ಬೆಂಗಳೂರು: ಪಬ್ಜಿ ಆಟಕ್ಕೆ ವಿದ್ಯಾರ್ಥಿ ಬಲಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಭಾರತಿದಾಸನ್ ನಗರದಲ್ಲಿ ನಡೆದಿದೆ.
ಓದಿ: 14 ವರ್ಷದ ಬಾಲಕನ 'ಆಟ' ಕಸಿದುಕೊಂಡ PUBG ಚಟ!
ಮಾನಸಿಕವಾಗಿ ಕುಗ್ಗಿ ತಾಯಿ ಸೀರೆಯಿಂದ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಐಟಿಐ ವ್ಯಾಸಂಗ ಮಾಡುತ್ತಿದ್ದ ರವಿ (16) ಮೃತ ವಿದ್ಯಾರ್ಥಿ. ಆನ್ಲೈನ್ ತರಗತಿಗಾಗಿ ಮೊಬೈಲ್ ಬಳಸುತ್ತಿದ್ದ ರವಿ ಯಾವಾಗಲೂ ಪಬ್ಜಿ ಆಟಕ್ಕೆ ದಾಸನಾಗಿದ್ದ ಎನ್ನಲಾಗಿದೆ.
ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ತಾಯಿ ಜಯಲಕ್ಷ್ಮಿ ಕಷ್ಟಪಟ್ಟು ಓದಿಸುತ್ತಿದ್ದರು. ಹಿರಿಯ ಮಗ ವಿಶ್ವ (18) ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ರವಿಗೆ ತಾಯಿ ಸೇರಿದಂತೆ ಕುಟುಂಬದವರು ಬುದ್ಧಿವಾದ ಹೇಳುತ್ತಿದ್ದರು ಯಾವಾಗಲೂ ಆಟದಲ್ಲಿ ಮುಳುಗಿರುತ್ತಿದ್ದನಂತೆ. ನಿನ್ನೆ ತಾಯಿ ಜಯಲಕ್ಷ್ಮಿ ಗಾರೆ ಕೆಲಸ ಮುಗಿಸಿ ಮನೆ ಬಳಿ ಬಂದಾಗ ಬಾಗಿಲು ತೆರೆದಿರಲಿಲ್ಲ.
ಯುವಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಪಬ್ಜಿಯಂತಹ ಕ್ರೀಡಾ ಅಪ್ಲಿಕೇಶನ್‌ಗಳನ್ನು (ಆ್ಯಪ್‌ಗಳು) ಬ್ಯಾನ್ ಮಾಡಬೇಕು ಎಂದು ಮೃತನ ಪೋಷಕರ ಒತ್ತಾಯ ಮಾಡಿದ್ದಾರೆ. ಘಟನೆ ವಿಷಯ ತಿಳಿದು ಹೊಸೂರು ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.