ನಾಗೌರ್ (ರಾಜಸ್ಥಾನ): ದಲಿತ ಯುವತಿ ಮೇಲೆ ರಾಜಸ್ಥಾನದ ನಾಗೌರ್ನ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ಮರ್ಮಾಂಗಕ್ಕೆ ಬಾಟಲಿಗಳನ್ನು ತುರುಕಿ ವಿಕೃತಿ ಮೆರೆದಿರುವ ಘಟನೆ ಪರ್ಬಾಸ್ತಾರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜನವರಿ 19ರಂದು ನಾಗೌರ್ನ ಗಂಗ್ವಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಮುಕರು ಬೆದರಿಕೆ ಹಾಕಿದ್ದರಿಂದ ಹೆದರಿಕೊಂಡು ಸಂತ್ರಸ್ತೆ ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಐದು ದಿನಗಳ ಬಳಿಕ ಮಗಳ ಪರಿಸ್ಥಿತಿ ತಿಳಿದ ಪೋಷಕರು ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ: ಕೊಳ್ಳೇಗಾಲದಲ್ಲಿ ಆರೋಪಿ ಅರೆಸ್ಟ್
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪರ್ಬಾಸ್ತಾರ್ ಠಾಣಾ ಪೊಲೀಸರು, ಪರಾರಿಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಪಂಚುರಾಮ್ ಜಾಟ್, ಕನರಾಮ್ ಜಾಟ್ ಮತ್ತು ಶ್ರವಣ್ ಗುರ್ಜಾರ್ ಎಂದು ಗುರುತಿಸಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.