ ಸಾಥ್ ನೀಡಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.