ETV Bharat / elections

ಕೈ-ಕಮಲ ಕಾರ್ಯಕರ್ತರ ಮಧ್ಯೆ ಫೈಟ್​​​​​.... ಪೊಲೀಸರಿಂದ ಲಘು ಲಾಠಿ ಪ್ರಹಾರ

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಗರದಲ್ಲಿ ಜರುಗಿದೆ.

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ
author img

By

Published : Apr 23, 2019, 7:26 PM IST

ಬಾಗಲಕೋಟೆ: ಮತಗಟ್ಟೆ ಹತ್ತಿರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಸುವ ಹಂತಕ್ಕೆ ಹೋದ ಘಟನೆ ನಗರದಲ್ಲಿ ನಡೆದಿದೆ. ಎರಡು ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದ ಹಿನ್ನೆಲೆ ಕಾರ್ಯಕರ್ತರನ್ನು ಚದುರಿಸಲು ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ನಗರದ ಪಂಕಾ ಮಸೀದಿ ಬಳಿ ಮತಗಟ್ಟೆ ಸಂಖ್ಯೆ 2ರ ಮುಂದೆ ಈ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷದ ಯುವ ಮುಖಂಡ ಗೋವಿಂದ ಬಳ್ಳಾರಿ ಎಂಬುವವರು ಮತಗಟ್ಟೆ ಮುಂದೆ ನಿಂತುಕೊಂಡು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮತ್ತು ಬೇರೆ ವ್ಯಕ್ತಿಗಳಿಗೆ ಮತಗಟ್ಟೆಯಿಂದ ದೂರು ಕಳಿಸುವದನ್ನು ಮಾಡುತ್ತಿದ್ದರಂತೆ. ಈ ವಿಚಾರವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡ ಅಶೋಕ ಲಿಂಬಾವಳಿ ಅವರ ನೇತೃತ್ವದಲ್ಲಿ ವಿರೋಧಿಸಲು ಮುಂದಾದ ಸಮಯದಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಗೆ ನಡೆದಿದೆ ಎನ್ನಲಾಗಿದೆ.

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಮಧ್ಯಪ್ರವೇಶಿಸಿದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನ ಚದುರಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಮತದಾನ ಶಾಂತಿಯುವವಾಗಿ ನಡೆಯಿತು.

Intro:AnchorBody:ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ,ಗಲಾಟೆ ಉಂಟಾಗಿರುವ ಘಟನೆ ಬಾಗಲಕೋಟೆ ನಗರದಲ್ಲಿ ಜರುಗಿದೆ.ಎರಡು ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ,ತಳ್ಳಾಟ ನಡೆದ ಹಿನ್ನೆಲೆ ಕಾರ್ಯಕರ್ತರನ್ನು ಚದುರಿಸಲು ಪೋಲಿಸ್ ರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.ಬಾಗಲಕೋಟೆ ನಗರದ ಪಂಕಾ ಮಸೀದಿ ಬಳಿ ಮತಗಟ್ಟೆ ಸಂಖ್ಯೆ 2 ರ ಮುಂದೆ ಈ ಘಟನೆ ನಡೆದಿದೆ.ಕಾಂಗ್ರೆಸ್ ಪಕ್ಷದ ಯುವ ಮುಖಂಡ ಗೋವಿಂದ ಬಳ್ಳಾರಿ ಎಂಬುವವರು ಮತ ಗಟ್ಟೆ ಮುಂದೆ ನಿಂತುಕೊಂಡು ಕಾಂಗ್ರೆಸ್ ಪಕ್ಷ ಪರ ಪ್ರಚಾರ ಮತ್ತು ಬೇರೆ ವ್ಯಕ್ತಿಗಳಿಗೆ ಮತಗಟ್ಟೆಯಿಂದ ದೂರು ಕಳಿಸುವದನ್ನು ಮಾಡುತ್ತಿದ್ದರು. ಇದನ್ನು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕೆರಳಿಸಿದೆ.ಹೀಗಾಗಿ ಬಿಜೆಪಿ ಪಕ್ಷದ ಮುಖಂಡ ಅಶೋಕ ಲಿಂಬಾವಳಿ ಅವರ ನೇತೃತ್ವದಲ್ಲಿ ವಿರೋಧಿಸಲು ಮುಂದಾದ ಸಮಯದಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಗೆ ಕಾರಣವಾಗಿದೆ.ಇದರಿಂದ ಕೂಡಿದ ಜನತೆ ನೂಕಾಟ ತಳ್ಳಾಟ ಮಾಡಿರುವದಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.ನಂತರ ಪೊಲೀಸ್ ರು ಮಧ್ಯೆ ವಹಿಸಿ ಲಘು ಲಾಠಿ ಪ್ರಹಾರ ಮಾಡಿ,ಗುಂಪುನ್ನು ಚದುರಿಸಿದ್ದಾರೆ.ಆದರೆ ಈ ಬಗ್ಗೆ ಯಾವುದೇ ದೂರು ದಾಖಲು ಆಗಿಲ್ಲ.ಪರಿಸ್ಥಿತಿ ತಿಳಿಯಾಗಿದ್ದು,ಮತದಾನ ಶಾಂತಿಯುತ ನಡೆದಿದೆ...Conclusion:Etv,Bharat,Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.