ETV Bharat / crime

ಟಿಕ್ ಟಾಕ್ ವಿಡಿಯೋ ಮೂಲಕ ಲವ್‌; ಪ್ರಿಯತಮೆಯ ನಿಗೂಢ ಸಾವಿನ ಸುದ್ದಿ ಕೇಳಿ ಪ್ರಿಯಕರ ಆತ್ಮಹತ್ಯೆ - TikTalk video

ಟಿಕ್‌ ಟಾಕ್‌ ವಿಡಿಯೋ(TikTalk video) ಮೂಲಕ ತಾನು ಪ್ರೀತಿಸುತ್ತಿದ್ದ ಬಾಲಕಿಯ ಸಾವಿನ ಸುದ್ದಿ ಕೇಳಿ ಪ್ರಿಯಕರನೂ ನೇಣಿಗೆ ಶರಣಾಗಿರುವ (A boy commits suicide in Bengaluru) ಘಟನೆ ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ನಡೆದಿದೆ.

young boy suicide in yelahanka, bangalore
ಟಿಕ್ ಟಾಕ್ ವಿಡಿಯೋ ಮೂಲಕ ಲವ್‌; ಪ್ರೀತಿಸುತ್ತಿದ್ದ ಹುಡುಗಿ ಸಾವಿನ ಸುದ್ದಿ ಕೇಳಿ ಪ್ರಿಯಕರ ಆತ್ಮಹತ್ಯೆ
author img

By

Published : Nov 22, 2021, 5:40 PM IST

ಬೆಂಗಳೂರು: ಟಿಕ್ ಟಾಕ್‌ ವಿಡಿಯೋ(TikTalk video) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ಗಳಾಗಿದ್ದ ಪ್ರೇಮಿಗಳಲ್ಲಿ ಹುಡುಗಿ ಇಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಿಯಕರ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ (A boy commits suicide in Bengaluru) ನಡೆದಿದೆ. 20 ವರ್ಷದ ಮನೋಜ್‌ ಹಾಗೂ 17 ವರ್ಷದ ರಕ್ಷಿತಾ ಮೃತರು.

ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾಗಿದ್ದ ರಕ್ಷಿತಾ (17) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಚಿಕ್ಕಸಂದ್ರದ ವರಮಹಾಲಕ್ಷ್ಮಿ ಮತ್ತು ಕೃಷ್ಣಪ್ಪನವರ ಪುತ್ರಿ ಮೃತ ರಕ್ಷಿತ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಟಿಕ್ ಟಾಕ್‌ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಅಪ್ಪ-ಅಮ್ಮ ಮದುವೆಗೆಂದು ತೆರಳಿದ್ದಾಗ ಈಕೆ ಮನೆಯಲ್ಲಿ ನೇಣಿಗೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ಬಾಲಕಿ ರಕ್ಷಿತಾ ಮತ್ತು ಮನೋಜ್ (20) ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಮನೋಜ್‌ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ಯುವಕ ಯಲಹಂಕ ತಾಲೂಕಿನ ಹನಿಯೂರು ಗ್ರಾಮದ ನಿವಾಸಿಯಾಗಿದ್ದಾನೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.