ಮಿರ್ಜಾಪುರ: 2008ರ ಮಾಲೆಗಾಂವ್ ಸ್ಫೋಟದ ಆರೋಪಿ ಸುಧಾಕರ್ ಚತುರ್ದೇವ್ ಲೋಕ ಅಖಾಡಕ್ಕೆ ಧುಮುಕಿದ್ದಾನೆ.
ಹಿಂದೂಮಹಾಸಭಾ ಬೆಂಬಲ ವಿರುವ ಸುಧಾಕರ್ ಮಿರ್ಜಾಪುರದಲ್ಲಿ ಕಣಕ್ಕಿಳಿಯುತ್ತಿದ್ದಾನೆ. ಸದ್ಯ ಈತ ಜಾಮೀನಿನ ಮೇಲೆ ಹೊರಬಂದಿದ್ದಾನೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗ್ಯ ಠಾಕೂರ್ ಹಾಗೂ ಕರ್ನಲ್ ಪುರೋಹಿತ್ ಜತೆ ಹತ್ತು ವರ್ಷಗಳ ಕಾಲ ಸಜೆ ಅನುಭವಿಸಿರುವ ಈತ ತಾನು ಚುನಾವಣೆಯಲ್ಲಿ ಗೆದ್ದೇ ತೀರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾನೆ.
ಅಭಿವೃದ್ಧಿಯು ನನ್ನ ಮೂಲ ಮಂತ್ರ. ಮಿರ್ಜಾಪುರ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಅದಕ್ಕಾಗಿ ನನ್ನನ್ನು ಆಯ್ಕೆ ಮಾಡಿ ಎಂದು ಮತದಾರರಿಗೆ ಮನವಿ ಮಾಡುತ್ತಿದ್ದಾನೆ.