ETV Bharat / elections

18 ತಿಂಗಳ ಸುದೀರ್ಘ ಅಧ್ಯಯನ, ದಿನಕ್ಕೆ ಹತ್ತು ಲಕ್ಷ ಖಾತೆ ನಿಷ್ಕ್ರಿಯ...! ಫೇಸ್​​ಬುಕ್​ನಿಂದ ಬೃಹತ್ ಸ್ವಚ್ಛತಾ ಕಾರ್ಯ

ಕೃತಕ ಬುದ್ದಿಮತ್ತೆ ಹಾಗೂ ಮಷಿನ್ ಲರ್ನಿಂಗ್​ ಮೂಲಕ ಪ್ರತಿದಿನ ಹತ್ತು ಲಕ್ಷ ಖಾತೆಗಳನ್ನು ಪ್ರತಿದಿನ ಬ್ಲಾಕ್ ಮಾಡಲಾಗುತ್ತಿದೆ.

ಫೇಸ್​​ಬುಕ್​
author img

By

Published : Apr 9, 2019, 9:13 AM IST

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್​ಬುಕ್ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದೆ.

ಫೇಸ್​ಬುಕ್ ಸಂಸ್ಥೆ ಪ್ರತಿದಿನ ಲಕ್ಷಗಟ್ಟಲೆ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿದೆ. ಕೃತಕ ಬುದ್ದಿಮತ್ತೆ(ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​) ಹಾಗೂ ಮಷಿನ್ ಲರ್ನಿಂಗ್​ ಮೂಲಕ ನಕಲಿ ಖಾತೆಗಳನ್ನು ಫೇಸ್​ಬುಕ್​ ಬ್ಲಾಕ್ ಮಾಡುತ್ತಿದೆ.

ಸರಳ ಹಾಗೂ ಪಾರದರ್ಶಕ ಚುನಾವಣೆ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಫೇಸ್​ಬುಕ್​​ ಸಂಸ್ಥೆ ಈ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ.

ಕೃತಕ ಬುದ್ದಿಮತ್ತೆ ಹಾಗೂ ಮಷಿನ್ ಲರ್ನಿಂಗ್​ ಮೂಲಕ ಪ್ರತಿದಿನ ಹತ್ತು ಲಕ್ಷ ಖಾತೆಗಳನ್ನು ಪ್ರತಿದಿನ ಬ್ಲಾಕ್ ಮಾಡಲಾಗುತ್ತಿದೆ. ಅಶ್ಲೀಲ, ಅಸಭ್ಯ,ಆಕ್ಷೇಪಾರ್ಹ ಪೋಸ್ಟ್​ಗಳಿರುವ ಖಾತೆಗಳನ್ನು ತಕ್ಷಣವೇ ಗುರುತಿಸಿ ಬ್ಲಾಕ್ ಮಾಡುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ.

ಕಳೆದ 18 ತಿಂಗಳಿನಿಂದ ಸುದೀರ್ಘವಾಗಿ ಅಧ್ಯಯನ ನಡೆಸಿ ಎಲ್ಲ ವಿವರವನ್ನು ಪಡೆದುಕೊಂಡು ಖಾತೆಗಳ ನಿಷ್ಕ್ರಿಯಗೊಳಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡುವ ಎಲ್ಲ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಕಳೆದ ವಾರ ಫೇಸ್​ಬುಕ್ 700 ಪೇಜ್​ಗಳನ್ನು ತೆಗೆದುಹಾಕಿತ್ತು. ಇದು ಸುಳ್ಳು ಸುದ್ದಿ ಹರಡುವ ವಿರುದ್ಧದ ಹೋರಾಟದ ಮಹತ್ತರ ಹೆಜ್ಜೆಯಾಗಿತ್ತು.

Intro:Body:

18 ತಿಂಗಳ ಸುದೀರ್ಘ ಅಧ್ಯಯನ, ದಿನಕ್ಕೆ ಹತ್ತು ಲಕ್ಷ ಖಾತೆ ನಿಷ್ಕ್ರಿಯ...! ಫೇಸ್​​ಬುಕ್​ನಿಂದ ಬೃಹತ್ ಸ್ವಚ್ಛತಾ ಕಾರ್ಯ

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್​ಬುಕ್ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದೆ.

ಫೇಸ್​ಬುಕ್ ಸಂಸ್ಥೆ ಪ್ರತಿದಿನ ಲಕ್ಷಗಟ್ಟಲೆ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಮಷಿನ್ ಲರ್ನಿಂಗ್​ ಮೂಲಕ ನಕಲಿ ಖಾತೆಗಳನ್ನು ಫೇಸ್​ಬುಕ್​ ಬ್ಲಾಕ್ ಮಾಡುತ್ತಿದೆ.

ಸರಳ ಹಾಗೂ ಪಾರದರ್ಶಕ ಚುನಾವಣೆ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಫೇಸ್​ಬುಕ್​​ ಸಂಸ್ಥೆ ಈ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಹಾಗೂ ಮಷಿನ್ ಲರ್ನಿಂಗ್​ ಮೂಲಕ ಪ್ರತಿದಿನ ಹತ್ತು ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ. ಅಶ್ಲೀಲ, ಅಸಭ್ಯ,ಆಕ್ಷೇಪಾರ್ಹ ಪೋಸ್ಟ್​ಗಳಿರುವ ಖಾತೆಗಳನ್ನು ತಕ್ಷಣವೇ ಗುರುತಿಸಿ ಬ್ಲಾಕ್ ಮಾಡುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ.

ಕಳೆದ 18 ತಿಂಗಳಿನಿಂದ ಸುದೀರ್ಘವಾಗಿ ಅಧ್ಯಯನ ನಡೆಸಿ ಎಲ್ಲ ವಿವರವನ್ನು ಪಡೆದುಕೊಂಡು ಖಾತೆಗಳ ನಿಷ್ಕ್ರಿಯಗೊಳಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡುವ ಎಲ್ಲ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಕಳೆದ ವಾರ ಫೇಸ್​ಬುಕ್ 700 ಪೇಜ್​ಗಳನ್ನು ತೆಗೆದುಹಾಕಿತ್ತು. ಇದು ಸುಳ್ಳು ಸುದ್ದಿ ಹರಡುವ ವಿರುದ್ಧದ ಹೋರಾಟದ ಮಹತ್ತರ ಹೆಜ್ಜೆಯಾಗಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.